ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಮನ್: ನಾಪತ್ತೆಯಾಗಿದ್ದ 6 ಭಾರತೀಯರ ಶವ ಪತ್ತೆ

|
Google Oneindia Kannada News

ನವದೆಹಲಿ,ಸೆಪ್ಟೆಂಬರ್. 11: ಯೆಮನ್‌ ನಲ್ಲಿ ನಾಪತ್ತೆಯಾಗಿದ್ದ 7 ಜನ ಭಾರತೀಯರ ಪೈಕಿ 6 ಜನರು ಶವವಾಗಿ ಪತ್ತೆಯಾಗಿದ್ದಾರೆ. ಅಕ್ರಮ ತೈಲ ಸಾಗಾಟಗಾರರನ್ನು ಗುರಿ ಇರಿಸಿ ಕಳೆದ ವಾರ ಸೌದಿ ಅರೇಬಿಯ ದಾಳಿ ನಡೆಸಿದ್ದ ವೇಳೆ 7 ಜನ ಭಾರತಿಯರು ನಾಪತ್ತೆಯಾಗಿದ್ದರು.

ಮೊದಲು ದಾಳಿಯಲ್ಲಿ 20 ಜನ ಭಾರತೀಯರು ಮೃತಪಟ್ಟಿದ್ದರೆಂದು ಮೊದಲು ವರದಿಯಾಗಿತ್ತು. ಆದರೆ 13 ಜನ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿತ್ತು.[ಯೆಮೆನ್ ನಿಂದ ಬಂದ ಆತಂಕಕಾರಿ ಸುದ್ದಿ ಏನು]

india

ಯೆಮನ್‌ನ ಅಲ್‌ ಹುದೈದಾ ಬಂದರಿನ ಬಳಿ ನಡೆದ ವಾಯು ದಾಳಿಯಲ್ಲಿ ಎರಡು ದೋಣಿಗಳು ಧ್ವಂಸ ಗೊಂಡಿದ್ದವು. 12 ಶಿಯಾ ಬಂಡುಕೋರರು ಮೃತಪಟ್ಟಿದ್ದರು. ಭಾರತೀಯರು ಸೇರಿದಂತೆ ಅನೇಕ ದೇಶದ ಪ್ರಜೆಗಳು ಯೆಮನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾಗ ಕೇಂದ್ರ ಸರ್ಕಾರ ಮುಂದಾಗಿ ರಕ್ಷಣೆ ಮಾಡಿ ಸ್ವದೇಶಕ್ಕೆ ಸಂತ್ರಸ್ತರನ್ನು ಕರೆದುಕೊಂಡು ಬಂದಿತ್ತು.

ತೈಲ ಕಳ್ಳ ಸಾಗಣೆದಾರು ಎಂದು ಭಾರತೀಯರನ್ನು ತಪ್ಪು ಭಾವಿಸಿದ ಸೇನೆ ದಾಳಿ ನಡೆಸಿತ್ತು. ಅರಬ್ ದೇಶಗಳಲ್ಲಿ ಪ್ರತಿದಿನ ಆಂತರಿಕ ಭದ್ರತೆಗೆ ಧಕ್ಕೆ ಬರುವಂತ ಕೆಲಸಗಳು ನಡೆಯುತ್ತಿವೆ. [ಯೆಮನ್ ಗೊಂದಲದ ವೇಳೆ ಕೇಂದ್ರ ಸರ್ಕಾರ ಏನು ಮಾಡುತ್ತು?]

ಸೌದಿ ಅರೇಬಿಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇಪ್ಪತ್ತು ಭಾರತೀಯರು ಮೃತ ಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಸೆಪ್ಟೆಂಬರ್ ರಂದು ವರದಿ ಮಾಡಿತ್ತು. ನಡೆದ ಕ್ಷಿಪಣಿ ದಾಳಿಯಲ್ಲಿ ಅರವತ್ತಕ್ಕೂ ಹೆಚ್ಚು ಸೌದೀ, ಬಹ್ರೇನ್ ಮತ್ತು ಗಲ್ಫಿನ ಸೈನಿಕರು ಮೃತ ಪಟ್ಟಿದ್ದರು. ಈ ಘಟನೆಯ ನಂತರ ಸೌದೀ ಅರೇಬಿಯಾ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು.

English summary
Bodies of six out of seven Indians missing after two boats carrying 21 people came under aerial bombardment in Yemen have been found, the external affairs ministry said on Friday. Media report s, quoting residents and fishermen, had initially claimed at least 20 Indian nationals were killed in air strikes by Saudi-led coalition forces on fuel smugglers at Yemen's Hodeidah port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X