ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಪುರ್ ಜೈಲಿನಲ್ಲಿ ಸಹ ಕೈದಿಗಳಿಂದ ಪಾಕಿಸ್ತಾನಿ ಕೈದಿಯ ಹತ್ಯೆ

|
Google Oneindia Kannada News

ಜೈಪುರ್ (ರಾಜಸ್ತಾನ), ಫೆಬ್ರವರಿ 20: ಜೈಪುರ್ ನ ಸೆಂಟ್ರಲ್ ಜೈಲಿನಲ್ಲಿದ್ದ ಪಾಕಿಸ್ತಾನಿ ಕೈದಿಯೊಬ್ಬ ಸಹ ಕೈದಿಗಳ ಜತೆಗಿನ ಹೊಡೆದಾಟದಲ್ಲಿ ಬುಧವಾರ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. "ಪಾಕಿಸ್ತಾನಿ ಕೈದಿಯೊಬ್ಬ ಇಂದು ಕೈದಿಯೊಬ್ಬ ಕೊಲೆ ಆಗಿದ್ದಾನೆ. ಮ್ಯಾಜಿಸ್ಟ್ರೇಟ್ ನಿಂದ ಹಾಗೂ ಪೊಲೀಸರಿಂದ ಈ ಬಗ್ಗೆ ವಿಚಾರಣೆ ನಡೆಯಲಿದೆ" ಎಂದು ರಾಜಸ್ತಾನದ ಡಿಜಿಪಿ ಕಪಿಲ್ ಗರ್ಗ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದನಾ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪರಿಸ್ಥಿತಿ ಉದ್ವಿಗ್ನವಾಗಿದೆ. ಇಂಥ ಸಂದರ್ಭದಲ್ಲಿ ಪಾಕಿಸ್ತಾನದ ಪಂಜಾಬ್ ನ ಸಿಯಾಲ್ ಕೋಟ್ ನ ಐವತ್ತು ವರ್ಷದ ಶಕ್ರುಲ್ಲಾ ಎಂಬಾತ ಮೃತಪಟ್ಟಿರುವ ಕೈದಿ. ಕೈದಿಗಳ ಮಧ್ಯದ ಕಾದಾಟದಲ್ಲಿ ದೊಡ್ಡ ಕಲ್ಲಿನಿಂದ ಜಜ್ಜಿ ಆತನನ್ನು ಕೊಲ್ಲಲಾಗಿದೆ.

Pakistani prisoner Shakrulla killed during brawl with other inmates in Jaipur jail

ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?ಪಾಕ್ ಜೈಲುಗಳಲ್ಲಿ ಎಷ್ಟು ಮಂದಿ ಭಾರತೀಯರು ಕೊಳೆಯುತ್ತಿದ್ದಾರೆ ಗೊತ್ತೇ?

ಐಜಿ (ಬಂದೀಖಾನೆ) ರೂಪಿಂದರ್ ಸಿಂಗ್ ಮಾತನಾಡಿ, ಎಂಟು ವರ್ಷಗಳಿಂದ ಶಕ್ರುಲ್ಲಾನನ್ನು ವಿಶೇಷ ಸೆಲ್ ನಲ್ಲಿ ಇರಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆ (ನಿಷೇಧ) ಕಾಯ್ದೆ ಅಡಿಯಲ್ಲಿ ಆಅತ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಈ ಬಗ್ಗೆ ಗೊತ್ತಾದ ತಕ್ಷಣ ಹಿರಿಯ ಅಧಿಕಾರಿಗಳು ಜೈಲಿನತ್ತ ದೌಡಾಯಿಸಿದ್ದಾರೆ. ನ್ಯಾಯಾಂಗದ ನಿಗಾದಲ್ಲಿ ಜೈಲು ಆವರಣದಲ್ಲಿ ಶವ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದ್ದಾರೆ.

English summary
A Pakistani national lodged in Jaipur central jail was allegedly killed on Wednesday in a brawl with other prisoners. The killing in Jaipur prison has been reported amid heightened tension between India and Pakistan after the Pulwama terror attack. Shakrullah (50), who was from Pakistan Punjab’s Sialkot, was hit with a large stone during the prison fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X