• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಹರೂ ವಿರುದ್ಧ ಪೋಸ್ಟ್ ಹಾಕಿದ್ದ ನಟಿ ಪಾಯಲ್ ಗೆ ಜಾಮೀನು

|

ಜೈಪುರ, ಡಿಸೆಂಬರ್ 7: ಹಿಂದಿ ಚಿತ್ರರಂಗದ ನಟಿ, ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ಪಾಯಲ್ ರೋಹ್ಟಗಿ ಅವರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯದಿಂದ ಇಂದು ಜಾಮೀನು ಮಂಜೂರಾಗಿದೆ.

ಭಾನುವಾರದಂದು ರಾಜಸ್ಥಾನದ ಪೊಲೀಸರು ಪಾಯಲ್​ ಅವರನ್ನು ಬಂಧಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ತಮ್ಮನ್ನು ಬಂಧಿಸಲಾಗಿದೆ ಎಂದಿದ್ದರು.

ನೆಹರೂ ಕುಟುಂಬದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ನಟಿ ಬಂಧನ

ರೊಹ್ಟಗಿ ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಣೆ ಆಗಿ, ಡಿಸೆಂಬರ್ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಅದರೆ, ಇಂದು ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟೀ ಪಾಯಲ್​ ರೋಹಟಗಿ ಅವರನ್ನು ಅಹಮದಾಬಾದ್​ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಮೋತಿ ಲಾಲ್​ ನೆಹರೂ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪ ಅವರ ಮೇಲಿದೆ ಎಂದಿದ್ದಾರೆ.

2019ರ ಸೆಪ್ಟೆಂಬರ್​ 21ರಂದು ಪಾಯಲ್​ ರೋಹ್ಟಗಿ ಅವರು ಫೇಸ್ ಬುಕ್ ನಲ್ಲಿ ಮೋತಿಲಾಲ್​ ನೆಹರೂ ಕುಟುಂಬದ ಬಗ್ಗೆ ಮಾತನಾಡಿದ ವಿಡಿಯೋ ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ನೆಹರೂ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು ಎಂಬ ಆರೋಪಿಸಲಾಗಿತ್ತು.

ಕಾಂಗ್ರೆಸ್​ ಮುಖಂಡ, ಸಾಮಾಜಿಕ ಕಾರ್ಯಕರ್ತ ಚಾರ್ಮೇಶ್​ ಶರ್ಮಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬುಂದಿಯ ಸದರ್​ ಠಾಣೆ ಪೊಲೀಸರು ಐಪಿಸಿ ಸೆಕ್ಷನ್​ 66, 67 ನಡಿ ತನಿಖೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ನಾನು ಮೋತಿಲಾಲ್​ ನೆಹರೂ ವಿರುದ್ಧ ಮಾತನಾಡಿ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆದರೆ ವಿಡಿಯೋದ ಎಲ್ಲಾ ಮಾಹಿತಿಗಳನ್ನು ಗೂಗಲ್​ನಿಂದಲೇ ಪಡೆದಿದ್ದು, ಹಾಗಾದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಸುಮ್ಮನೆ ತಮಾಷೆಗಾಗಿ ಇದೆಯೇ ಎಂದು ಪ್ರಧಾನಮಂತ್ರಿ ಸಚಿವಾಲಯ, ಗೃಹಸಚಿವಾಲಯವನ್ನು ಟ್ಯಾಗ್​ ಮಾಡಿ ಪ್ರಶ್ನಿಸಿದ್ದರು.

English summary
Actor Payal Rohatgi, arrested over social media post on Nehru, granted bail by local court in Rajasthan's Bundi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X