ಸ್ವಿಟ್ಜರ್ಲೆಂಡ್ ನಲ್ಲಿ ವಿಶ್ವ ಅತಿ ಉದ್ದದ ಸುರಂಗ ರೈಲು ಮಾರ್ಗ

Posted By:
Subscribe to Oneindia Kannada

ಬರ್ನ್ (ಸ್ವಿಟ್ಜರ್ಲೆಂಡ್), ಜೂ 02: ಆಲ್ಫ್ಸ್ ಪರ್ವತ ಶ್ರೇಣಿಯ ಕೆಳಗೆ ವಿಶ್ವದ ಅತಿ ಉದ್ದದ ಸುರಂಗ ರೈಲು ಮಾರ್ಗಕ್ಕೆ ಚಾಲನೆ ಸಿಕ್ಕಿದೆ. ಯುರೋಪಿನ ಆಕರ್ಷಣೆಗೆ ಮತ್ತೊಂದು ಸುಂದರ ಮಾರ್ಗ ಸೇರಿಕೊಂಡಿದೆ.

ವಿಶ್ವದ ಅತಿ ಉದ್ದವಾದ ಮತ್ತು ಆಳವಾದ ರೈಲ್ವೆ ಸುರಂಗ ಮಾರ್ಗವನ್ನು ಸ್ವಿಟ್ಜರ್ಲೆಂಡ್ ನ ಇಂಜಿನಿಯರ್ ಗಳು ವಿಶ್ವಕ್ಕೆ ಪರಿಚಯಿಸಿದ್ದಾರೆ. 57ಕಿ.ಮೀ ಉದ್ದ ಮತ್ತು 2.5 ಕಿ.ಮೀ ಆಳದಲ್ಲಿರುವ ಈ ಸುರಂಗ ಮಾರ್ಗ ಸುಮಾರು ಎರಡು ದಶಕಗಳ ಕನಸನ್ನು ನನಸು ಮಾಡಿದೆ. ಜಪಾನ್​ನಲ್ಲಿರುವ 53.9 ಕಿ.ಮೀ ಉದ್ದದ ರೈಲ್ವೆ ಸುರಂಗ ಮಾರ್ಗ ಇಲ್ಲಿ ತನಕ ಅತಿ ಉದ್ದದ ಸುರಂಗ ರೈಲು ಮಾರ್ಗವಾಗಿತ್ತು.

World's longest railway tunnel Gotthard, Switzerland

ಸ್ವಿಸ್ ಇಂಜಿನಿಯರ್ ಕಾರ್ಲ್ ಎಡ್ವರ್ಡ್ ಗ್ರೂನರ್ ಅವರು 1947ರಲ್ಲೇ ಈ ಸುರಂಗ ಮಾರ್ಗದ ನೀಲನಕ್ಷೆ ತಯಾರಿಸಿದ್ದರು. ಆದರೆ, 1992ರಲ್ಲಿ ನಿರ್ಮಾಣ ಕಾಮಗಾರಿ ಅರಂಭವಾಗಿ ಈಗ ಅಧಿಕೃತವಾಗಿ ಚಾಲನೆ ಪಡೆದುಕೊಂಡಿದೆ.

World's longest railway tunnel Gotthard, Switzerland

12 ಬಿಲಿಯನ್ ಡಾಲರ್ ವೆಚ್ಚದಲ್ಲಿ ಈ ಸುರಂಗ ಮಾರ್ಗದ ಮೂಲಕ 57 ಕಿ.ಮೀ ದೂರವನ್ನು 17 ನಿಮಿಷದಲ್ಲಿ ರೈಲುಗಳು ಕ್ರಮಿಸಲಿವೆ. ಗೊಟ್ಹಾರ್ಡ್ ಬೇಸ್ ಸುರಂಗ ಮಧ್ಯದ ನಗರ ಉರಿಯ ಅರ್ಸ್ಟ್‌ಫೆಲ್ಡ್‌ನಿಂದ ದಕ್ಷಿಣದ ನಗರ ಟಿಸಿನೊದ ಬೋಡಿಯೊಗೆ ಆಲ್ಫ್ಸ್ ಪರ್ವತದ ಅಡಿಯಲ್ಲಿ ಸಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
World's longest railway tunnel Gotthard, Switzerland inaugurated on Wednesday by European dignitaries. The 57km Gotthard Railway Tunnel beneath the Alp's at a cost of 12.2 Billion francs can connect north and south parts of Europe.
Please Wait while comments are loading...