Get Updates
Get notified of breaking news, exclusive insights, and must-see stories!

ರಸ್ತೆಯಲ್ಲಿ ಕಾರು ತಡೆದು ವೈದ್ಯ ದಂಪತಿಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

ವೈದ್ಯ ದಂಪತಿ ಕಾರಿನಲ್ಲಿ ತೆರಳುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದ ಬೈಕ್ ಸವಾರರು ಕಾರನ್ನು ಅಡ್ಡಗಟ್ಟು ಗುಂಡು ಹಾರಿಸಿ ದಂಪತಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಸಂಜೆ ಸುಮಾರು 4.45 ವೇಳೆಗೆ ಘಟನೆ ನಡೆದಿದೆ, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕ್ರಾಸಿಂಗ್ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ.

ಬಳಿಕ ಕಾರಿನ ಬಳಿ ಬಂದಿದ್ದಾರೆ, ಕಾರಿನ ಗ್ಲಾಸ್‌ನ್ನು ಸ್ವಲ್ಪ ಕೆಳಗೆ ಮಾಡಿದ್ದಾರೆ, ಬಳಿಕ ಇಬ್ಬರ ಮೇಲೂ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಬಳಿಕ ಬೈಕ್‌ನಲ್ಲಿ ತೆರಳಿದ್ದಾರೆ.

Caught On CCTV, Doctor Couple In Rajasthan Stopped, Shot Dead in Car

ಆದರೆ ಕೊಲೆ ಹಿಂದಿರುವ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿ ಎರಡು ವರ್ಷಗಳ ಹಿಂದೆ ನಡೆದ ಮಹಿಳೆಯ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದುಬಂದಿದೆ.

ಆಕೆ ವೈದ್ಯನ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆಕೆಯನ್ನು ಹತ್ಯೆ ಮಾಡಿದ್ದಾಗಿ ಸಂಶಯವಿದೆ. ವೈದ್ಯನ ಮೇಲೆ ಗುಂಡು ಹಾರಿಸಿದವನು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದ ಮಹಿಳೆಯ ಸಹೋದರ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ವೈದ್ಯನ ಪತ್ನಿ ಹಾಗೂ ಆಕೆಯ ತಾಯಿ ಇಬ್ಬರೂ ಆರೋಪಿಗಳು ಎಂಬುದು ತಿಳಿದುಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+