ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಬಿಕ್ಕಟ್ಟು; ವಿಶ್ವಾಸಮತ ಯಾಚನೆಗೆ ಗೆಹ್ಲೋಟ್ ಒಪ್ಪಿಗೆ!

|
Google Oneindia Kannada News

ಜೈಪುರ, ಜುಲೈ 19 : ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಅಂತಿಮ ಹಂತ ತಲುಪಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಿನ ವಾರ ವಿಶ್ವಾಸಮತಯಾಚನೆ ಮಾಡಲು ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆಯಲಿದ್ದಾರೆ.

Recommended Video

ಕೊರೊನ ವಿರುದ್ಧದ ಯುದ್ಧದಲ್ಲಿ ಗೆದ್ದ Sharath Bacche Gowda | Oneindia Kannada

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಭೇಟಿಯಾಗಿದ್ದರು. ಪ್ರಾದೇಶಿಕ ಪಕ್ಷದ ಇಬ್ಬರು ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಕೆಲವೇ ಕ್ಷಣಗಳಲ್ಲಿ ಸಿಎಂ ರಾಜ್ಯಪಾಲರನ್ನು ಭೇಟಿಯಾಗಿದ್ದರು.

ರಾಜಸ್ಥಾನ ಬಿಕ್ಕಟ್ಟು; ಸಚಿನ್ ಪೈಲೆಟ್ ಬಣಕ್ಕೆ ತಾತ್ಕಾಲಿಕ ನೆಮ್ಮದಿ! ರಾಜಸ್ಥಾನ ಬಿಕ್ಕಟ್ಟು; ಸಚಿನ್ ಪೈಲೆಟ್ ಬಣಕ್ಕೆ ತಾತ್ಕಾಲಿಕ ನೆಮ್ಮದಿ!

ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ರಾಷ್ಟ್ರೀಯ ಸುದ್ದಿ ವಾಹಿನಿಗಳು ಮುಂದಿನವಾರ ಅಶೋಕ್ ಗೆಹ್ಲೋಟ್ ವಿಶೇಷ ವಿಧಾನಸಭೆ ಅಧಿವೇಶ ಕರೆಯಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿ ಮಾಡಿವೆ.

ರಾಜಸ್ಥಾನ ಬಿಕ್ಕಟ್ಟು; ಹೈಕೋರ್ಟ್ ಮೊರೆ ಹೋದ ಸಚಿನ್ ಪೈಲೆಟ್ ರಾಜಸ್ಥಾನ ಬಿಕ್ಕಟ್ಟು; ಹೈಕೋರ್ಟ್ ಮೊರೆ ಹೋದ ಸಚಿನ್ ಪೈಲೆಟ್

ಸಚಿನ್ ಪೈಲೆಟ್ ಸೇರಿದಂತೆ 18 ಶಾಸಕರ ಅನರ್ಹತೆ ಬಗ್ಗೆ ಮಂಗಳವಾರ ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡುವ ನಿರೀಕ್ಷೆ ಇದೆ. ಈ ತೀರ್ಪಿನ ಬಳಿಕ ಕಾಂಗ್ರೆಸ್ ಪಕ್ಷ ಎಂದು ಅಧಿವೇಶನ ಕರೆಯಬೇಕು? ಎಂದು ತೀರ್ಮಾನವನ್ನು ಕೈಗೊಳ್ಳಲಿದೆ.

''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು? ''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು?

ಎಷ್ಟು ಶಾಸಕರ ಬಲವಿದೆ?

ಎಷ್ಟು ಶಾಸಕರ ಬಲವಿದೆ?

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಉಪ ಮುಖ್ಯಮಂತ್ರಿ ಸಚಿನ್ ಪೈಲೆಟ್ ಬಂಡಾಯ ಎದ್ದಿದ್ದಾರೆ. ಸಚಿನ್ ಪೈಲೆಟ್ ಜೊತೆಗೆ ಎಷ್ಟು ಶಾಸಕರಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಎಷ್ಟು ಶಾಸಕರ ಬೆಂಬಲವಿದೆ? ಎಂಬುದು ಸ್ಪಷ್ಟವಾಗಿಲ್ಲ. ಆದ್ದರಿಂದ, ವಿಧಾನಸಭೆ ಅಧಿವೇಶನ ಕರೆದು ವಿಶ್ವಾಸಮತ ಯಾಚನೆ ಮಾಡಬೇಕು?.

ಸಚಿನ್ ಪೈಲೆಟ್ ಜೊತೆ 30 ಶಾಸಕರು?

ಸಚಿನ್ ಪೈಲೆಟ್ ಜೊತೆ 30 ಶಾಸಕರು?

ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಬೆಂಬಲಕ್ಕೆ 30 ಶಾಸಕರು ಇದ್ದಾರೆ ಎಂದು ಅವರ ಬಣದವರು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಇದನ್ನು ತಳ್ಳಿ ಹಾಕಿದೆ. 18 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಶೋಕಾನ್ ನೋಟಿಸ್ ಜಾರಿಗೊಳಿಸಿದ್ದಾರೆ.

109 ಶಾಸಕರು ಸರ್ಕಾರದ ಪರ

109 ಶಾಸಕರು ಸರ್ಕಾರದ ಪರ

ಅಶೋಕ್ ಗೆಹ್ಲೋಟ್ ತಮ್ಮ ಬಳಿ 109 ಶಾಸಕರ ಬಲವಿದೆ ಎಂದು ಹೇಳಿಕೊಂಡಿದ್ದಾರೆ. ರಾಜಸ್ಥಾನ ವಿಧಾನಸಭೆ ಒಟ್ಟು ಬಲ 200. ಬಹುಮತವನ್ನು ಸಾಬೀತು ಮಾಡಲು ಪ್ರಸ್ತುತ 91 ಶಾಸಕರ ಬಲ ಅಗತ್ಯ (ಸಚಿನ್ ಪೈಲೆಟ್ ಬಣ ಹೊರತುಪಡಿಸಿ).

ಬಿಜೆಪಿ ಕಾದು ನೋಡುತ್ತಿದೆ

ಬಿಜೆಪಿ ಕಾದು ನೋಡುತ್ತಿದೆ

ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿಪಕ್ಷವಾದ ಬಿಜೆಪಿ ರಾಜಕೀಯ ಬೆಳವಣಿಗೆಯನ್ನು ಕಾದು ನೋಡುತ್ತಿದೆ. ವಿಧಾನಸಭೆಯಲ್ಲಿ ಪಕ್ಷ 72 ಸದಸ್ಯ ಬಲ ಹೊಂದಿದೆ. ಆರ್‌ಎಲ್‌ಪಿಯ 3, ಒಬ್ಬ ಪಕ್ಷೇತರ ಶಾಸಕ ಬಿಜೆಪಿ ಜೊತೆಗಿದ್ದಾರೆ.

English summary
Rajasthan chief minister Ashok Gehlot met governor Kalraj Mishra. CM may call assembly session next week to showcase his strength in the house. Two MLAs of a regional party withdrew support from the Congress government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X