Breaking: ರಾಜಸ್ಥಾನದಲ್ಲಿ 4.1 ತೀವ್ರತೆಯ ಭೂಕಂಪ

ಜೈಪುರ, ಆಗಸ್ಟ್‌ 22: ಸೋಮವಾರ ಮುಂಜಾನೆ ರಾಜಸ್ಥಾನದ ಬಿಕಾನೇರ್‌ನ ವಾಯುವ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಸೋಮವಾರ ಮುಂಜಾನೆ 2:01ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 10 ಕಿ.ಮೀ. ವರೆಗೆ ಇದೆ ಎಂದು ಎನ್‌ಸಿಎಸ್ ತಿಳಿಸಿದೆ. ಎನ್‌ಸಿಎಸ್ ಪ್ರಕಾರ ತೀವ್ರತೆಯ ಭೂಕಂಪ 02:01:49 ಸ್ಥಳೀಯ ಕಾಲಮಾನಕ್ಕೆ ಸಂಭವಿಸಿದೆ. ಲ್ಯಾಟ್: 29.38 ಆಗಿದೆ. ಉದ್ದ: 71.45, ಆಳ: 10 ಕಿಮೀ ಆಗಿದೆ. ಸ್ಥಳ: ರಾಜಸ್ಥಾನದ ಬಿಕಾನೇರ್‌ನ 236 ಕಿಮೀ (ಎನ್‌ಡಬ್ಲ್ಯೂ) ಎಂದು ಟ್ವೀಟ್ ಮಾಡಿದ್ದಾರೆ.

ಶನಿವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 5.2 ರ ತೀವ್ರತೆಯ ಭೂಕಂಪವು ಲಕ್ನೋದ ಉತ್ತರ- ಈಶಾನ್ಯಕ್ಕೆ ಅಪ್ಪಳಿಸಿತ್ತು. ಶನಿವಾರ ನಸುಕಿನ 1.12ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ನೆಲದಿಂದ 82 ಕಿ.ಮೀ. ಆಗಿತ್ತು. ಭೂಕಂಪದ ಆಳವು ನೆಲದಿಂದ 82 ಕಿ.ಮೀ. ಆಗಿದೆ ಎಂದು ಎನ್‌ಸಿಎಸ್‌ ತಿಳಿಸಿದೆ. ಈ ಬಗ್ಗೆ 20-08-2022 ರಂದು 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ 01:12:47 ಸ್ಥಳೀಯ ಕಾಲಮಾನ, ಲ್ಯಾಟ್ 28.07 ಮತ್ತು ಉದ್ದ 81.25, ಆಳ 82 ಕಿಮೀ, ಸ್ಥಳ 139 ಕಿಮೀ ಎನ್‌ಎನ್‌ಇ ಲಕ್ನೋ ಎಂದು ಉತ್ತರ ಪ್ರದೇಶದ ರಾಷ್ಟ್ರೀಯ ಕೇಂದ್ರ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿತ್ತು.

4.1 magnitude earthquake in Rajasthan

ಶುಕ್ರವಾರದಂದು ಉತ್ತರಾಖಂಡದ ಪಿಥೋರಗಢ್ ಪ್ರದೇಶದಲ್ಲಿ ಲಘು ಕಂಪನಗಳು ಸಂಭವಿಸಿದವು. ಇದು ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪದಿಂದ ಅಪ್ಪಳಿಸಿತು. ಮಧ್ಯಾಹ್ನ 12.55ಕ್ಕೆ ಭೂಕಂಪ ಸಂಭವಿಸಿತ್ತು. 19-08-2022 ರಂದು ಸಂಭವಿಸಿದ ಭೂಕಂಪವು 3.6 ತೀವ್ರತೆ ಹೊಂದಿತ್ತು. ಸ್ಥಳೀಯ ಕಾಲಮಾನ 12:55:55, ಲ್ಯಾಟ್: 29.96 ಮತ್ತು ಉದ್ದ: 80.12, ಆಳ: 5 ಕಿಮೀ, ಸ್ಥಳ: ಪಿಥೋರಗಢ್‌ನ 43 ಕಿಮೀ ಎಂದು ಎನ್‌ಸಿಎಸ್‌ ಟ್ವೀಟ್ ಮಾಡಿತ್ತು.

Recommended Video

      ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ಸುದ್ದಿ||Govt gives loan of 5 lakhs if Aadhaar card is available||Oneindia

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+