Breaking: ಬಾಬಾ ರಾಮ್‌ದೇವ್ ಪತಂಜಲಿ ಡೈರೀಸ್‌ನ ಸಿಇಒ ಸುನಿಲ್ ಬನ್ಸಾಲ್ ಕೋವಿಡ್‌ಗೆ ಬಲಿ
ಜೈಪುರ, ಮೇ 24: ಕೊರೊನಾ ಸೋಂಕಿನಿಂದಾಗಿ ಯೋಗ ಗುರು ಬಾಬಾ ರಾಮ್ದೇವ್ರ ಪತಂಜಲಿ ಆಯುರ್ವೇದ ಡೈರಿ ಬ್ಯುಸಿನೆಸ್ ಸಿಇಒ ಸುನಿಲ್ ಬನ್ಸಾಲ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
57 ನೇ ವಯಸ್ಸಿನ ಸುನಿಲ್ ಬನ್ಸಾಲ್‌ರಿಗೆ ಕೊರೊನಾ ಕಾರಣದಿಂದಾಗಿ ಶ್ವಾಸಕೋಶಕ್ಕೆ ತೀವ್ರವಾದ ಹಾನಿ ಹಾಗೂ ಮೆದುಳಿನಲ್ಲಿ ರಕ್ತಸ್ರಾವವಾಗಿತ್ತು ಎಂದು ಹೇಳಲಾಗಿದೆ.
ಮೇ 19ರಂದು ಬನ್ಸಾಲ್ ನಿಧನರಾದರೂ ರಾಮದೇವ್ ಅಲೋಪತಿ ಔಷಧಿಗಳು ಮತ್ತು ಕೋವಿಡ್ ಬಗ್ಗೆ ನೀಡಿದ ಹೇಳಿಕೆಗಳ ವಿವಾದದ ಹಿನ್ನೆಲೆ ಈಗ ಬನ್ಸಾಲ್ ಸಾವು ಮುಂಚೂಣಿಗೆ ಬಂದಿದೆ.

ಅಲೋಪತಿ ಔಷಧ ಸೇವಿಸಿದ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಡಿಸಿಜಿಐ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಸೇರಿದಂತೆ ಇತರೆ ಔಷಧಗಳು ಕೊರೊನಾ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ ಎಂಬ ಬಾಬಾ ರಾಮ್ ದೇವ್ ಹೇಳಿಕೆ ನೀಡಿದ್ದು ಇದು ವ್ಯಾಪಕ ಟೀಕೆಗೆ ಒಳಗಾಗಿತ್ತು.
ಡೈರಿ ವಿಜ್ಞಾನದಲ್ಲಿ ತಜ್ಞರಾದ ಬನ್ಸಾಲ್, 2018ರಲ್ಲಿ ಪತಂಜಲಿಯ ಡೈರಿ ವ್ಯವಹಾರದ ಉಸ್ತುವಾರಿ ವಹಿಸಿಕೊಂಡರು. ಹಸುವಿನ ಹಾಲು, ಮೊಸರು, ಮಜ್ಜಿಗೆ ಮೊದಲಾದ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಯೋಜನೆಯನ್ನು ಕಂಪನಿಯು ಪ್ರಕಟಿಸಿತ್ತು.
ಇನ್ನು ಬನ್ಸಾಲ್ ಕಳೆದ ಕೆಲವು ದಿನಗಳಿಂದ ಇಸಿಎಂಒ (Extracorporeal Membrane Oxygenation machines) ನಲ್ಲಿದ್ದರು ಎಂದು ಸ್ನೇಹಿತರು ಹೇಳಿದ್ದಾರೆ. ಹೃದಯ ಮತ್ತು ಶ್ವಾಸಕೋಶದ ವೈಫಲ್ಯದ ಸಮಯದಲ್ಲಿ ಇಸಿಎಂಒನಲ್ಲಿ ರೋಗಿಯನ್ನು ಇರಿಸಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications