ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟ್ಟು ಪಕ್ಕಕ್ಕಿಟ್ಟು ಫಕ್ಕನೆ ಹಾಗೇ ನಕ್ಕುಬಿಡಿ ಸುಮ್ಮನೆ!

|
Google Oneindia Kannada News

ನಗುವಿಗಿಂತ ಸುಂದರ ಆಭರಣವಿಲ್ಲ. ಒಂದು ಅಸಹನೀಯ ವಾತಾವರಣದಲ್ಲೂ ಸಂಭ್ರಮವನ್ನು ಬಿತ್ತುವ ಶಕ್ತಿ ಇರುವುದು ನಗುವಿಗೆ ಮಾತ್ರ.

ನಗಬಾರದಪ್ಪಾ ನಗಬಾರದು, ನಗಬಾರದಮ್ಮಾ ನಗಬಾರದು!ನಗಬಾರದಪ್ಪಾ ನಗಬಾರದು, ನಗಬಾರದಮ್ಮಾ ನಗಬಾರದು!

ವ್ಯಕ್ತಿಯ ಸೌಂದರ್ಯ ದುಪ್ಪಟ್ಟಾಗುವುದು ಆತನ ನಗುವಿನಿಂದಲೇ. ಒಂದು ನಗುವಿಗೆ ಏನೆಲ್ಲ ಶಕ್ತಿಯಿದೆ! ಅಷ್ಟಕ್ಕೂ ಈ ನಗುವಿನ ಕುರಿತು ಇಷ್ಟೆಲ್ಲ ಪೀಠಿಕೆ ಯಾಕೆ ಅಂದ್ರೆ ಇವತ್ತು(ಅಕ್ಟೋಬರ್ 6) ವಿಶ್ವ ನಗು ದಿನ. ಪ್ರತಿ ವರ್ಷ ಅಕ್ಟೋಬರ್ ತಿಂಗಳ ಮೊದಲ ಶುಕ್ರವಾರವನ್ನು ವಿಶ್ವ ನಗು ದಿನ ಎಂದು ಆಚರಿಸಲಾಗುತ್ತದೆ.

ಅಪ್ಪನ ಜತೆಯಲ್ಲಿರುವ ಆಂಟಿ ಯಾರು?ಅಪ್ಪನ ಜತೆಯಲ್ಲಿರುವ ಆಂಟಿ ಯಾರು?

ವ್ಯಕ್ತಿಯೊಬ್ಬನ ಬದುಕಿನಲ್ಲಿ ನಗು ಎಂಬುದು ಮಹತ್ವದ ಪಾತ್ರ ವಹಿಸಿರುವ ಹಿನ್ನೆಲೆಯಲ್ಲಿ ನಗುವಿಗೆ ಇಂಥ ಸ್ಥಾನಮಾನ. ನಗು ಒಂದೇ ಆದರೆ ಅದರ ರೀತಿ ನೂರಾರು, ಅರ್ಥವಂತೂ ಸಾವಿರಾರು! ಹೌದು, ಪ್ರತಿ ನಗುವಿಗೂ ಅರ್ಥವಿದೆ. ಮನಃಶಾಸ್ತ್ರಜ್ಞರೇ ಹೇಳುವಂತೆ ವ್ಯಕ್ತಿಯ ನಗು ಆತನ ಸ್ವಭಾವವನ್ನು ಹೇಳಬಲ್ಲದಂತೆ. ನಗುವಿನಲ್ಲಿ ಹಲವು ನಮೂನೆಗಳಿದ್ದರೂ ಬಹುಮುಖ್ಯ 5 ವಿಧದ ನಗು ಮತ್ತು ಆ ನಗುವಿನ ಅರ್ಥ, ಆ ನಗುವಿನ ವ್ಯಕ್ತಿಯ ಸ್ವಭಾವವನ್ನು ಇಲ್ಲಿ ಹೇಳಲಾಗಿದೆ.

ಬಿಗಿತುಟಿಯ ನಗು

ಬಿಗಿತುಟಿಯ ನಗು

ಹಲವರಿಗೆ ಹಲ್ಲುಬಿಟ್ಟು ನಗುವುದಂದ್ರೆ ಅಲರ್ಜಿ. ಇಷ್ಟವಿಲ್ಲದಿದ್ದರೂ ನಗಲೇಬೇಕಾದ ಅನಿವಾರ್ಯತೆ ಬಂದಾಗ ತುಟಿಬಿಗಿ ಹಿಡಿದು ಹೌದೋ ಅಲ್ಲವೋ ಎಂಬಂತೆ ನಕ್ಕಿರುತ್ತೇವೆ. ಈ ನಗುವಿಗೆ ಎರಡು ಅರ್ಥವಿದೆ. ಒಂದು ಇದು ನಕಲಿ ನಗು. ಅಂದರೆ ಹೃದಯದಿಂದ ಬಂದ ನಗುವಲ್ಲ ಎಂದರ್ಥ. ಇನ್ನೊಂದು ರೀತಿಯಲ್ಲಿ ಹೀಗೆ ತುಟಿಬಿಗಿಹಿಡಿದು ನಗುವವರು ಬೇರೆಯವರೆದುರು ಸೌಜನ್ಯಪೂರ್ವಕವಾಗಿ ನಕ್ಕಿರುತ್ತಾರೆ. ಅದೊಂದು ಫಾರ್ಮಾಲಿಟಿಯ ನಗುವಷ್ಟೆ. ಸದಾ ಹೀಗೆಯೇ ನಗುವ ವ್ಯಕ್ತಿಯ ಸ್ವಭಾವ ಹೇಗಿರುತ್ತೆ ಗೊತ್ತಾ? ಆತ ಅಂಜಿಕೆ ಸ್ವಭಾವದವನಾಗಿರುತ್ತಾನಂತೆ, ನಾಚಿಕೆ, ಅನುಕಂಪ, ಒಂಥರಾ ಮಿತಭಾಷಿ, ಭಾವನೆಗಳನ್ನೆಲ್ಲ ಹತ್ತಿಕ್ಕಿಕೊಳ್ಳುವ ಸ್ವಭಾವದವರಾಗಿರುತ್ತಾರಂತೆ. ಅಷ್ಟೇ ಅಲ್ಲ, ಇಂಥವರು ಹಲ್ಲುಗಳನ್ನು ತುಟಿಯ ಹಿಂದೆ ಅವಿತಿಟ್ಟುಕೊಂಡಂತೆ ಅವರು ಗುಟ್ಟುಗಳನ್ನೂ ರಕ್ಷಿಸುವ ಸ್ವಭಾವದವರಾಗಿರುತ್ತಾರೆ.

ಓರೆನಗು!

ಓರೆನಗು!

ಕೆಲವರು ನಗುವುದು ಹಾಗೇ. ತುಟಿಯನ್ನು ಬಿಗಿದುಕೊಂಡು ತುಟಿಯು ಒಂದು ತುದಿ ಮಾತ್ರವೇ ಕೆನ್ನೆಯನ್ನು ತಲುಪುವಂತೆ ಓರೆಯಾಗಿ ನಗುತ್ತಾರೆ. ಹೀಗೆ ನಕ್ಕಾಗಿ ಕಣ್ಣೂ ಬೇರೆಯದೇ ಭಾವ ತಾಳುತ್ತದೆ. ಈ ನಗುವಿನ ಅರ್ಥ ಆತ್ಮತೃಪ್ತಿ, ಗೆಲುವಿನ ಸಂಭ್ರಮ, ತಾನೇ ಶ್ರೇಷ್ಠ ಎಂಬ ಭಾವನೆ ಮತ್ತು ಮುಖ್ಯವಾಗಿ ವ್ಯಂಗ್ಯವನ್ನು ಪ್ರತಿನಿಧಿಸುತ್ತದೆ. ಕೆಲವೊಮ್ಮೆ ಈ ನಗು ಹಾಸ್ಯ ಮತ್ತು ಹುಡುಗಾಟಿಕೆಯನ್ನು ವ್ಯಕ್ತಡಿಸುತ್ತದೆ. ಸದಾ ಹೀಗೇ ನಗುವವರ ಸ್ವಭಾವ ತಾವೇ ಶ್ರೇಷ್ಠ ಎಂಬ ಭಾವನೆಯಿಂದ ತುಂಬಿರುತ್ತದೆ.

ಅರ್ಧ ನಗು

ಅರ್ಧ ನಗು

ಈ ನಗು ಬಹುಪಾಲು ಓರೆನಗುವಿನೊಂದಿಗೆ ಸಾಮ್ಯ ಹೊಂದಿದೆ. ಆದರೆ ಈ ನಗು ಕೆಲವೊಮ್ಮೆ ಸಂತಸವನ್ನು ವ್ಯಕ್ತಪಡಿಸಿದರೆ ಕೆಲವೊಮ್ಮೆ ದುಃಖವನ್ನೂ ವ್ಯಕ್ತಪಡಿಸುತ್ತದೆ. ಈ ರೀತಿ ನಗುವವರ ಮನಸ್ಸಿನಲ್ಲೊಂದಿರುತ್ತದೆ, ಆದರೆ ಅವರು ಹೊರಗಿರುವ ರೀತಿಯೇ ಬೇರೆಯಾಗಿರುತ್ತದೆ ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು.

ತೆರೆದ ನಗು

ತೆರೆದ ನಗು

ಹಲ್ಲು ಕಾಣುವಂತೆ, ಬಾಯಿ ತೆರೆದು ಜೋರು ನಗುವುದು ಅತ್ಯಂತ ಸುಂದರ ನಗು. ಅದು ಎಲ್ಲ ದುಃಖವನ್ನೂ, ಒತ್ತಡವನ್ನೂ ಹೊಡೆದುರುಳಿಸಿ ಆರೋಗ್ಯವನ್ನು ಕಾಯ್ದುಕೊಳ್ಳುವ ಶಕ್ತಿ ಪಡೆದಿದೆ. ಆದರೆ ಬಾಯಿ ತೆರೆದು ಜೋರಾಗಿ ನಗುವುದರಲ್ಲೂ ಕೆಲವೊಮ್ಮೆ ವ್ಯಂಗ್ಯ, ನಕಲಿಭಾವನೆ ಇದ್ದಿರಬಹುದು.

ಒಟ್ಟಿನಲ್ಲಿ ಹೀಗೆ ನಗುವವರು ಯಾವಾಗಲೂ ಮುಕ್ತಮನಸ್ಸಿನವರಾಗಿರುತ್ತಾರೆ. ಸದಾ ಬದುಕಿನಲ್ಲಿ ಸಂಭ್ರಮ ಹುಡುಕುವವರಾಗಿರುತ್ತಾರೆ. ಆರೋಗ್ಯವಂತರೂ ಆಗಿರುತ್ತಾರೆ.

ಸೋಗಿನ ನಗು

ಸೋಗಿನ ನಗು

ಈ ನಗು ಅರ್ಧ ನಗುವಿನಂತೆಯೇ ಇರುತ್ತದೆ. ಈ ನಗು ಬಹಳ ಸುಂದರ ಮತ್ತು ಮೋಸಗೊಳಿಸುವ ಗುಣ ಹೊಂದಿರುತ್ತದೆ. ನಗುವಾಗ ಬಾಯಿಯ ಒಳಭಾಗವನ್ನು ಕೊಂಚ ಕಚ್ಚಿಹಿಡಿದು, ಪೂರ್ತಿ ಜೋರಾಗಿಯೂ ಅಲ್ಲ, ಕಡಿಮೆಯೂ ಅಲ್ಲ ಎಂಬಂತೆ ಎಷ್ಟು ಬೇಕೋ ಅಷ್ಟು ನಗುವನ್ನಷ್ಟೇ ನೀಡುವುದು. ಫೋಟೋಗಳಿಗೆ ಪೋಸು ಕೊಡುವಾಗ ಉದ್ದೇಶಪೂರ್ವಕವಾಗಿ ನಗುತ್ತೇವಲ್ಲ, ಅದೂ ಇದೇ ವಿಧಕ್ಕೆ ಸೇರಿದ ನಗು!

ಈ ನಗು ಮೋಸ ಮಾಡುವ ವ್ಯಕ್ತಿಗಳಲ್ಲಿ, ಅಹಂಕಾರ ಇರುವವರಲ್ಲಿ, ಹಾಗೆಯೇ ಸದಾ ಸಾಮಾಜಿಕ ಬದುಕಿನಲ್ಲಿ ತೊಡಗಿಕೊಂಡವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದು ಮನಶ್ಶಾಸ್ತ್ರಜ್ಞರ ಅಭಿಪ್ರಾಯ.

English summary
1st friday of month of October is celebrating as world smile day in all over the world. Here is a list of 5 types of smile, which will tell person's charecter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X