ಪಬ್ಜಿ ಆಡುತ್ತಿದ್ದ ಅಪ್ರಾಪ್ತ ಬಾಲಕ ಏಕಾಏಕಿ ನೇಣಿಗೆ ಶರಣು
ಕೋಟಾ, ಜೂನ್ 7: ಬೆಳಗಿನ ಜಾವ 3ಗಂಟೆಯರೆಗೂ ಮೊಬೈಲ್‌ನಲ್ಲಿ ಪಬ್‌ಜಿ ಆಡುತ್ತಿದ್ದ ಅಪ್ರಾಪ್ತ ಬಾಲಕ ಏಕಾಏಕಿ ನೇಣಿಗೆ ಶರಣಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.
Recommended Video
ಆತ ಆರ್ಮಿ ಅಧಿಕಾರಿಯ ಮಗನಾಗಿದ್ದು 9ನೇ ತರಗತಿಯಲ್ಲಿ ಓದುತ್ತಿದ್ದ, ಆತ ತನ್ನ ತಾಯಿಯ ಮೊಬೈಲ್‌ನಲ್ಲಿ ಮೂರು ದಿನಗಳ ಹಿಂದೆ ಗೇಮ್ ಡೌನ್‌ಲೋಡ್ ಮಾಡಿಕೊಂಡಿದ್ದ, ಕಳೆದ ಮೂರು ದಿನಗಳಿಂದ ಗೇಮ್ ಅನ್ನು ನಿರಂತರವಾಗಿ ಆಡುತ್ತಲೇ ಇದ್ದ.
ಆತನ ಸಹೋದರ ಓದುತ್ತಿದ್ದ ಕೋಣೆಯಲ್ಲೇ ಬೆಳಗಿನ ಜಾವ ಮೂರು ಗಂಟೆಯವರೆಗೂ ಗೇಮ್ ಆಡಿದ್ದ ಬಳಿಕ ಮಲಗಿಕೊಳ್ಳುತ್ತೇನೆ ಎಂದು ರೂಮಿಗೆ ಹೋಗಿದ್ದ. ಆತ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪೋಷಕರು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಒಳಗೇ ಆತ ಮೃತಪಟ್ಟಿದ್ದ.

ಡೆತ್ ನೋಟ್ ಎಲ್ಲಿಯೂ ಪತ್ತೆಯಾಗಿಲ್ಲ. ಯುವಕ ಗಾಂಧಿ ಕಾಲೊನಿಯಲ್ಲಿ ತನ್ನ ತಾಯಿ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದ.ಅವರ ತಂದೆಗೆ ಇತ್ತೀಚೆಗಷ್ಟೇ ಅರುಣಾಚಲಪ್ರದೇಶಕ್ಕೆ ಪೋಸ್ಟಿಂಗ್ ಆಗಿತ್ತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಟೊಪ್ಸಿ ವರದಿ ಇನ್ನು ಬರಬೇಕಿದೆ.












Click it and Unblock the Notifications