ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿಗಾಗಿ ಹಾಹಾಕಾರ; ಕಳ್ಳತನ ತಪ್ಪಿಸಲು ಬೀಗ ಜಡಿದ ಜನರು!

|
Google Oneindia Kannada News

ಜೈಪುರ, ಜೂನ್ 11; ಅಚ್ಚರಿಯಾದರೂ ಇದು ಸತ್ಯ. ನೀರಿನ ಕಳ್ಳತನ ತಪ್ಪಿಸಲು ಜನರು ನೀರು ಸಂಗ್ರಹ ಮಾಡಿದ ಡ್ರಂಗಳಿಗೆ ಬೀಗ ಜಡಿದಿದ್ದಾರೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಇದರಿಂದಲೇ ಊಹಿಸಬಹುದಾಗಿದೆ.

ರಾಜಸ್ಥಾನ ರಾಜ್ಯದ ಅಜ್ಮೀರ್ ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಕಷ್ಟಪಟ್ಟು ಸಂಗ್ರಹ ಮಾಡಿರುವ ನೀರನ್ನು ಸಹ ಕಳ್ಳತನ ಮಾಡುವುದರಿಂದ ಡ್ರಂಗಳಿಗೆ ಬೀಗ ಹಾಕಿದ್ದಾರೆ.

ತುಮಕೂರು; ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ತುಮಕೂರು; ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು

"12 ವರ್ಷಗಳಿಂದ ನಾವು ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಎರಡು ದಿನಕ್ಕೊಮ್ಮೆ ಟ್ಯಾಂಕರ್‌ ಮೂಲಕ ನೀರು ಬರುತ್ತದೆ. ಸಂಗ್ರಹವಾದ ನೀರನ್ನು ಕಳ್ಳತನ ಮಾಡದಿರಲಿ ಎಂದು ನಾವು ಬೀಗ ಹಾಕುತ್ತೇವೆ" ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ! ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ!

Water crisis

ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಇದೆ ಎಂಬುದನ್ನು ಅಧಿಕಾರಿಗಳು ಸಹ ಒಪ್ಪಿಕೊಳ್ಳುತ್ತಾರೆ. "48 ರಿಂದ 72 ಗಂಟೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವು ಗ್ರಾಮಗಳಿಗೆ 72 ಗಂಟೆಗಳ ಕಾಲ ನೀರು ಪೂರೈಕೆ ಆಗುವುದಿಲ್ಲ" ಎಂದು ಅಧಿಕಾರಿಗಳು ಹೇಳಿದ್ದಾರೆ.

"ವಿದ್ಯುತ್ ಸಮಸ್ಯೆ, ಪೈಪ್ ಲೈನ್ ಸಮಸ್ಯೆಯ ಕಾರಣ ಕೆಲವು ಬಾರಿ ಗ್ರಾಮಗಳಿಗೆ ನೀರನ್ನು ಪೂರೈಕೆ ಮಾಡುವುದು ತಡವಾಗುತ್ತದೆ" ಎಂದು ಇಂಜಿನಿಯರಿಂಗ್ ವಿಭಾಗದ ಸೂಪರಿಟೆಂಡೆಟ್ ಹೇಳಿದ್ದಾರೆ.

ಸ್ಥಳೀಯ ಆಡಳಿತ ಅಜ್ಮೀರ್‌ನ 586 ಗ್ರಾಮಗಳನ್ನು ನೀರಿನ ಕೊರತೆ ಇರುವ ಗ್ರಾಮ ಎಂದು ಗುರುತಿಸಿದೆ. ಈ ಗ್ರಾಮಗಳಿಗೆ ಟ್ಯಾಂಕರ್ ಮೂಲಕವೇ ನೀರನ್ನು ಸರಬರಾಜು ಮಾಡಲಾಗುತ್ತದೆ. ಪಂಚಾಯಿತಿ ಮಟ್ಟದಲ್ಲಿ ಸಹ ನೀರನ್ನು ಹೊಂದಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಟ್ಯಾಂಕರ್ ಮೂಲಕ ಸರಬರಾಜು ಮಾಡುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Rural Area

ಜನರು ನೀರನ್ನು ಕಾಪಾಡಿಕೊಳ್ಳಲು ಬೀಗ ಹಾಕುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದ ಹೀಗೆಯೇ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಇದ್ದಾಗ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ಅವಲೋಕನ ಮಾಡುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ನೀರಿನ ಕೊರತೆ ಇರುವುದರಿಂದ ಗ್ರಾಮೀಣ ಭಾಗದ ಜನರು ಸರ್ಕಾರ ಪೂರೈಕೆ ಮಾಡುವ ಟ್ಯಾಂಕರ್ ನೀರನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಕಷ್ಟಪಟ್ಟು ಸಂಗ್ರಹಿಸಿದ ನೀರು ಕಳ್ಳರ ಪಾಲಾಗದಿರಲಿ ಎಂದು ಡ್ರಂಗೆ ಬೀಗ ಹಾಕುತ್ತಾರೆ.

English summary
Residents of Ajmer's rural area of Rajasthan put lock on their water containers in view of water crisis. We are facing this issue for past 12 years. We store water and put lock on it so it doesn't stolen said women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X