ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023ಕ್ಕೆ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ ಭಾರತ

|
Google Oneindia Kannada News

ನ್ಯೂಯಾರ್ಕ್ , ನ. 15: ಮಂಗಳವಾರ (ನವೆಂಬರ್ 15) ವಿಶ್ವ ಜನಸಂಖ್ಯೆಯು 800 ಕೋಟಿಗೆ ಮುಟ್ಟುತ್ತದೆ ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ. ವಿಶ್ವ ಜನಸಂಖ್ಯಾ ದಿನದಂದು ವರದಿ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ 7,999,959,816 ಜನಸಂಖ್ಯೆ ಇದ್ದು, ಮುಂದಿನ ವರ್ಷ ಅಂದರೆ 2023ಕ್ಕೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತವಾಗಲಿದೆ. ಈ ಮೂಲಕ ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಮೀರಿಸುತ್ತದೆ ಎಂದು ವಿಶ್ವಸಂಸ್ಥೆ ಮುನ್ಸೂಚನೆ ನೀಡಿದೆ.

ಯುಎಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳೇ ಹೆಚ್ಚು ಉತ್ಸುಕಯುಎಸ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳೇ ಹೆಚ್ಚು ಉತ್ಸುಕ

ವಿಶ್ವ ಜನಸಂಖ್ಯಾ ದಿನದಂದು ಬಿಡುಗಡೆಯಾಗಿರುವ ವರದಿಯಲ್ಲಿ ಜಾಗತಿಕ ಜನಸಂಖ್ಯೆಯು 2080ಕ್ಕೆ ಸುಮಾರು 10.4 ಶತಕೋಟಿಗೆ ಏರಲಿದೆ ಎಂದು ಅಂದಾಜಿಸಲಾಗಿದೆ.

Worlds human population crosses 8 Billion on November 15; United Nations projected

ಜಾಗತಿಕ ಜನಸಂಖ್ಯೆಯು 700 ಕೋಟಿ 800 ಕೋಟಿಗೆ ತಲುಪಲು ಸುಮಾರು 12 ವರ್ಷಗಳನ್ನು ತೆಗೆದುಕೊಂಡಿದೆ. ಇದು 2037ರ ವೇಳಗೆ 900 ಕೋಟಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.

2050 ರವರೆಗೆ ವಿಶ್ವದ ಜನಸಂಖ್ಯೆಯ ಶೇಕಡಾ 50% ಜನಸಂಖ್ಯೆಯು ಕೇವಲ ಎಂಟು ದೇಶಗಳಲ್ಲಿ ಇರಲಿದೆ. ಅವುಗಳೆಂದರೆ, ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾ ದೇಶಗಳಾಗಿವೆ.

2023ಕ್ಕೆ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ ಭಾರತ

ವಿಶ್ವಸಂಸ್ಥೆಯ ಪ್ರಕಾರ ಮುಂದಿನ ವರ್ಷಕ್ಕೆ ಜನಸಂಖ್ಯೆ ಹೆಚ್ಚಳದಲ್ಲಿ ಭಾರತವಯ ಚೀನಾವನ್ನು ಹಿಂದಿಕ್ಕಲಿದೆ. ಈ ಮೂಲಕ ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ. ಸದ್ಯಕ್ಕೆ ಭಾರತದಲ್ಲಿ 141 ಕೋಟಿ ಜನಸಂಖ್ಯೆಯಿದೆ. ಚೀನಾದಲ್ಲಿ ಪ್ರಸ್ತುತ 145 ಕೋಟಿ ಜನಸಂಖ್ಯೆಯಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ಈ ವರ್ಷ ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಜೀವಿತಾವಧಿ ಹೆಚ್ಚಳವಾಗಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣ ಭಾರೀ ಮಟ್ಟದಲ್ಲಿ ಇಳಿಕೆಯಾಗಿದೆ. ಪೋಷಕಾಂಶಯುಕ್ತ ಆಹಾರ ಸೇವನೆ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

English summary
World's human population crosses 8 Billion on November 15; United Nations projected. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X