• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ: ಮೋದಿ ಘರ್ಜನೆ

|
   Pulwama : ನರೇಂದ್ರ ಮೋದಿ :ಸಮಯ ಬಂದಿದೆ, ಭಯೋತ್ಪಾದನೆ ಹತ್ತಿಕ್ಕಲು ವಿಶ್ವ ಒಂದಾಗಲಿ

   ಸಿಯೋಲ್, ಫೆಬ್ರವರಿ 22: "ಭಯೋತ್ಪಾದನೆಯನ್ನು ನಾಶಮಾಡುವ ಸಮಯ ಬಂದಿದೆ. ಉಗ್ರವಾದ ಹತ್ತಿಕ್ಕಲು ವಿಶ್ವ ಒಂದಾಗಲಿ" ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಕರೆನೀಡಿದ್ದಾರೆ.

   ಎರಡು ದಿನಗಳ ಕಾಲ ಪೂರ್ವ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ಮೋದಿ, ಶುಕ್ರವಾರ ದಕ್ಷಿಣ ಕೊರಿಯಾದಲ್ಲಿ ಮಾತನಾಡುತ್ತಿದ್ದರು.

   ದಕ್ಷಿಣ ಕೊರಿಯಾದಲ್ಲಿ ಶಾಂತಿ ಪ್ರಶಸ್ತಿ ಸ್ವೀಕರಿಸಲಿರುವ ಪ್ರಧಾನಿ ಮೋದಿ

   "ಭಯೋತ್ಪಾದನೆಯ ನಿಗ್ರಹಕ್ಕೆ ನಮ್ಮೊಂದಿಗೆ ನಿಂತಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರಿಗೆ ನನ್ನ ಧನ್ಯವಾದಗಳು, ಭಯೋತ್ಪಾದನೆಯ ವಿರುದ್ಧ ಹೋರಾಡಲು ನಮ್ಮ ಪರಸ್ಪರ ಸಹಕಾರ ಅಗತ್ಯ. ಮಾತುಕತೆಯನ್ನು ಮೀರಿ ಮುಂದಿನ ದಾರಿಯ ಬಗ್ಗೆ ವಿಶ್ವ ಈ ಬಗ್ಗೆ ಯೋಚಿಸಬೇಕಿದೆ" ಎಂದು ಮೋದಿ ಹೇಳಿದರು.

   "ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರದಾಳಿಗೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿ, ಭಯೋತ್ಪಾದನೆಯ ವಿರುದ್ಧ ನಮ್ಮ ಬೆಂಬಲಕ್ಕೆ ನಿಂತ ಮೂನ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ವಿಶ್ವವು ಒಂದಾಗಿ ಉಗ್ರವಾದದ ವಿರುದ್ಧ ಹೋರಾಡಲಿದೆ" ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.

   ಭಾರತದೊಂದಿಗೆ ಯುದ್ಧಕ್ಕೆ ಸಿದ್ಧ ಎಂಬ ಸೂಚನೆ ನೀಡಿದ ಪಾಕಿಸ್ತಾನ

   ದಕ್ಷಿಣ ಕೊರಿಯಾದಲ್ಲಿ ಇಂದು ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಅಭಿವೃದ್ಧಿ, ಮಾನವಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಪರಿಗಣಿಸಿ ನೀಡಿದ ಸಿಯೋಲ್ ಶಾಂತಿ ಪ್ರಶಸ್ತಿಯನ್ನೂ ಅವರು ಸ್ವೀಕರಿಸಿದರು.

   English summary
   Time has come for World to unite in fight against terrorism, Prime Minister Narendra Modi said in South Korea.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X