ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

ಬೀಜಿಂಗ್, ಏಪ್ರಿಲ್ 17: ಇಡೀ ವಿಶ್ವದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಮಾರಣಾಂತಿಕ ನೋವೆಲ್ ಕೊರೊನಾ ವೈರಸ್ ಮೊಟ್ಟ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ.

Recommended Video

      ಇದು ನಿಜವಾಗಿಯೂ ನಮ್ಮ‌ ಬೆಂಗಳೂರೇನಾ?ನೀವೇ ನೋಡಿ ಹೇಳಿ | Bengaluru | oneindia kannada

      ನೋವೆಲ್ ಕೊರೊನಾ ವೈರಸ್ 'ಮೂಲ'ದ ಬಗ್ಗೆ ಹಲವು ಅನುಮಾನಗಳಿವೆ. ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಕೊರೊನಾ ವೈರಸ್ 'ಲೀಕ್' ಆಯ್ತೋ ಅಥವಾ ಅಲ್ಲಿನ ಸೀ ಫುಡ್ ಮಾರುಕಟ್ಟೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತೋ.. ಖಚಿತವಾಗಿ ಬಲ್ಲವರಿಲ್ಲ. ಆದರೆ, 'ಕಿಲ್ಲರ್' ಕೊರೊನಾ ವೈರಸ್ ವುಹಾನ್ ನಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿದ್ದು ಮಾತ್ರ ಸುಳ್ಳಲ್ಲ.

      ಕೋವಿಡ್-19 ನಿಂದಾಗಿ ನಗರದಲ್ಲಿ ಏನಿಲ್ಲ ಅಂದರೂ 42 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ವುಹಾನ್ ನಿವಾಸಿಗಳೇ ಇತ್ತೀಚೆಗಷ್ಟೇ ಬಾಯ್ಬಿಟ್ಟಿದ್ದರು. ಆದ್ರೀಗ, ಕೊರೊನಾ ವೈರಸ್ ನಿಂದಾಗಿ ವುಹಾನ್ ನಗರದಲ್ಲಿ ಉಂಟಾದ ಸಾವಿನ ಸಂಖ್ಯೆ ಬಗ್ಗೆ ಚೀನಾ ಸರ್ಕಾರ ಹೊಸ ಲೆಕ್ಕ ನೀಡಿದೆ.

      ಹಾಗಾದ್ರೆ, ಚೀನಾ ಸರ್ಕಾರದ ಪ್ರಕಾರ, ವುಹಾನ್ ನಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅಂತೀರಾ.? ನೀವೇ ಓದಿರಿ...

      ಹೊಸ ಲೆಕ್ಕ

      ಹೊಸ ಲೆಕ್ಕ

      ಹಳೇ ಲೆಕ್ಕದ ಪ್ರಕಾರ, ವುಹಾನ್ ನಲ್ಲಿ ಕೊರೊನಾ ವೈರಸ್ ನಿಂದ 2579 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾ ಸರ್ಕಾರ ಮಾಹಿತಿ ನೀಡಿತ್ತು. ಆದ್ರೆ ಈಗ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿದ್ದು, 50% ರಷ್ಟನ್ನು ಸಾವಿನ ಪ್ರಮಾಣವನ್ನು (1290) ಹೆಚ್ಚಿಸಲಾಗಿದೆ. ಅಲ್ಲಿಗೆ, ಕೋವಿಡ್-19 ನಿಂದ ವುಹಾನ್ ನಲ್ಲಿ ಒಟ್ಟು 3,869 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಚೀನಾ ಸರ್ಕಾರ 'ಹೊಸ' ಲೆಕ್ಕ ನೀಡಿದೆ.

      ಹಲವು ಕೇಸ್ ಗಳು ದಾಖಲಾಗಿಲ್ಲ

      ಹಲವು ಕೇಸ್ ಗಳು ದಾಖಲಾಗಿಲ್ಲ

      ವುಹಾನ್ ನಗರದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿದಾಗ, ಎಷ್ಟೋ ಜನ ಮನೆಯಲ್ಲೇ ಪ್ರಾಣ ಕಳೆದುಕೊಂಡಿದ್ದರು. ಆಸ್ಪತ್ರೆಯವರೆಗೂ ಹಲವು ಕೇಸ್ ಗಳು ಬರಲೇ ಇಲ್ಲ. ಹೀಗಾಗಿ, ವುಹಾನ್ ನಲ್ಲಿನ ಸಾವಿನ ಸಂಖ್ಯೆಯನ್ನು ಇದೀಗ ಪರಿಷ್ಕರಿಸಲಾಗಿದೆ. ಹಾಗೇ, ಸೋಂಕಿತರ ಸಂಖ್ಯೆಯನ್ನು 50,333ಕ್ಕೆ ಏರಿಸಲಾಗಿದೆ.

      ದಿಢೀರ್ ಪರಿಷ್ಕರಣೆ ಯಾಕೆ.?

      ದಿಢೀರ್ ಪರಿಷ್ಕರಣೆ ಯಾಕೆ.?

      ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಪ್ರಾಣ ನುಂಗಿರುವ ಕೊರೊನಾ ವೈರಸ್ ನಿಂದ ತಮ್ಮ ರಾಷ್ಟ್ರದಲ್ಲಿ ಆಗಿರುವ 'ಅಸಲಿ' ಸಾವಿನ ಸಂಖ್ಯೆಯನ್ನು ಚೀನಾ ಬಿಚ್ಚಿಡುತ್ತಿಲ್ಲ ಎಂದು ಹಲವು ರಾಷ್ಟ್ರಗಳ ನಾಯಕರು ಬೆಟ್ಟು ಮಾಡಿ ತೋರಿಸಿದ ಮೇಲೆ ವುಹಾನ್ ನಲ್ಲಿನ ಸೋಂಕಿತರು ಮತ್ತು ಸಾವಿನ ಸಂಖ್ಯೆಯನ್ನು ಪರಿಷ್ಕರಿಸಿ, 'ಏರಿಕೆ' ತೋರಿಸಲಾಗಿದೆ.

      ಮರೆಮಾಚಿಲ್ಲವಂತೆ.!

      ಮರೆಮಾಚಿಲ್ಲವಂತೆ.!

      ''ವೈರಸ್ ಏಕಾಏಕಿ ಹರಡಿದ್ದರಿಂದ, ಹಲವು ಪ್ರಕರಣಗಳು ಲೆಕ್ಕಕ್ಕೆ ಸಿಕ್ಕಿಲ್ಲ. ಅದು ಬಿಟ್ಟರೆ, ನಾವು ಯಾವುದನ್ನೂ ಮರೆಮಾಚಿಲ್ಲ'' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ತಿಳಿಸಿದ್ದಾರೆ.

      ಚೀನಾದಲ್ಲಿ ಒಟ್ಟು 4632 ಸಾವು

      ಚೀನಾದಲ್ಲಿ ಒಟ್ಟು 4632 ಸಾವು

      ವುಹಾನ್ ನಗರದಲ್ಲಿ ಸಾವಿನ ಸಂಖ್ಯೆ ಪರಿಷ್ಕರಿಸಲಾಗಿರುವುದರಿಂದ, ಚೀನಾದಲ್ಲಿ ಕೊರೊನಾ ವೈರಸ್ ನಿಂದ ಸಾವಿಗೀಡಾದವರ ಸಂಖ್ಯೆ 4632 ಆಗಿದೆ. ಸಾವಿನ ಸಂಖ್ಯೆ ಬಗ್ಗೆ ಸರ್ಕಾರ ಹೊಸ ಲೆಕ್ಕ ಕೊಟ್ಟಿದ್ದರೂ, ಅದನ್ನ ನಂಬಲು ಯಾರೂ ತಯಾರಿಲ್ಲ.

      ವಿಶ್ವದ ಅಂಕಿ-ಅಂಶ

      ವಿಶ್ವದ ಅಂಕಿ-ಅಂಶ

      ಕೊರೊನಾ ವೈರಸ್ ಸೋಂಕು ಪೀಡಿತರು - 21,96,567

      ಕೋವಿಡ್-19 ನಿಂದ ಸಾವಿಗೀಡಾದವರು - 1,47,508

      ಕೊರೊನಾ ವಿರುದ್ಧ ಹೋರಾಡಿ ಸಂಪೂರ್ಣವಾಗಿ ಗುಣಮುಖರಾದವರು - 5,57,501

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+