ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಮಹಾಯುದ್ಧ ಪರಮಾಣು ಮತ್ತು ವಿನಾಶಕಾರಿ ಆಗಿರಲಿದೆ ಎಂದ ರಷ್ಯಾ ಸಚಿವ

|
Google Oneindia Kannada News

ಕೀವ್, ಮಾರ್ಚ್ 2: ಮೂರನೇ ಮಹಾಯುದ್ಧವು 'ಪರಮಾಣು ಮತ್ತು ವಿನಾಶಕಾರಿ' ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದು, ಯಾವುದೇ ಕಾರಣಕ್ಕೂ ಉಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ರಷ್ಯಾ ಅನುಮತಿಸುವುದಿಲ್ಲ ಎಂದಿದ್ದಾರೆ.

ರಷ್ಯಾ ಎಲ್ಲಾ ನಿರ್ಬಂಧಗಳಿಗೆ ಸಿದ್ಧವಾಗಿದೆ. ಆದರೆ ಪಶ್ಚಿಮ ಭಾಗವು ತನ್ನ ಕ್ರೀಡಾಪಟುಗಳು, ಪತ್ರಕರ್ತರು ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಗಳನ್ನು ಗುರಿಯಾಗಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಲಾವ್ರೊವ್ ಹೇಳಿದ್ದಾರೆ.

Russia-Ukraine War Live Updates: ಖಾರ್ಕಿವ್‌ನಲ್ಲಿ ಪೊಲೀಸ್ ಕಟ್ಟಡದ ಮೇಲೆ ರಷ್ಯಾ ದಾಳಿRussia-Ukraine War Live Updates: ಖಾರ್ಕಿವ್‌ನಲ್ಲಿ ಪೊಲೀಸ್ ಕಟ್ಟಡದ ಮೇಲೆ ರಷ್ಯಾ ದಾಳಿ

ಉಕ್ರೇನ್‌ನ ವಿರುದ್ಧ ರಷ್ಯಾದ ನಡೆಸುತ್ತಿರುವ ಸಮರವು ಏಳನೇ ದಿನಕ್ಕೆ ಕಾಲಿಟ್ಟಿದೆ. ಕೀವ್ ಮತ್ತು ಇತರ ದೊಡ್ಡ ನಗರಗಳಲ್ಲಿ ರಷ್ಯಾದ ಆಕ್ರಮಣ ತೀವ್ರಗೊಂಡಿದೆ. ಉಕ್ರೇನ್‌ನ ಭದ್ರತಾ ಸೇವೆಯನ್ನು ಹೊಡೆದು ಹಾಕಲಾಗುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

World War III would be nuclear and destructive, Says Russian Foreign Minister

ಖಾರ್ಕಿವ್ ನಗರದಲ್ಲಿ ಹೆಚ್ಚಿನ ದಾಳಿ:

ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್ ಅನ್ನು ರಾಕೆಟ್‌ಗಳು ಮತ್ತು ಭಾರೀ ಫಿರಂಗಿ ಗುಂಡಿನ ದಾಳಿಯ ಮೂಲಕ ಹೊಡೆದುರುಳಿಸಲಾಗುತ್ತಿದೆ. ಈ ಹಂತದಲ್ಲಿ ರಷ್ಯಾ ಪಡೆಗಳು ತಮ್ಮ ಸೇನಾ ಕಾರ್ಯಾಚರಣೆಗಳನ್ನು ಗಣನೀಯವಾಗಿ ಹೆಚ್ಚಿಸಿದವು. ಖಾರ್ಕಿವ್‌ನಲ್ಲಿ ನಡೆದ ಶೆಲ್ ದಾಳಿಯಲ್ಲಿ ನವೀನ್ ಎಂಬ ಭಾರತೀಯ ವಿದ್ಯಾರ್ಥಿಯೂ ಸಾವನ್ನಪ್ಪಿದ್ದರು.

ಶೆಲ್ ದಾಳಿಯನ್ನು "ಯುದ್ಧ ಅಪರಾಧ" ಎಂದ ಝೆಲೆನ್ಸ್ಕಿ:

ಖಾರ್ಕಿವ್‌ನಲ್ಲಿ ನಡೆದ ಶೆಲ್ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ "ಯುದ್ಧ ಅಪರಾಧ" ಎಂದು ಕರೆದಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತನ್ನ ರಾಷ್ಟ್ರದ ಪರಮಾಣು ಪಡೆಗಳಿಗೆ ಪಶ್ಚಿಮದೊಂದಿಗಿನ ಉದ್ವಿಗ್ನತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ನೀಡುವಂತೆ ಆದೇಶಿಸಿದ್ದಾರೆ. ತದನಂತರ ರಷ್ಯಾ ಕೂಡ ಬ್ಯಾರೆಂಟ್ಸ್ ಸಮುದ್ರದಲ್ಲಿ ಅಭ್ಯಾಸವನ್ನು ನಡೆಸಿದೆ.

ಇದರ ಮಧ್ಯೆ ಯುಎಸ್ ಅಧ್ಯಕ್ಷ ಜೋ ಬೈಡನ್ ಉಕ್ರೇನ್‌ಗೆ ತಮ್ಮ ಬೆಂಬಲವನ್ನು ಬಲಪಡಿಸಿದ್ದಾರೆ. ಆದರೆ ರಷ್ಯಾ ವಿರುದ್ಧದ ಹೋರಾಟದಲ್ಲಿ ಯುಎಸ್ ಭಾಗಿಯಾಗುವುದಿಲ್ಲ ಎಂದು ಹೇಳಿದರು.

English summary
Russia-Ukraine War: World War III would be nuclear and destructive, Says Russian Foreign Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X