• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕ್ ಜೈಲಿನಲ್ಲಿ 36 ವರ್ಷ ಇದ್ದು ಬಂದು, ಮತ ಚಲಾಯಿಸಿದರು

|

ಜೈಪುರ, ಡಿಸೆಂಬರ್ 8: ಒಂದೆರಡಲ್ಲ, ಬರೋಬ್ಬರಿ 36 ವರ್ಷಗಳು. ಅರಿವಿಲ್ಲದೆ ಭಾರತದ ಗಡಿ ದಾಟಿ ಹೋಗಿದ್ದ ಈ ವ್ಯಕ್ತಿ ಪಾಕಿಸ್ತಾನದ ಜೈಲಿನಲ್ಲಿದ್ದಾರೆ ಎಂಬುದು ತನಿಖೆ ಬಳಿಕ ಗೊತ್ತಾಗಿತ್ತು.

ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಕೊನೆಗೂ ಬಿಡುಗಡೆಯಾಗಿ ಬಂದ ಈ ವ್ಯಕ್ತಿ 38 ವರ್ಷಗಳ ಬಳಿಕ ಶುಕ್ರವಾರ ನಡೆದ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

ಜೈಪುರದ ನಹಾರ್ಗಡ ಪ್ರದೇಶದ ಫಾತೆಹ್ರಾಮ್ ಕಾ ಟೀಬಾದ ನಿವಾಸಿ ಗಜಾನಂದ ಶರ್ಮಾ, 1980ರ ಲೋಕಸಭೆ ಚುನಾವಣೆ ನಂತರ ಮೊದಲ ಸಲ ಪತ್ನಿ ಮಖಾನಿ ದೇವಿ ಮತ್ತು ಹಿರಿ ಮಗ ಮುಕೇಶ್ ಶರ್ಮಾ ಜತೆಗೆ ಬ್ರಹ್ಮಪುರಿ ಪ್ರದೇಶದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಮೂರೂವರೆ ದಶಕಗಳ ಹಿಂದೆ ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಿದ್ದ ಗಜಾನಂದ್, ಮೊದಲ ಬಾರಿಗೆ ಇವಿಎಂ ಕಂಡು ಅಚ್ಚರಿಪಟ್ಟರು.

1982ರಲ್ಲಿ ಗಜಾನಂದ ಶರ್ಮಾ ಕಣ್ಮರೆಯಾಗಿದ್ದರು. ಅಂತಾರಾಷ್ಟ್ರೀಯ ಗಡಿಯಲ್ಲಿ ಸಿಕ್ಕಿದ್ದ ಅವರನ್ನು ದಾಖಲೆ ಇಲ್ಲದೆ ಗಡಿಯೊಳಗೆ ಪ್ರವೇಶಿಸಿದ್ದ ಆರೋಪದಲ್ಲಿ ಪಾಕಿಸ್ತಾನ ಪಡೆಗಳು ಬಂಧಿಸಿ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಿದ್ದವು.

ಸ್ಥಳೀಯ ಎನ್ ಜಿಓ, ರಾಜಕೀಯ ಪಕ್ಷಗಳ ನಿರಂತರ ಪ್ರಯತ್ನಗಳ ಬಳಿಕ ಅವರನ್ನು ಈ ವರ್ಷದ ಆಗಸ್ಟ್ 14ರಂದು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

ಅವರು ಮನೆಗೆ ಮರಳಿದ ನಂತರ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದರು.

ಮೊದಲ ಬಾರಿಗೆ ಮತ ಚಲಾಯಿಸಿದ್ದರ ಬಗ್ಗೆ ಹೇಳಿಕೊಳ್ಳಲು ಗಜಾನಂದ್ ಬಯಸಲಿಲ್ಲ. ಅವರಿಗೆ ದೇಶದಲ್ಲಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ. ಹೀಗಾಗಿ ಪತ್ನಿ ಹೇಳಿದ ಗುರುತಿಗೆ ಬಟನ್ ಒತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ. 'ನನಗೆ ನನ್ನ ಹೆಂಡತಿಯೇ ಸರ್ಕಾರ' ಎಂದು ಹೇಳಿದ್ದಾರೆ.

ಗಜಾನಂದ್ ಕಣ್ಮೆಯಾದಾಗಿನಿಂದ ಅವರ ಕುಟುಂಬದವರು ಮತ ಚಲಾಯಿಸಿರಲಿಲ್ಲವಂತೆ. 2013ರ ವಿಧಾನಸಭೆ ಮತ್ತು 2014ರ ಲೋಕಸಭೆಯಲ್ಲಿಯೂ ಮತ ಹಾಕಿರಲಿಲ್ಲ. ಈ ಬಾರಿ ಪತಿಯ ಜೊತೆಗೆ ಮತ್ತೆ ಮತದಾನ ಮಾಡಿದ ಖುಷಿಯನ್ನು ಮಖಾನಿ ದೇವಿ ಹಂಚಿಕೊಂಡರು.

ಜೈಪುರ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2014
ರಾಮಚರಣ ಬೋಹರಾ ಬಿ ಜೆ ಪಿ ಗೆದ್ದವರು 8,63,358 67% 5,39,345
ಡಾ. ಮಹೇಶ ಜೋಶಿ ಐ ಎನ್ ಸಿ ರನ್ನರ್ ಅಪ್ 3,24,013 25% 0
2009
ಮಹೇಶ ಜೋಶಿ ಐ ಎನ್ ಸಿ ಗೆದ್ದವರು 3,97,438 49% 16,099
ಘನಶ್ಯಾಮ ತಿವಾರಿ ಬಿ ಜೆ ಪಿ ರನ್ನರ್ ಅಪ್ 3,81,339 47% 0
2004
ಗಿರಧಾರಿ ಲಾಲ ಭಾರ್ಗವಾ ಬಿ ಜೆ ಪಿ ಗೆದ್ದವರು 4,80,730 55% 1,07,186
ಪ್ರತಾಪ ಸಿಂಗ ಖಚರಿಯಾವಾಸ್ ಐ ಎನ್ ಸಿ ರನ್ನರ್ ಅಪ್ 3,73,544 42% 0
1999
ಗಿರಧಾರಿ ಲಾಲ ಭಾರ್ಗವಾ ಬಿ ಜೆ ಪಿ ಗೆದ್ದವರು 4,56,720 57% 1,41,790
ಪಂಡಿತ ರಘು ಶರ್ಮಾ ಐ ಎನ್ ಸಿ ರನ್ನರ್ ಅಪ್ 3,14,930 39% 0
1998
ಗಿರಧಾರಿ ಲಾಲ ಭಾರ್ಗವಾ ಬಿ ಜೆ ಪಿ ಗೆದ್ದವರು 4,45,608 56% 1,38,971
ಎಂ. ಸಯೀದ್ ಖಾನ (ಗೂಡಾಗೆ) ಐ ಎನ್ ಸಿ ರನ್ನರ್ ಅಪ್ 3,06,637 39% 0
1996
ಗಿರಧಾರಿ ಲಾಲ ಭಾರ್ಗವಾ ಬಿ ಜೆ ಪಿ ಗೆದ್ದವರು 3,44,994 55% 1,15,254
ಪಂಡಿತ ದಿನೇಶ ಚಂದ್ರ ಸ್ವಾಮಿ ಐ ಎನ್ ಸಿ ರನ್ನರ್ ಅಪ್ 2,29,740 36% 0
1991
ಗಿರಧಾರಿ ಲಾಲ ಭಾರ್ಗವಾ ಬಿ ಜೆ ಪಿ ಗೆದ್ದವರು 3,25,668 59% 1,25,927
ನವಲ ಕಿಶೋರ ಶರ್ಮಾ ಸನ್ ಆಫ್ ಪಂಡಿತ ಮೂಲ ಚಂದ ಶರ್ಮಾ ಐ ಎನ್ ಸಿ ರನ್ನರ್ ಅಪ್ 1,99,741 36% 0
1989
ಗಿರಧಾರಿ ಲಾಲ ಭಾರ್ಗವಾ ಬಿ ಜೆ ಪಿ ಗೆದ್ದವರು 3,84,125 54% 84,487
ಭವಾನಿ ಸಿಂಗ ಐ ಎನ್ ಸಿ ರನ್ನರ್ ಅಪ್ 2,99,638 42% 0
1984
ನವಲ ಕಿಶೋರ ಶರ್ಮಾ ಐ ಎನ್ ಸಿ ಗೆದ್ದವರು 2,80,436 56% 83,857
ಸತೀಶ ಚಂದ್ರ ಅಗ್ರವಾಲ ಬಿ ಜೆ ಪಿ ರನ್ನರ್ ಅಪ್ 1,96,579 39% 0
1980
ಸತೀಶ ಚಂದ್ರ ಅಗರ್ವಾಲ ಜೆ ಎನ್ ಪಿ ಗೆದ್ದವರು 1,70,406 45% 4,684
ದಿನೇಶ ಚಂದ್ರ ಸ್ವಾಮಿ ಐ ಎನ್ ಸಿ (ಐ) ರನ್ನರ್ ಅಪ್ 1,65,722 43% 0
1977
ಸತೀಶ ಚಂದರ ಬಿ ಎಲ್ ಡಿ ಗೆದ್ದವರು 2,49,367 71% 1,89,482
ಜನಾರ್ದನ ಸಿಂಗ್ ಐ ಎನ್ ಸಿ ರನ್ನರ್ ಅಪ್ 59,885 17% 0
1971
ಗಾಯತ್ರಿ ದೇವಿ ಎಸ್ ಡಬ್ಲ್ಯೂ ಎ ಗೆದ್ದವರು 1,80,059 56% 50,644
ಪಿ.ಕೆ. ಚೌಧರಿ ಐ ಎನ್ ಸಿ ರನ್ನರ್ ಅಪ್ 1,29,415 40% 0
1967
ಜಿ. ದೇವಿ ಎಸ್ ಡಬ್ಲ್ಯೂ ಎ ಗೆದ್ದವರು 1,96,892 64% 94,251
ಆರ್. ಕಾಸ್ಲಿವಾಲ ಐ ಎನ್ ಸಿ ರನ್ನರ್ ಅಪ್ 1,02,641 33% 0
1962
ಗಾಯತ್ರಿ ದೇವಿ ವೈಫ್ ಆಫ್ ಸವಾಯಿ ಮಾನಸಿಂಗ ಎಸ್ ಡಬ್ಲ್ಯೂ ಎ ಗೆದ್ದವರು 1,92,909 77% 1,57,692
ಶಾರದಾ ದೇವಿ ಐ ಎನ್ ಸಿ ರನ್ನರ್ ಅಪ್ 35,217 14% 0
1957
ಹರೀಶ ಚಂದ್ರ ಐ ಎನ್ ಡಿ ಗೆದ್ದವರು 61,270 52% 4,504
ಸಾದಿಕ್ ಅಲಿ ಐ ಎನ್ ಸಿ ರನ್ನರ್ ಅಪ್ 56,766 48% 0
1952
ದೌಲತ ಮಲ ಐ ಎನ್ ಸಿ ಗೆದ್ದವರು 49,773 42% 13,784
ಚಿರಾಂಜಿ ಲಾಲ ಐ ಎನ್ ಡಿ ರನ್ನರ್ ಅಪ್ 35,989 30% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gajanand Sharma who spent 36 years in Pakistan jail casted vote in Rajasthan assmebly election 2018 after 38 years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more