ವರ್ಕ್ ಫ್ರಂ ಹೋಂ ಅಂತ ಸಿಂಗಾಪುರ, ಬಾಲಿ ಸುತ್ತಿ ಕೆಲಸ ಕಳಕೊಂಡ ಟೆಕ್ಕಿ : ವಿಲನ್ ಆಗಿದ್ದೇ ಲ್ಯಾಪ್ ಟಾಪ್ ಟ್ರ್ಯಾಕರ್
Work From Home : ವರ್ಕ್ ಫ್ರಂ ಹೋಂ ನೌಕರರ ಬಳಿ ಇರುವ ಅತ್ಯುತ್ತಮ ಆಯ್ಕೆ. ಸಣ್ಣ ಮಕ್ಕಳಿರುವವರಿಗೆ, ಮನೆಯಲ್ಲಿ ಹುಷಾರಲ್ಲದ ಹಿರಿಯರಿದ್ದರೆ ತುಂಬಾ ಮಂದಿ ವರ್ಕ್ ಫ್ರಂ ಹೋಂಗಾಗಿ ಕಂಪನಿ ಬಳಿ ಕೇಳಿಕೊಳ್ಳುತ್ತಾರೆ. ಕೆಲವೊಂದು ಕಂಪನಿ ನೌಕರರ ಮನವಿಗೆ ಸ್ಪಂದಿಸುತ್ತದೆ. ಆದರೆ ವರ್ಕ್ ಸ್ಟೇಷನ್ ಬಿಡುವಂತಿಲ್ಲ ಎನ್ನುವ ಕಂಡೀಷನನ್ನು ಕೆಲವೊಮ್ಮೆ ಹಾಕಬಹುದು. ನಿಜಕ್ಕೂ ವರ್ಕ್ ಫ್ರಂ ಹೋಂ ಅನಿವಾರ್ಯ ಎಂದಿರುವವರು ಕಂಪನಿಯ ಕಂಡೀಷನ್ ಗೆ ಒಪ್ಪಿ ಮನೆಯಿಂದಲೇ ಕೆಲಸ ಮಾಡ್ತಾರೆ. ಇದರ ಜೊತೆಗೆ ಒಮ್ಮೆ ಕಂಪನಿಯ ಮಾತನ್ನು ಒಪ್ಪುವಂತೆ ಮಾಡಿ ನಂತರ ತಮ್ಮ ಮನಸ್ಸಿಗೆ ಬೇಕಾದಂತೆ ನಡೆದುಕೊಳ್ಳುವವರೂ ಇದ್ದಾರೆ.

ಸಿಂಗಾಪುರದಲ್ಲಿ ಸಿಕ್ಕಿ ಬಿದ್ದ ಟೆಕ್ಕಿ :
ಸಿಡ್ನಿ ಮೂಲದ ಕರೆನ್ಸಿ ಟ್ರೇಡರ್ ಇದೇ ಕ್ಯಾಟಗರಿಗೆ ಸೇರಿದವರು. ಇವರು ಹೇಳಿದ್ದು ಆಸ್ಟ್ರೇಲಿಯಾದಿಂದ ವರ್ಕ್ ಫ್ರಂ ಹೋಂ ಮಾಡುತ್ತೇನೆ ಎಂದು. ಆದ್ರೆ ಸಿಕ್ಕಿ ಬಿದ್ದದ್ದು ಸಿಂಗಾಪುರದಲ್ಲಿ. ಈ ಸುಳ್ಳಿನಿಂದ ಇದೀಗ ಇವರು ತಮ್ಮ ಕೆಲಸವನ್ನೇ ಕಳೆದುಕೊಳ್ಳುವ ಹಾಗಾಗಿದೆ. ಚಾರ್ಲ್ಸ್ ಗ್ರಹಾಂ ಆಸ್ಟ್ರೇಲಿಯಾದ ಕರೆನ್ಸಿ ಎಕ್ಸ್ಚೇಂಜ್ ಕಂಪನಿಯಲ್ಲಿ 20 ತಿಂಗಳುಗಳಿಂದ ಕೆಲಸ ಮಾಡ್ತಾ ಇದ್ದರು. ಇವರು ಆಸ್ಟ್ರೇಲಿಯಾದಲ್ಲಿರುವ ಕಂಪನಿಗಾಗಿ ಕೆಲಸ ಮಾಡ್ತಾ ಇದ್ದರು.
Work From Home ಬೇಡಿಕೆ ಇಟ್ಟು ಸಿಂಗಾಪುರಕ್ಕೆ ಶಿಫ್ಟ್ :
ಗ್ರಹಾಂ ಈ ಹಿಂದೆ ಒಂದು ವರ್ಷದವರೆಗೆ ಸಿಂಗಾಪುರಕ್ಕೆ ಶಿಫ್ಟ್ ಆಗಬೇಕು ಅಂದುಕೊಂಡಿದ್ದರು. ಇದಕ್ಕಾಗಿ ಕಂಪನಿಯ ಪರ್ಮಿಷನ್ ಕೂಡಾ ಕೇಳಿದ್ದರು. ಆದರೆ ಅವರ ರಿಕ್ವೆಸ್ಟನ್ನು ಕಂಪನಿ ತಿರಸ್ಕರಿಸಿತ್ತು. ಅವರ ಬಳಿ ಮೊಬಿಲಿಟಿ ವೀಸಾ ಇದ್ದು ಅದನ್ನು ನವೆಂಬರ್ 2025ರೊಳಗೆ ಬಳಸಬೇಕಿತ್ತು. ಆದರೆ ಅವರ ಆಫೀಸ್ ಇರುವುದು ಸಿಡ್ನಿಯಲ್ಲಿ. ಸಿಂಗಾಪುರದಿಂದ ಕೆಲಸ ಮಾಡುವ ಲೈಸನ್ಸ್ ಅವರ ಕಂಪನಿ ಬಳಿ ಇರಲಿಲ್ಲ. ಹಾಗಾಗಿ ಕಂಪನಿ ಸಿಂಗಾಪುರಕ್ಕೆ ಶಿಫ್ಟ್ ಆಗುವ ಗ್ರಹಾಂ ಬೇಡಿಕೆಗೆ ಸೊಪ್ಪು ಹಾಕಲಿಲ್ಲ.
ನಂತರ, ಗ್ರಹಾಂ ಕಣ್ಣಿನ ಗಾಯದಿಂದ ಮೂರು ತಿಂಗಳ ಕಾಲ ವರ್ಕ್ ಫ್ರಂ ಹೋಂ ಮಾಡಬೇಕಾಗಿದೆ ಎಂದು ಡಾಕ್ಟರ್ ಸರ್ಟಿಫಿಕೇಟ್ ಕೂಡಾ ಸಬ್ಮಿಟ್ ಮಾಡ್ತಾರೆ. ವಾರ್ಷಿಕ ರಜೆ ತೆಗೆದುಕೊಂಡು ಸಿಂಗಾಪುರಕ್ಕೆ ಹೋಗ್ತಾರೆ.
ರಜೆ ಮುಗಿದರೂ ಸಿಂಗಾಪುರದಲ್ಲೇ ಬಿಡಾರ :
ಗ್ರಹಾಂ ನವೆಂಬರ್ 17 ರಂದು ಮತ್ತೆ ಕೆಲಸಕ್ಕೆ ವಾಪಾಸಾಗಬೇಕಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ನಿಮ್ಮ ರಜೆ ಮುಗಿದಿರುವ ಕಾರಣ ನೀವು ಇವತ್ತಿಂದ ಕೆಲಸಕ್ಕೆ ಬರಬೇಕು. ನೀವು ಇವತ್ತಿಂದ ಆನ್ ಲೈನ್ ನಲ್ಲಿರಬೇಕು, ನಿಮ್ಮ ಎಫ್ ಬಿಐ ಸ್ಕಿಲ್ ಅಗತ್ಯ ಕಂಪನಿಗೆ ಇದೆ ಎಂದು ಮ್ಯಾನೇಜರ್ ಮೇಲ್ ಹಾಕ್ತಾರೆ. ಆದ್ರೆ, ಇನ್ನೂ ಸಿಂಗಾಪುರದಿಂದ ಬಂದೇ ಇಲ್ಲ ಎನ್ನುವುದು ಅವರ ಲ್ಯಾಪ್ ಟಾಪ್ ಮೂಲಕ ಕಂಪನಿಗೆ ತಿಳಿದುಕೊಳ್ಳುತ್ತದೆ.
ತಾನು ಆಸ್ಟ್ರೇಲಿಯಾಕ್ಕೆ ವಾಪಾಸಾಗಲು ರೆಡಿ ಇದ್ದೆ. ಆದರೆ ಪತ್ನಿಗೆ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆದ ಕಾರಣ ಫ್ಲೈಟನ್ನು ಮುಂದೂಡಬೇಕಾಯಿತು ಎಂದು ಗ್ರಹಾಂ ಕಂಪನಿಗೆ ತಿಳಿಸಿದರು. ಪ್ಲಾನಿನಲ್ಲಿನ ಬದಲಾವಣೆ ವೀಕೆಂಡಲ್ಲಿ ಆಗಿದ್ದರಿಂದ ಈ ಬಗ್ಗೆ ಮ್ಯಾನೇಜರ್ ಗಮನಕ್ಕೆ ತರುವುದು ಕೂಡಾ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಸತ್ಯ ಒಪ್ಪಿಕೊಂಡ ಟೆಕ್ಕಿ :
ಅವರು ಸಿಂಗಾಪುರದಿಂದ ( singapore) ಲಾಗ್ ಇನ್ ಮಾಡುವ ಹೊತ್ತಿಗೆ, ನೂರಾರು ಇಮೇಲ್, ಕಾಲ್, ಕ್ಲೈಂಟಿನ ದೂರಿನಿಂದ ಲ್ಯಾಪ್ ಟಾಪ್ ತುಂಬಿ ಹೋಗಿತ್ತು. ಆದ್ದರಿಂದ ಅವರು ಇನ್ನೂ ಸಿಂಗಾಪುರದಲ್ಲೇ ಇದ್ದಾರೆ ಅನ್ನೋ ಸತ್ಯವನ್ನು ಮ್ಯಾನೇಜರಿಗೆ ಹೇಳಲೇಬೇಕಾಯಿತು.
ಕಂಪನಿ ಅವರ ಕಾರಣವನ್ನು ಕೇಳುವ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.ಇನ್ನು ಗ್ರಹಾಂ ತನ್ನ ರಜೆ ಮುಗೀತಾ ಇದ್ದ ಹಾಗೆ ಅವರು ಆಸ್ಟ್ರೇಲಿಯಾಕ್ಕೆ ಹೊರಟಿದ್ದರು ಎನ್ನುವುದನ್ನು ಸಾಬೀತುಪಡಿಸುವ ಫ್ಲೈಟ್ ಟಿಕೆಟ್ ಆಗಲಿ, ಹೆಂಡಿತಿಯ ಆರೋಗ್ಯ ಸರಿ ಇಲ್ಲ ಎನ್ನುವುದಕ್ಕಾಗಲಿ ಯಾವುದೇ ದಾಖಲೆ ಇರಲಿಲ್ಲ.
ಕೆಲಸದಿಂದ ತೆಗೆದು ಹಾಕುವ ನಿರ್ಧಾರ :
ಹೀಗಾಗಿ ನಿಮ್ಮ ವರ್ತನೆ ಕಂಪನಿ ಪಾಲಿಸಿಯ ಗಂಭೀರ ಉಲ್ಲಂಘನೆ, ಕಾನೂನುಬದ್ಧ ಸೂಚನೆಗಳನ್ನು ಅನುಸರಿಸುವಲ್ಲಿ ವೈಫಲ್ಯ ನಂಬಿಕೆ ಮತ್ತು ವಿಶ್ವಾಸ ದ್ರೋಹವನ್ನು ತೋರಿಸುತ್ತದೆ ಎಂದು ಕಂಪನಿ ಹೇಳಿದೆ. ಈ ಮೂಲಕ ಗ್ರಹಾಂ ಅವರನ್ನು ಕೆಲಸದಿಂದ ತೆಗದು ಹಾಕುವ ನಿರ್ಧಾರ ಮಾಡುತ್ತದೆ.
ಫೇರ್ ವರ್ಕ್ ಕಮಿಷನ್ ಮೊರೆ :
ಕಂಪನಿಯ ನಿರ್ಧಾರ ಪ್ರಶ್ನಿಸಿ ಗ್ರಹಾಂ ಆಸ್ಟ್ರೇಲಿಯಾದ (australia) ಫೇರ್ ವರ್ಕ್ ಕಮಿಷನ್ ಮೊರೆ ಹೋಗ್ತಾರೆ. ಕಂಪನಿಯು ಇಲ್ಲೀಗಲ್ ಟ್ರ್ಯಾಕಿಂಗ್ ಸರ್ವಿಲೆನ್ಸ್ ಮೂಲಕ ತಾನು ಎಲ್ಲಿದ್ದೇನೆ ಎನ್ನುವದರ ಬಗ್ಗೆ ಪತ್ತೆದಾರಿ ನಡೆಸಿದೆ ಎಂದು ವಾದಿಸಿದ್ದಾರೆ. ಇದೇ ವೇಳೆ 2025 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತುಂಬಾ ಸಲ ಗ್ರಹಾಂ ಬಾಲಿಯಿಂದ ಕೆಲಸ ಮಾಡಿರುವದರ ಬಗ್ಗೆಯೂ ಮ್ಯಾನೇಜರ್ ಆಯೋಗದ ಗಮನಕ್ಕೆ ತಂದಿದ್ಧಾರೆ. ಆ ಟೈಂನಲ್ಲೂ ಮನೆಯ ಬಾತ್ ರೂಮಿನಲ್ಲಿ ಸಮಸ್ಯೆ ಇದೆ. ಪ್ಲಂಬರ್ ಬರುವಾಗ ತಾನು ಮನೆಯಲ್ಲಿ ಇರಬೇಕಾಗುತ್ತದೆ ಎಂದು ಹೇಳಿ ವರ್ಕ್ ಫ್ರಂ ಹೋಂ ತೆಗೆದುಕೊಂಡಿದ್ದರು. ಆದ್ರೆ ಆ ಅವಧಿಲಿ ಕೂಡಾ ಅವರು ಬಾಲಿಯಲ್ಲಿದ್ದರು ಎನ್ನುವುದನ್ನು ಮ್ಯಾನೇಜರ್ ಆಯೋಗಕ್ಕೆ ತಿಳಿಸಿದರು.
ಬೇರೆ ದೇಶದಿಂದ ಕೆಲಸ ಮಾಡಬೇಕಾದರೆ ಕಂಪನಿಯ ಪರ್ಮಿಷನ್ ಪಡೆಯಬೇಕು ಎನ್ನುವ ಕಂಪನಿ ಪಾಲಿಸಿ ಗ್ರಹಾಂಗೆ ಚೆನ್ನಾಗಿಯೇ ಗೊತ್ತು. ಹಾಗಾಗಿಯೇ ಅವರು ಬಾಲಿಯಲ್ಲಿ ಇದ್ದದ್ದನ್ನು ಕೂಡಾ ಮುಚ್ಚಿಟ್ಟಿದ್ದರು ಎಂದು ಕಮಿಷನರ್ ಅಲಾನಾ ಮ್ಯಾಥೆಸನ್ ಹೇಳಿದ್ದಾರೆ. ಇಷ್ಟು ಗೊತ್ತಿದ್ದೂ ಮತ್ತೆ ಸಿಂಗಾಪುರದಿಂದ ಕೆಲಸಕ್ಕೆ ಮುಂದಾಗಿರುವುದು ಅವರ ಅಪ್ರಾಮಾಣಿಕತೆಯನ್ನು ತೋರಿಸುತ್ತದೆ ಎಂದು ಆಯೋಗ ಹೇಳಿದೆ. ಅವರನ್ನು ವಜಾ ಮಾಡಲು ಸಂಸ್ಥೆಯ ಹತ್ತಿರ ಸೂಕ್ತ ಕಾರಣ ಇದೆ ಎಂದು ಆಯೋಗ ಒಪ್ಪಿಕೊಂಡಿದೆ.


Click it and Unblock the Notifications
