Get Updates
Get notified of breaking news, exclusive insights, and must-see stories!

World Population Day 2024: ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 10 ದೇಶಗಳ ಪೈಕಿ ಭಾರತಕ್ಕೆ ಯಾವ ಸ್ಥಾನ?

ಜುಲೈ 11ರಂದು ವಿಶ್ವದಾದ್ಯಂತ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಸವಾಲುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಇತ್ತೀಚಿನ ಶತಮಾನಗಳಲ್ಲಿ ಜಾಗತಿಕ ಜನಸಂಖ್ಯೆಯು ಗಮನಾರ್ಹವಾಗಿ ಬೆಳೆಯುತ್ತಿದೆ.

ಏಷ್ಯನ್ ಮತ್ತು ಆಫ್ರಿಕನ್ ದೇಶಗಳಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಹಾಗೆಯೇ 2024ರಲ್ಲಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 10 ದೇಶಗಳ ಪೈಕಿ ಭಾರತ ಮೊದಲನೇ ಸ್ಥಾನದಲ್ಲಿದೆ. ಹಾಗಾದರೆ ಯಾವ ದೇಶದಲ್ಲಿ ಎಷ್ಟು ಜನಸಂಖ್ಯೆ ಇದೆ? ಭಾರತ ಹಾಗೂ ಚೀನಾದ ಸಂಖ್ಯೆ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

World Population Day 2024 Top 10 Most Populous Countries in the World

ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ

ಭಾರತ ದೇಶ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಮುಖ್ಯವಾಗಿ ಜೀವಿತಾವಧಿಯಲ್ಲಿನ ಹೆಚ್ಚಳ, ಫಲವತ್ತತೆಯಲ್ಲಿನ ಬದಲಾವಣೆಗಳು, ನಗರೀಕರಣ ಮತ್ತು ವಲಸೆಯಂತಹ ಅಂಶಗಳು ಜನಸಂಖ್ಯೆ ಹೆಚ್ಚಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತವೆ. ಜನಸಂಖ್ಯೆ ಹೆಚ್ಚಳ ಆರ್ಥಿಕ ಬೆಳವಣಿಗೆ, ಉದ್ಯೋಗ, ಆದಾಯ ವಿತರಣೆ, ಬಡತನ ಮತ್ತು ಸಾಮಾಜಿಕ ಕಲ್ಯಾಣದ ಮೇಲೆ ಪರಿಣಾಮ ಬೀರುತ್ತದೆ.

ಚೀನಾದಲ್ಲಿ 11.1 ಮಿಲಿಯನ್ ಸಾವುಗಳು ಮತ್ತು 9 ಮಿಲಿಯನ್ ಜನನಗಳಿಂದಾಗಿ ಒಟ್ಟು ಜನಸಂಖ್ಯೆಯು ಕಳೆದ ವರ್ಷ ಇಳಿಮುಖವಾಗಿದೆ. ಹೀಗಾಗಿ ಚೀನಾ ಸತತ ಎರಡನೇ ವರ್ಷದಲ್ಲಿ ಭಾರತಕ್ಕಿಂತ ಕೊಂಚ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. 2023ರಲ್ಲಿ UNFPA ವಿಶ್ವ ಜನಸಂಖ್ಯೆಯ ವರದಿಯ ಪ್ರಕಾರ, ಭಾರತದ ಅಂದಾಜು ಜನಸಂಖ್ಯೆಯು 142.86 ಕೋಟಿ, ಇದು ಚೀನಾಕ್ಕಿಂತ ಸ್ವಲ್ಪ ಹೆಚ್ಚಿದೆ. ಹೀಗಾಗಿ ಭಾರತ ಚೀನಾಕ್ಕಿಂತ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.

75 ವರ್ಷಗಳಲ್ಲಿ ಭಾರತದ ಜನಸಂಖ್ಯೆ ದ್ವಿಗುಣ

ಯುಎನ್‌ಎಫ್‌ಪಿಎ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯು ಪ್ರಸ್ತುತ ವಾರ್ಷಿಕವಾಗಿ ಶೇಕಡಾ ಒಂದಕ್ಕಿಂತ ಕಡಿಮೆ ದರದಲ್ಲಿ ಬೆಳವಣಿಗೆಯನ್ನು ಮುಂದುವರೆಸಿದರೆ, ಮುಂದಿನ 75 ವರ್ಷಗಳಲ್ಲಿ ಅದರ ಪ್ರಸ್ತುತ ಮೌಲ್ಯಕ್ಕಿಂತ ದ್ವಿಗುಣಗೊಳ್ಳುತ್ತದೆ ಎಂದು ಸೂಚಿಸುತ್ತದೆ.

World Population Day 2024 Top 10 Most Populous Countries in the World

ವಿಶ್ವಸಂಸ್ಥೆಯ ದಾಖಲಾತಿಗಳ ಪ್ರಕಾರ ಜಾಗತಿಕ ಜನಸಂಖ್ಯೆ ಮುಂದೆ ಅಂದರೆ 2030ರ ವೇಳೆಗೆ ಸರಿಸುಮಾರು 8.5 ಶತಕೋಟಿ ತಲುಪಲಿದೆ. ಹಾಗೇ 2050ರ ವೇಳೆಗೆ 9.7 ಶತಕೋಟಿ ಮತ್ತು 2100 ರ ವೇಳೆಗೆ 10.9 ಶತಕೋಟಿಗೆ ಬೆಳೆಯಲಿದೆ ಎಂದು ತೋರಿಸುತ್ತವೆ.

ವಿಶ್ವ ಜನಸಂಖ್ಯಾ ದಿನವನ್ನು ಏಕೆ ಆಚರಿಸಬೇಕು?

ಜುಲೈ 11 ರಂದು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. 1987 ರ ಜುಲೈ 11 ರಂದು ವಿಶ್ವ ಜನಸಂಖ್ಯೆಯು 500 ಕೋಟಿಯನ್ನು ತಲುಪಿತ್ತು. ಇದರ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು, ತನ್ನ ಅಂಗ ಅಂಸ್ಥೆಯಾದ ' ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ'ಯ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ.

ಈ ವರ್ಷದ ಜನಸಂಖ್ಯಾ ದಿನದ ಥೀಮ್ ಏನು?

ಈ ವರ್ಷ 2024ರಲ್ಲಿ ಜುಲೈ 11ರಂದು ಗುರುವಾರ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು, ಪರಿಹಾರಗಳನ್ನು ಕಂಡುಕೊಳ್ಳಲು ಮತ್ತು ಪ್ರಗತಿಗೆ ಚಾಲನೆ ನೀಡಲು ಬೇಕಾದ ಡೇಟಾ ಸಂಗ್ರಹಣೆಯಲ್ಲಿ ಸಮಯ ಹೂಡಿಕೆ ಎಂಬ ಥೀಮ್ ನೊಂದಿಗೆ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ.

World Population Day 2024 Top 10 Most Populous Countries in the World

2024 ರ ಹೊತ್ತಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 10 ದೇಶಗಳು:

1 ಭಾರತ - 1,441,719,852

2 ಚೀನಾ- 1,425,178,782

3 ಅಮೇರಿಕಾ -341,814,420

4 ಇಂಡೋನೇಷ್ಯಾ -279,798,049

5 ಪಾಕಿಸ್ತಾನ- 245,209,815

6 ನೈಜೀರಿಯಾ- 229,152,217

7 ಬ್ರೆಜಿಲ್ -217,637,297

8 ಬಾಂಗ್ಲಾದೇಶ- 174,701,211

9 ರಷ್ಯಾ -143,957,079

10 ಇಥಿಯೋಪಿಯಾ -129,719,719

ಪ್ರಸ್ತುತ ಜಾಗತಿಕ ಮಾನವ ಜನಸಂಖ್ಯೆ ಎಷ್ಟು?

ಚೀನಾ ಮತ್ತು ಭಾರತವು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಾಗಿವೆ. ಪ್ರತಿಯೊಂದೂ 1 ಶತಕೋಟಿಗಿಂತ ಹೆಚ್ಚು ಜನರನ್ನು ಹೊಂದಿದ್ದು, ವಿಶ್ವದ ಜನಸಂಖ್ಯೆಯ ಸುಮಾರು 18% ರಷ್ಟಿದೆ. ಆದ್ದರಿಂದ, ವಿಶ್ವ ಜನಸಂಖ್ಯೆಯು 2050 ರಲ್ಲಿ 9.7 ಶತಕೋಟಿಯನ್ನು ತಲುಪುತ್ತದೆ ಮತ್ತು 2080 ರ ದಶಕದ ಮಧ್ಯಭಾಗದಲ್ಲಿ ಸುಮಾರು 10.4 ಶತಕೋಟಿಯನ್ನು ತಲುಪುತ್ತದೆ ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+