ರಷ್ಯಾದಲ್ಲಿ ಕಣ್ಮರೆಯಾಗಿದ್ದ ವಿಮಾನ ಅವಶೇಷ ಪತ್ತೆ; 28 ಮಂದಿ ಸಾವು

ಮಾಸ್ಕೋ, ಜುಲೈ 06: ರಷ್ಯಾದ ಪೂರ್ವವಲಯದಲ್ಲಿ ಮಂಗಳವಾರ ಬೆಳಿಗ್ಗೆ ಕಣ್ಮರೆಯಾಗಿದ್ದ AN 26 ವಿಮಾನ ಅವಶೇಷ ಪತ್ತೆಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 28 ಮಂದಿ ಸಾವನ್ನಪ್ಪಿರುವುದಾಗಿ ಇಂಟರ್‌ಫ್ಯಾಕ್ಸ್ ಹಾಗೂ ಆರ್‌ಐಎ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಮಂಗಳವಾರ ಬೆಳಿಗ್ಗೆ ರಷ್ಯಾದ ಪೂರ್ವ ವಲಯದ ಕಮ್ಚಟ್ಕಾ ಪೆನೆನ್ಸುಲಾದಿಂದ ಪಲಾನಾ ಕಡೆಗೆ ಹೊರಟಿದ್ದ ವಿಮಾನ ಕೆಳಗಿಳಿಯುವ ಪ್ರಯತ್ನದಲ್ಲಿದ್ದಾಗ ಟ್ರಾಫಿಕ್ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡು ಕಣ್ಮರೆಯಾಗಿತ್ತು. ನಂತರ ವಿಮಾನವು ಸಮುದ್ರದಲ್ಲಿ ಪತನವಾಗಿರುವುದಾಗಿ ತಿಳಿದುಬಂದಿತ್ತು. ಇದೀಗ ಪರಿಶೀಲನೆ ನಡೆಸಿದ್ದು, ವಿಮಾನದಲ್ಲಿದ್ದ 28 ಮಂದಿಯೂ ಸಾವನ್ನಪ್ಪಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾಪತ್ತೆಯಾಗಿದ್ದ ವಿಮಾನದ ಅವಶೇಷಗಳು ಒಕೋಸ್ಕ್‌ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ವಿಮಾನ ನಿಲ್ದಾಣದ ರನ್ ವೇ ಇಂದು ಇದು ಐದು ಕಿ.ಮೀ ದೂರದಲ್ಲಿದೆ.

Wreckage Of Plane Found And All 28 Killed In Crash At Russia

AN 26 ವಿಮಾನದಲ್ಲಿ 22 ಪ್ರಯಾಣಿಕರು, ಆರು ಮಂದಿ ವಿಮಾನ ಸಿಬ್ಬಂದಿ ಇದ್ದರು. ಪ್ರಯಾಣಿಕರ ಪೈಕಿ ಎರಡು ಮಕ್ಕಳಿದ್ದವು. ರಷ್ಯಾದಲ್ಲಿ ಕೊನೆಯ ಬಾರಿ 2019ರಲ್ಲಿ ವಿಮಾನ ಅಪಘಾತ ಸಂಭವಿಸಿತ್ತು. ಅದರಲ್ಲಿ 41 ಮಂದಿ ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+