Just in: ಗೋಹತ್ಯೆ ಹಿಂದಿರುವವರನ್ನು ಕೊಂದುಬಿಡಿ: ಬಿಜೆಪಿ ಮಾಜಿ ಶಾಸಕ
ಜೈಪುರ, ಆಗಸ್ಟ್ 21: ರಾಜಸ್ಥಾನದ ಬಿಜೆಪಿ ನಾಯಕ ಜ್ಞಾನ್ ದೇವ್ ಅಹುಜಾ ಅವರು "ಗೋಹತ್ಯೆಯಲ್ಲಿ ತೊಡಗಿರುವ ಯಾರನ್ನಾದರೂ ಕೊಂದುಬಿಡಿ" ಎಂದು ಜನರನ್ನು ಪ್ರೇರೇಪಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ, "ನಾವು ಇದುವರೆಗೆ ಐದು ಜನರನ್ನು ಕೊಂದಿದ್ದೇವೆ, ಅದು ಲಾಲ್ವಂಡಿ ಅಥವಾ ಬೆಹ್ರೋರ್ ಆಗಿರಬಹುದು" ಎಂದು ನೇರವಾಗಿ ಜನರೆದುರು ಹೇಳಿದ್ದಾರೆ.
ರಾಜಸ್ಥಾನದ ಬಿಜೆಪಿಯ ಮಾಜಿ ಶಾಸಕ ಜ್ಞಾನದೇವ್ ಅಹುಜಾ ಅವರು ಶುಕ್ರವಾರ ಗೋವಿಂದಗಢಕ್ಕೆ ಕೋಮು ಘಟನೆಯೊಂದರ ಸಂತ್ರಸ್ತರನ್ನು ಭೇಟಿಯಾಗಲು ಭೇಟಿ ನೀಡಿದ್ದ ಸಂದರ್ಭದಲ್ಲಿ ಹಸು ಕಳ್ಳಸಾಗಾಣಿಕೆಯಲ್ಲಿ ಐವರನ್ನು ಹತ್ಯೆಗೈದಿರುವ ಕುರಿತು ಮಾತನಾಡಿದ್ದಾರೆ.
ಲಾಲ್ವಂಡಿ ಅಥವಾ ಬೆಹ್ರೋರ್‌ನಲ್ಲಿ ನಡೆದ ಕೊಲೆಗಳೆಂದರೆ ರಕ್ಬರ್ ಖಾನ್ ಮತ್ತು ಪೆಹ್ಲು ಖಾನ್ ಹತ್ಯೆಗಳು. ಒಂದು 2017 ರಲ್ಲಿ, ಇನ್ನೊಂದು 2018 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಜ್ಞಾನ್ ದೇವ್ ಅಹುಜಾ ಶಾಸಕರಾಗಿದ್ದ ಪ್ರದೇಶವಾದ ರಾಮಗಢದಲ್ಲಿ ನಡೆದಿವೆ. ಇನ್ನು ಉಳಿದ ಮೂರು ಕೊಲೆಗಳು ಯಾವುವು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ.

ವಿಡಿಯೋದಲ್ಲಿ, ಅಹುಜಾ ತನ್ನ ಪಕ್ಕದಲ್ಲಿ ಕುಳಿತ ವ್ಯಕ್ತಿಯೊಬ್ಬನಿಗೆ, "ಪಂಡಿತ್ ಜೀ, ಇಲ್ಲಿವರೆಗೂ ನಾವು ಐವರನ್ನು ಕೊಂದಿದ್ದೆವೆ. ಅದು ಲಾಲ್ವಂಡಿಯಯಾಗಿರಬಹುದು, ಬೆಹ್ರೋರ್‌ನಲ್ಲಿ ಕೊಂದಿದ್ದೇವೆ. ಚಾಹೇ (ಅಸ್ಪಷ್ಟ) ಯಲ್ಲಿ ಕೊಲೆ ಮಾಡಿದ್ದೇವೆ. ನಾವೇ ಐದು ಜನರನ್ನು ಕೊಂದಿದ್ದೇವೆ. ಈ ಏರಿಯಾದಲ್ಲಿ ಮೊದಲ ಬಾರಿಗೆ ಅವರು ಕೊಲೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.
"ನಾನು ಕಾರ್ಯಕರ್ತರಿಗೆ ಕೊಲ್ಲಲು ಮುಕ್ತವಾಗಿ ಬಿಡುತ್ತೇನೆ. ಗೋಹತ್ಯೆಯ ಹಿಂದೆ ಇರುವವರನ್ನು ಕೊಂದುಬಿಡಿ. ನಾವು ನಿಮ್ಮನ್ನು ಖುಲಾಸೆಗೊಳಿಸುತ್ತೇವೆ, ಜಾಮೀನಿನ ಮೇಲೆ ಹೊರತರುತ್ತೇವೆ" ಎಂದು ಹೇಳಿದ್ದಾರೆ.
ಇನ್ನು, ಪೆಹ್ಲು ಖಾನ್ ಹತ್ಯೆಯ ಎಲ್ಲಾ ಆರು ಆರೋಪಿಗಳನ್ನು 2019 ರಲ್ಲಿ ಖುಲಾಸೆಗೊಳಿಸಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲ್ಮನವಿ ಈಗ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ರಕ್ಬರ್ ಖಾನ್ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ.
ಅಲ್ವಾರ್‌ನ ಗೋವಿಂದಗಢದಲ್ಲಿ ಟ್ರ್ಯಾಕ್ಟರ್ ಕಳ್ಳತನ ಮಾಡಿದ್ದಾರೆಂದು ತಪ್ಪಾಗಿ ಭಾವಿಸಿ ತರಕಾರಿ ವ್ಯಾಪಾರಿ ಚಿರಂಜಿ ಲಾಲ್‌ರನ್ನು ಜನರ ಗುಂಪು ಥಳಿಸಿತ್ತು. ಗಾಯಗೊಂಡು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತ ಸಾವನ್ನಪ್ಪಿದ್ದರು. ವಿಕ್ರಮ್ ಖಾನ್ ಮತ್ತು ಇತರರು ಚಿರಂಜಿ ಲಾಲ್ ಅವರನ್ನು ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದು, ಸಂತ್ರಸ್ತನ ಕುಟುಂಬವನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಹುಜಾ ಈ ಹೇಳಿಕೆ ನೀಡಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿವೆ. ಬಿಜೆಪಿಯ ಧಾರ್ಮಿಕ ಭಯೋತ್ಪಾದನೆ ಮತ್ತು ಧರ್ಮಾಂಧತೆಗೆ ಇದಕ್ಕಿಂತ ಸಾಕ್ಷಿ ಏನು ಬೇಕು? ಬಿಜೆಪಿಯ ನಿಜವಾದ ಮುಖ ಇಡೀ ದೇಶದ ಮುಂದೆ ಬಂದಿದೆ ಎಂದು ದೋತಾಸ್ರಾ ಹೇಳಿದ್ದಾರೆ.
"अब तक 5 हमने मारे हैं…कार्यकर्ताओं को खुली छूट दे रखी है..मारो **** को..ज़मानत हम करवाएँगे” ये शब्द राजस्थान भाजपा कार्यकारिणी के सदस्य और पूर्व विधायक ज्ञानदेव आहूजा के हैं।
— Govind Singh Dotasra (@GovindDotasra) August 20, 2022
BJP के मजहबी आतंक व कट्टरता का और क्या सबूत चाहिए? पूरे देश में भाजपा का असली चेहरा सामने आ गया है। pic.twitter.com/v8XhxZEKcF
ವಿಡಿಯೋ ವೈರಲ್ ಆದ ಬೆನ್ನಲ್ಲೆ ಮಾಜಿ ಶಾಸಕನ ವಿರುದ್ಧ ಪ್ರಕರಣ ದಾಖಲಾಗಿದೆ.
"ಸ್ಥಳದಲ್ಲಿದ್ದ ಬೀಟ್ ಕಾನ್‌ಸ್ಟೆಬಲ್ ದೂರಿನ ಆಧಾರದ ಮೇಲೆ ಅಹುಜಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 153 ಎಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಯ ಸಮಯದಲ್ಲಿ ಹೆಚ್ಚುವರಿ ಸೆಕ್ಷನ್‌ಗಳನ್ನು ಸೇರಿಸಬಹುದು" ಎಂದು ಅಲ್ವಾರ್ ಎಸ್ಪಿ ತೇಜಸ್ವನಿ ಗೌತಮ್ ಹೇಳಿದರು.












Click it and Unblock the Notifications