ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಆಸ್ಪತ್ರೆಯಲ್ಲ, ಯಮನ ಆಸ್ಥಾನ: ಒಂದೇ ತಿಂಗಳಲ್ಲಿ 100 ಮಕ್ಕಳ ಮರಣ!

|
Google Oneindia Kannada News

ಜೈಪುರ್, ಜನವರಿ.01: ವೈದ್ಯೋ ನಾರಾಯಣ ಹರಿ ಅಂತಾರೆ. ಆದರೆ, ಇಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಕಾಲಿಟ್ಟರೆ ಮುಗೀತು ಕಥೆ. ಹರಿ-ಹರ-ಬ್ರಹ್ಮರೇ ಬಂದರೂ ರೋಗಿಗಳ ಜೀವಕ್ಕೆ ಇಲ್ಲಿ ಗ್ಯಾರೆಂಟಿ ಇಲ್ಲ. ಹಾಗೆಂದ ಮಾತ್ರಕ್ಕೆ ವೈದ್ಯರನ್ನು ದೂರುವ ಹಾಗೆಯೂ ಇಲ್ಲ.
ಹೌದು, ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿರುವ ಜೆ.ಕೆ.ಲೋನ ಸರ್ಕಾರಿ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳು ಹೋಗುವ ಹಾಗೇ ಇಲ್ಲ. ಏಕೆಂದರೆ ಸರ್ಕಾರಿ ಆಸ್ಪತ್ರೆ ಬಗ್ಗೆ ಜನರಲ್ಲಿ ಅಂಥದೊಂದು ಭಯದ ವಾತಾವರಣ ಸೃಷ್ಟಿಯಾಗಿ ಬಿಟ್ಟಿದೆ.

ಜೈಪುರ ಬಾಂಬ್ ಸ್ಪೋಟ; ನಾಲ್ವರು ಅಪರಾಧಿಗಳಿಗೆ ಗಲ್ಲು
ಕಳೆದ ಒಂದು ತಿಂಗಳಿನಲ್ಲಿ ತಾಯಿಯ ಮಡಿಲು ಸೇರುವ ಮೊದಲೇ 100ಕ್ಕೂ ಹೆಚ್ಚು ಹಸುಗೂಸುಗಳ ಪ್ರಾಣ ಬಿಟ್ಟಿವೆ. ವೈದ್ಯರ ನಿರ್ಲಕ್ಷ್ಯವೋ, ಮೂಲಭೂತ ಸೌಕರ್ಯವೇ ಈ ಎಲ್ಲ ದುರಂತಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಪುಟ್ಟ ಕಂದಮ್ಮಗಳನ್ನು ಕಳೆದುಕೊಂಡ ಹೆತ್ತವರ ಮನಸುಗಳು ಮರಗುತಿವೆ.

100 New Borns Have Lost Their Lives In Past One Month

2 ದಿನಗಳಲ್ಲಿ ಸಾವಿನ ಮನೆಗೆ 8 ಕಂದಮ್ಮ

2 ದಿನಗಳಲ್ಲಿ ಸಾವಿನ ಮನೆಗೆ 8 ಕಂದಮ್ಮ

ಒಂದಲ್ಲ ಎರಡಲ್ಲ ಎಂಟು ಹಸುಗೂಸುಗಳ ತಾಯಿ ಮುಖ ನೋಡುವ ಮೊದಲೇ ಕಣ್ಣು ಮುಚ್ಚಿವೆ. ಎರಡು ದಿನಗಳಲ್ಲೇ ಎಂಟು ಕಂದಮ್ಮಗಳು ವಿವಿಧ ಕಾರಣದಿಂದ ಸಾವನ್ನಪ್ಪಿವೆ ಎಂದು ಕೋಟಾ ಜಿಲ್ಲೆಯ ಜೆ.ಕೆ.ಲೋನ ಸರ್ಕಾರಿ ಆಸ್ಪತ್ರೆಯ ಹೆಚ್ಒಡಿ ಡಾ.ಅಮೃತ್ ಲಾಲ್ ಮಾಹಿತಿ ನೀಡಿದ್ದಾರೆ.

ಕಂದಮ್ಮನ ಕಳೆದುಕೊಂಡ ಹೆತ್ತವರ ಕಣ್ಣೀರು

ಕಂದಮ್ಮನ ಕಳೆದುಕೊಂಡ ಹೆತ್ತವರ ಕಣ್ಣೀರು

ಜೆ.ಕೆ.ಲೋನ ಸರ್ಕಾರಿ ಆಸ್ಪತ್ರೆ ಒಂದರಲ್ಲೇ ಕಳೆದ ಡಿಸೆಂಬರ್ ಒಂದೇ ತಿಂಗಳಿನಲ್ಲಿ 100 ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇದರಿಂದ ಮಹಿಳೆಯರು ಈ ಆಸ್ಪತ್ರೆಗೆ ಬರುವುದಕ್ಕೆ ಭಯ ಪಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕ್ಷೇತ್ರದಲ್ಲೇ ಹೀಗೆ!

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕ್ಷೇತ್ರದಲ್ಲೇ ಹೀಗೆ!

ಕೋಟಾ-ಬುಂದಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಜೆ.ಕೆ. ಲೋನ ಆಸ್ಪತ್ರೆಯು ಜಿಲ್ಲೆಯ ಅತಿದೊಡ್ಡ ಆಸ್ಪತ್ರೆಯಾಗಿದೆ. ಈ ಕ್ಷೇತ್ರವು ಲೋಕಸಭಾ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರ ವ್ಯಾಪ್ತಿಗೆ ಬರುತ್ತದೆ. ಈ ಘಟನೆಗಳ ಬಗ್ಗೆ ಸ್ಪೀಕರ್ ಅವರಿಗೆ ಮಾಹಿತಿ ಇದೆಯೋ ಇಲ್ಲವೋ. ಆದರೆ, ಜನನಾಯಕರು ಮಾತ್ರ ಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂಬುವುದಕ್ಕೆ ಈ ಸರ್ಕಾರಿ ಆಸ್ಪತ್ರೆಯೇ ಉತ್ತಮ ಉದಾಹರಣೆಯಾಗಿದೆ.

ವೈದ್ಯರಿಲ್ಲದ ಆಸ್ಪತ್ರೆ ನಂಬುವುದು ಹೇಗೆ?

ವೈದ್ಯರಿಲ್ಲದ ಆಸ್ಪತ್ರೆ ನಂಬುವುದು ಹೇಗೆ?

ಕೋಟಾ ಜಿಲ್ಲೆಯ ಅತಿದೊಡ್ಡ ಆಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದ್ದು, ರೋಗಿಗಳಿಗೆ ಅಗತ್ಯವಾಗಿ ಬೇಕಿರುವ ಮೂಲಭೂತ ಸೌಕರ್ಯಗಳೇ ಇಲ್ಲ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಯಿಂದ ರೋಗ ವಾಸಿಯಾಗುವ ಬದಲು ಒಬ್ಬರಿಂದ ಒಬ್ಬರಿಗೆ ಹರಡುವಂತಾ ಪರಿಸ್ಥಿತಿಯಿದೆ. ಇದರ ಜೊತೆಗೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿ ಕಾಡುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಈ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ ಎಂಬ ಆರೋಪವೂ ಕೇಳಿ ಬಂದಿದೆ.

English summary
100 New Borns Have Lost Their Lives In Past One Month At Rajastan Government Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X