Breaking: ರಾಜಸ್ಥಾನದ ಮೇಜ್ ನದಿಗೆ ಉರುಳಿದ ಬಸ್: 24 ಮಂದಿ ಸಾವು
ಜೈಪುರ್, ಫೆಬ್ರವರಿ 26: ಚಾಲಕನ ನಿಯಂತ್ರಣ ತಪ್ಪಿ ಬಸ್ ಒಂದು ನದಿಗೆ ಉರುಳಿ 24 ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯ ಲಖೇರಿ ಸಮೀಪ ನಡೆದಿದೆ.
ಮದುವೆ ಮುಗಿಸಿಕೊಂಡು ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಮೇಜ್ ನದಿಗೆ ಉರುಳಿ, ಪ್ರಯಾಣಿಕರೆಲ್ಲರೂ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸ್ಥಳೀಯರು ಆಗಮಿಸಿ ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ.

ಕೋಟಾದಿಂದ ಕೋಟಾ-ಲಾಲ್‌ಸೋಟ್ ಹೆದ್ದಾರಿ ಮೂಲಕ ಸವಾಯ್ ಮಾಧೋಪುರಕ್ಕೆ ತೆರಳುತ್ತಿದ್ದರು.80 ಅಡಿ ಎತ್ತರದ ಬ್ರಿಡ್ಜ್‌ನಿಂದ ಬಸ್ ನದಿಗುರುಳಿತ್ತು. ಪಾಪಡಿ ಹಳ್ಳಿಯ ಸಮೀಪ ಘಟನೆ ನಡೆದಿದೆ.
ಬುಂದಿಯಿಂದ 75 ಕಿ,ಮೀ ದೂರದಲ್ಲಿ ಈ ಪ್ರದೇಶವಿದೆ. ಬ್ರಿಡ್ಜ್‌ನಿಂದ ನದಿಗೆ ಬಸ್ ಬಿದ್ದ ತಕ್ಷಣವೇ ಮುಳುಗಿಬಿಟ್ಟಿತ್ತು. ಎಸ್‌ಡಿಆರ್ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.












Click it and Unblock the Notifications