ಕಾನ್ ಸ್ಟೇಬಲ್ ಕಿರುಕುಳಕ್ಕೆ ಬೇಸತ್ತು ಇಪ್ಪತ್ನಾಲ್ಕರ ಯುವಕ ಆತ್ಮಹತ್ಯೆ
ಕಲಬುರಗಿ, ಜನವರಿ 16: ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಇಪ್ಪತ್ನಾಲ್ಕು ವರ್ಷದ ರಮೇಶ್ ತಳವಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಮನೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೇವರ್ಗಿ ಪಟ್ಟಣದಲ್ಲಿ ರಮೇಶ್ ಕಿರಾಣಿ ಅಂಗಡಿ ನಡೆಸುತ್ತಿದ್ದ. ಜೇವರ್ಗಿ ಠಾಣೆಯ ಕಾನ್ ಸ್ಟೇಬಲ್ ವೊಬ್ಬರು ಕಿರುಕುಳ ನೀಡುತ್ತಿದ್ದರು ಎಂದು ಮೃತನ ಸಂಬಂಧಿಕರು ಆರೋಪ ಮಾಡಿದ್ದಾರೆ.

ನಿತ್ಯವೂ ರಮೇಶ್ ತಳವಾರ್ ಮನೆಗೆ ಬಂದು ಕಾನ್ ಸ್ಟೇಬಲ್ ಕಿರುಕುಳ ನೀಡುತ್ತಿದ್ದರು ಎಂಬುದು ಆರೋಪ. ಇನ್ನು ಆ ಕಾನ್ ಸ್ಟೇಬಲ್ ಹೆಸರು ಮಲ್ಲು ಬಾಸಗಿ. ಕೆಲ ದಿನಗಳ ಹಿಂದೆ ಬೈಕ್ ನಲ್ಲಿ ರಮೇಶ್ ತಳವಾರ್ ತ್ರಿಬಲ್ ರೈಡಿಂಗ್ ಹೋಗಿದ್ದಕ್ಕಾಗಿ ಕಿರುಕುಳ ನೀಡುತ್ತಿದ್ದರಂತೆ ಕಾನ್ ಸ್ಟೇಬಲ್ ಮಲ್ಲು ಬಾಸಗಿ. ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ.












Click it and Unblock the Notifications