ಬಹ್ರೈನ್‌ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದೇನು?

Posted By: Gururaj
Subscribe to Oneindia Kannada

ಬಹ್ರೈನ್, ಜನವರಿ 08 : 'ಸರ್ಕಾರ ಉದ್ಯೋಗ ಸೃಷ್ಟಿ ಮಾಡದೆ, ಜನರನ್ನು ಒಂದುಗೂಡಿಸದೆ ನಿರುದ್ಯೋಗಿಗಳಲ್ಲಿ ಭಯ ಹುಟ್ಟಿಸುತ್ತಿದೆ. ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ' ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಹ್ರೈನ್‌ ಪ್ರವಾಸದಲ್ಲಿದ್ದಾರೆ. ಭಾರತೀಯ ಸಂಜಾತರ ಜಾಗತಿಕ ಸಂಸ್ಥೆ (ಜಿಓಪಿಐಓ) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಜಿಡಿಪಿ ಇಳಿಕೆ: ಟ್ವೀಟ್ ಮೂಲಕ ಮೋದಿ ಕಾಲೆಳೆದ ರಾಹುಲ್

'ಎಂಟು ವರ್ಷಗಳಲ್ಲಿಯೇ ಉದ್ಯೋಗ ಸೃಷ್ಟಿಯಲ್ಲಿ ನಾವು ಹಿಂದಿದ್ದೇವೆ. ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ಶಿಕ್ಷಣಕ್ಕೆ ಒತ್ತು ಕೊಡುವುದು ಬಿಟ್ಟು ಜಾತಿ, ಪಂಥದ ವಿಭಜನೆ ಕಾಣುತ್ತಿದ್ದೇವೆ' ಎಂದು ದೂರಿದರು.

Rahul Gandhi

'ನಿಮ್ಮ ಬುದ್ಧಿಶಕ್ತಿ, ಕೌಶಲ್ಯ ಮುಂತಾದವುಗಳು ಭಾರತಕ್ಕೆ ಇಂದು ಅಗತ್ಯವಾಗಿವೆ. ದೇಶವನ್ನು ಹೇಗೆ ಕಟ್ಟಬೇಕು? ಎಂದು ನೀವು ಸಲಹೆ ನೀಡಬೇಕು' ಎಂದು ರಾಹುಲ್ ಕರೆ ನೀಡಿದರು.

'ಉದ್ಯೋಗ ಸೃಷ್ಟಿ ಮಾಡುವಲ್ಲಿ ಜನರನ್ನು ಒಂದುಗೂಡಿಸುವಲ್ಲಿ ಸರ್ಕಾರ ಸೋತಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ. ಸರ್ಕಾರ ನಿರುದ್ಯೋಗಿಗಳಲ್ಲಿ ಭಯ ಹುಟ್ಟಿಸುವ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ' ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Your talent, skills, tolerance, patriotism is what India needs today said AICC president Rahul Gandhi. Rahul Gandhi addressed Global Organisation of People of Indian Origin in Bahrain.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ