ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

70 ವರ್ಷ ಕಾಂಗ್ರೆಸ್‌ ಕಟ್ಟಿದ್ದನ್ನು, ಬಿಜೆಪಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ

|
Google Oneindia Kannada News

ಜೈಪುರ, ಡಿಸೆಂಬರ್ 13: ''70 ವರ್ಷಗಳ ಕಾಲ ಕಾಂಗ್ರೆಸ್ ಕಟ್ಟಿದ್ದನ್ನು, ಏಳು ವರ್ಷಗಳಲ್ಲಿ ಬಿಜೆಪಿ ಮಾರಾಟ ಮಾಡುತ್ತಿದೆ'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ದೂರಿದ್ದಾರೆ. ಜೈಪುರದಲ್ಲಿ ಹಣದುಬ್ಬರದ ವಿರುದ್ಧ ಕಾಂಗ್ರೆಸ್​ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ 70 ವರ್ಷದಲ್ಲಿ ಕಟ್ಟಿದ್ದನ್ನು, 7 ವರ್ಷದಲ್ಲಿ ಬಿಜೆಪಿ ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.

''ಆಹಾರ ಪದಾರ್ಥಗಳು ಮತ್ತು ಇಂಧನದ ಬೆಲೆ ಗಗನಕ್ಕೇರಿದೆ. ಈ ಬಗ್ಗೆ ಯಾವೊಬ್ಬ ಬಿಜೆಪಿ ನಾಯಕನೂ ಸಾಮಾನ್ಯರ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಿಲ್ಲ. ಎಲ್‌ಪಿಜಿ ಸಿಲಿಂಡರ್‌ಗೆ 1000 ರೂಪಾಯಿ ಆಗಿದೆ. ಇದಲ್ಲದೇ, ದಿನ ಬಳಕೆಯ ವಸ್ತುಗಳ ದರವೂ ವಿಪರೀತ ಏರಿಕೆಯಾಗಿದೆ. ಅದರ ಬಗ್ಗೆ ಸರ್ಕಾರ ಯಾಕೆ ಗಮನಹರಿಸಿಲ್ಲ'' ಎಂದು ಟೀಕಿಸಿದ್ದಾರೆ.

 ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌ ಗಾಂಧಿ ಹಿಂದು, ಗೋಡ್ಸೆ ಹಿಂದುತ್ವವಾದಿ, ಭಾರತ ಹಿಂದುಗಳ ದೇಶ: ರಾಹುಲ್‌

ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಜಾಹೀರಾತಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ ರೈತರಿಗೆ ರಸಗೊಬ್ಬರ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್​ 70 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂದು ಬಿಜೆಪಿಗರು ಪ್ರಶ್ನಿಸುತ್ತಾರೆ. ವಿಚಿತ್ರ ಅಂದ್ರೆ ಆ 70 ವರ್ಷಗಳಲ್ಲಿ ಕಾಂಗ್ರೆಸ್​ ನಿರ್ಮಿಸಿದ ಎಲ್ಲವನ್ನೂ ಇದೀಗ ಬಿಜೆಪಿಯ 7 ವರ್ಷದ ಆಡಳಿತದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

Centre Wants To Sell Everything Congress Built: Priyanka Gandhi Vadra

ಜೈಪುರದಲ್ಲಿ ಹಣದುಬ್ಬರದ ವಿರುದ್ಧ ಕಾಂಗ್ರೆಸ್​ ಹಮ್ಮಿಕೊಂಡಿರುವ 'ಮೆಹಂಗಾಯಿ ಹಠಾವೋ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 7 ವರ್ಷಗಳ ಬಿಜೆಪಿ ಆಡಳಿತದಲ್ಲಿ ಆರೋಗ್ಯ ಸೇವೆಗಾಗಿ ಒಂದೇ ಒಂದು ಏಮ್ಸ್​ ಸಂಸ್ಥೆಯನ್ನು ನಿರ್ಮಾಣ ಮಾಡಲಾಗಿದೆಯೇ?, ನೀವು ಬಳಸುತ್ತಿರುವ ಪ್ರತಿ ವಿಮಾನ ನಿಲ್ದಾಣಗಳು ಕಾಂಗ್ರೆಸ್​ ಅವಧಿಯಲ್ಲಿ ನಿರ್ಮಾಣವಾಗಿವೆ.

ನೀವು ಮಾಡಿದ ಅಭಿವೃದ್ಧಿ ಕಾರ್ಯಗಳೇನು ಎಂಬುವನ್ನು ತಿಳಿಸಿ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ. 'ಎರಡು ರೀತಿಯ ಸರ್ಕಾರಗಳಿವೆ. ಜನರ ಸೇವೆ, ಸಮರ್ಪಣೆ ಮತ್ತು ಸತ್ಯದ ಬಗ್ಗೆ ಮಾತನಾಡುವುದು ಸರ್ಕಾರದ ಗುರಿಯಾಗಿದೆ. ಸುಳ್ಳು, ದುರಾಸೆ ಮತ್ತು ಲೂಟಿಯೇ ಗುರಿಯಾಗಿರುವ ಸರಕಾರ ಕೂಡಾ ಇದೆ. ಈಗಿನ ಕೇಂದ್ರ ಸರಕಾರದ ಗುರಿ ಸುಳ್ಳು, ದುರಾಸೆ ಮತ್ತು ಲೂಟಿಯಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ಸಿಬಿಎಸ್‌ಇ ಇಂಗ್ಲಿಷ್ ಪ್ರಶ್ನೆ ಪತ್ರಿಕೆ: ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಗರಂ ಸಿಬಿಎಸ್‌ಇ ಇಂಗ್ಲಿಷ್ ಪ್ರಶ್ನೆ ಪತ್ರಿಕೆ: ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ಗರಂ

ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ''ಓರ್ವ ಹಿಂದೂ ಮತ್ತು ಆದರೆ ಗೋಡ್ಸೆ ಹಿಂದುತ್ವವಾದಿ. ಒಬ್ಬ ಹಿಂದೂ ಸತ್ಯವನ್ನು ಹುಡುಕುತ್ತಾನೆ, ಅವನ ಮಾರ್ಗವು ಸತ್ಯಾಗ್ರಹಿಯಾಗಿರುತ್ತದೆ. ಆದರೆ ಒಬ್ಬ ಹಿಂದುತ್ವವಾದಿ ತನ್ನ ಇಡೀ ಜೀವನವನ್ನು ಅಧಿಕಾರದ ಹುಡುಕಾಟದಲ್ಲಿ ಕಳೆಯುತ್ತಾನೆ'' ಎಂದು ಆರೋಪಿಸಿದ್ದಾರೆ. ಹಿಂದೂ ಆಗಿರುವವನು ಹೆದರುವುದಿಲ್ಲ, ಇಂಚಿಂಚೂ ಹಿಮ್ಮೆಟ್ಟುವುದಿಲ್ಲ. ನೀವೆಲ್ಲರೂ ಹಿಂದೂಗಳೇ ಹೊರತು ಹಿಂದುತ್ವವಾದಿಗಳಲ್ಲ ಎಂದು ಸಮಾವೆಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗೆ ರಾಹುಲ್ ಹೇಳಿದರು. ಇದು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳಲ್ಲ ಎಂದು ಬಿಜೆಪಿಗೆ ಗುದ್ದು ನೀಡಿದ್ದಾರೆ.

ಅಲ್ಲದೇ ನಾನು ಹಿಂದುತ್ವವಾದಿ ಅಲ್ಲ, ಹಿಂದೂ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮೂರ್ನಾಲ್ಕು ಸ್ನೇಹಿತರು ಏಳು ವರ್ಷಗಳಲ್ಲಿ ದೇಶವನ್ನು ನಾಶ ಮಾಡಿದ್ದಾರೆ. ದೇಶದಲ್ಲಿ ಹಣದುಬ್ಬರ, ನೋವು ಇದ್ದರೆ ಇದೆಲ್ಲಕ್ಕೂ ಹಿಂದುತ್ವವಾದಿಗಳು ಕಾರಣ, ಅವರೇ ಈ ಕೆಲಸ ಮಾಡಿದ್ದಾರೆ. ಹಿಂದುತ್ವವಾದಿಗಳು ಏನೇ ಆಗಲಿ ಆದರೆ ಅಧಿಕಾರ ಬೇಕೆಂದು ಬಯಸುತ್ತಾರೆ ಎಂದೂ ರಾಹುಲ್ ತಿಳಿಸಿದ್ದಾರೆ.

ಹಿಂದೂ ಮತ್ತು ಹಿಂದುತ್ವ ಎರಡು ವಿಭಿನ್ನ ಪದಗಳು ಎಂದು ಬಣ್ಣಿಸಿದ ರಾಹುಲ್, ಎರಡು ಆತ್ಮಗಳು ಒಂದೇ ಆತ್ಮವನ್ನು ಹೊಂದಲು ಸಾಧ್ಯವಿಲ್ಲ, ಅದೇ ರೀತಿಯಲ್ಲಿ ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು. ಯಾರಿಗೂ ಹೆದರದ, ಎಲ್ಲರೂ ಅಪ್ಪಿಕೊಳ್ಳುವವನೇ ಹಿಂದೂ ಎಂದು ಹೇಳಿದರು.

English summary
Congress General Secretary Priyanka Gandhi Vadra, on December 12, hit out at the Centre over growing inflation and said that the BJP-led government wanted to sell everything Congress had built over the last 70 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X