ನೆಹರು ಮೇಲೆ ಟೀಕಾಸ್ತ್ರ ಪ್ರಯೋಗಿಸಿ ಕಾಂಗ್ರೆಸ್ ಹಿಂದೂ ವಿರೋಧಿ ಎಂದ ಮೋದಿ
ಜೋದ್‌ಪುರ (ರಾಜಸ್ಥಾನ), ಡಿಸೆಂಬರ್ 03: ರಾಜಸ್ಥಾನದ ಜೋದ್‌ಪುರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಮೊದಲ ಪ್ರಧಾನಿ ನೆಹರು ಅವರನ್ನು ಟೀಕಿಸಿ ಕಾಂಗ್ರೆಸ್ ಹಿಂದು ವಿರೋಧಿ ಪಕ್ಷ ಎಂದು ಟೀಕಿಸಿದರು.
ಜೋದ್‌ಪುರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಮಮ ಒಂದು ಲಕಾಲ್ಪನಿಕ ಪಾತ್ರ ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷ ಈಗ ನನಗೆ ಹಿಂದುತ್ವದ ಪಾಠ ಹೇಳಿ ಕೊಡಲು ಯತ್ನಿಸಿದೆ ಎಂದು ಕುಟುಕಿದರು.
ದೇಶದ ಮೊದಲ ಪ್ರಧಾನಿ ನೆಹರು ಅವರನ್ನು ಟೀಕಿಸಿದ ಅವರು, ಅವರೊಬ್ಬ ಹಿಂದು ವಿರೋಧಿ ಆಗಿದ್ದರು, ವಲ್ಲಬಭಾಯ್ ಪಟೇಲ್, ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರುಗಳು ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಹೋಗಲು ಮುಂದಾದಾಗ ನೆಹರು ಅವರು ತೀವ್ರವಾಗಿ ವಿರೋಧಿಸಿದ್ದರು ಎಂದು ಮೋದಿ ಹೇಳಿದರು.


ಬಿಶ್ನೋಯಿಗಳನ್ನು ಹೊಗಳಿದ ಮೋದಿ
ರಾಜಸ್ಥಾನದ ಬಹುಸಂಖ್ಯ ಬಿಶ್ನೋಯಿ ಸಮುದಾಯವನ್ನು ಹಾಡಿ ಹೊಗಳಿದ ಮೋದಿ, 'ಕಾಂಗ್ರೆಸ್ ಅವರು ನನ್ನ ಜಾತಿಯ ಬಗ್ಗೆ, ನನ್ನ ಹಿಂದುತ್ವದ ಜ್ಞಾನದ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಕಾಂಗ್ರೆಸ್ ಚುನಾವಣೆಯನ್ನು ಜಾತಿ ಆಧಾರದಲ್ಲಿ ಗೆಲ್ಲುವ ಕುತಂತ್ರ ಮಾಡುತ್ತಿದೆ ಎಂದು ಹೇಳಿದರು.

'ರಾಹುಲ್ ಗಾಂಧಿ ಮನೋರಂಜನೆ ನೀಡುತ್ತಿದ್ದಾರೆ'
ರಾಹುಲ್ ಗಾಂಧಿ ಅದ್ಬುತವಾಗಿ ಸುಳ್ಳು ಹೇಳುತ್ತಾರೆ. ರಾಜಸ್ಥಾನದಲ್ಲಿ ಚುನಾವಣಾ ಭಾಷಣ ಮಾಡಿದ ಅವರು, ಒಂದೊಂದು ಬಾರಿ ಒಬ್ಬೊಬ್ಬರನ್ನು ರಾಜಸ್ಥಾನದ ಸಿಎಂ ಆಗಿ ಪ್ರಕಟಿಸಿದ್ದಾರೆ. ಅವರು ದೇಶಕ್ಕೆ ಉತ್ತಮ ಮನರಂಜನೆ ನೀಡುತ್ತಿದ್ದಾರೆ ಎಂದು ಮೋದಿ ವ್ಯಂಗ್ಯ ಮಾಡಿದರು.

ವಸುಂಧರಾ ರಾಜೆ ಆಡಳಿತ ಹೊಗಳಿದ ಮೋದಿ
ರಾಜಸ್ಥಾನದ ಸಿಎಂ ವಸುಂಧರಾ ರಾಜೆ ಅವರ ಕಾರ್ಯವನ್ನೂ ಹೊಗಳಿದ ಮೋದಿ, ರಾಜಸ್ಥಾನಕ್ಕೆ ಕೇಂದ್ರದಿಂದ ನೀಡಲಾಗಿರುವ ಕಾರ್ಯಕ್ರಮಗಳು ಮತ್ತು ಮಾಡಿರುವ ಅಭಿವೃದ್ಧಿಯ ಲೆಕ್ಕ ನೀಡಿದರು. ಕಾಂಗ್ರೆಸ್ ಕೇವಲ ಲೂಟಿ ಮಾಡುತ್ತದೆ ನಾವು (ಬಿಜೆಪಿ) ಕೆಲಸ ಮಾಡಿದ್ದೇವೆ ಎಂದರು.

'50 ವರ್ಷದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ'
50 ವರ್ಷದಲ್ಲಿ ಏನೂ ಮಾಡದ ಕಾಂಗ್ರೆಸ್ ಈಗಲೂ ಅದೇ ಗುರಿಯನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಚುನಾವಣೆ ಸಮಯದಲ್ಲಿ ಜಾತಿ ಆಧಾರಿತ ರಾಜಕೀಯ ಮಾಡಿ ಅಧಿಕಾರಕ್ಕೆ ಏರುವ ಹುನ್ನಾರ ಮಾಡುತ್ತದೆ, ಅಧಿಕಾರಕ್ಕೆ ಬಂದ ನಂತರ ಐದು ವರ್ಷ ಮೋಜು-ಮಸ್ತಿ ಮಾಡುತ್ತದೆ, ಆದರೆ ಇದಕ್ಕೆ ರಾಜಸ್ಥಾನದ ಜನ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.












Click it and Unblock the Notifications