ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್‌ಕ್ಯಾಮ್ ಆನ್ ಮಾಡದ್ದಕ್ಕೆ ಉದ್ಯೋಗಿಯನ್ನೇ ವಜಾಗೊಳಿಸಿದ ಕಂಪನಿ!

|
Google Oneindia Kannada News

ಫ್ಲೋರಿಡಾ, ಅಕ್ಟೋಬರ್ 14: ಯುನೈಟೆಡ್ ಸ್ಟೇಟ್ಸ್(ಯುಎಸ್) ನಲ್ಲಿನ ಸಾಫ್ಟ್‌ವೇರ್ ಕಂಪನಿಯು ಕೆಲಸದ ಸಮಯದಲ್ಲಿ ವೆಬ್‌ಕ್ಯಾಮ್ ಅನ್ನು ಇರಿಸಿಕೊಳ್ಳಲು ನಿರಾಕರಿಸಿದ ಉದ್ಯೋಗಿಯನ್ನು ವಜಾಗೊಳಿಸಿದ ವಿಲಕ್ಷಣ ಘಟನೆಯೊಂದು ವರದಿಯಾಗಿದೆ.

ಉದ್ಯೋಗಿಯು "ದಿನಕ್ಕೆ ಒಂಬತ್ತು ಗಂಟೆಗಳ ಕಾಲ" ಮೇಲ್ವಿಚಾರಣೆಯನ್ನು ನಿರಾಕರಿಸಿದ ನಂತರ ಫ್ಲೋರಿಡಾ ಮೂಲದ ಟೆಲಿಮಾರ್ಕೆಟಿಂಗ್ ಕಂಪನಿ ಚೇತು ತೀವ್ರವಾದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು TechCrunch ವರದಿ ಮಾಡಿದೆ. ವೆಬ್‌ಕ್ಯಾಮ್ ಅನ್ನು ಸ್ಟ್ರೀಮ್ ಮಾಡಲು ಉದ್ಯೋಗಿಯು ಪರದೆಯನ್ನು ಹಂಚಿಕೊಳ್ಳಲು ಅಗತ್ಯವಿತ್ತು.

2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್2,500 ಉದ್ಯೋಗಿಗಳನ್ನು ಮನೆಗೆ ಕಳಿಸಲಿದೆ ಬೈಜುಸ್

ಕಂಪನಿಯು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, "ಅವಿಧೇಯತೆ" ಮತ್ತು ಕೆಲಸ ಮಾಡಲು ನಿರಾಕರಿಸಿದ ಕಾರಣದಿಂದ ಉದ್ಯೋಗಿಯನ್ನು ವಜಾಗೊಳಿಸಲಾಗಿದೆ ಎಂದು ಪ್ರತಿಪಾದಿಸಿದೆ. ಆದಾಗ್ಯೂ ದಿನವಿಡೀ ನಿಗಾ ವಹಿಸುವುದು ತನಗೆ ಅನಾನುಕೂಲವಾಗಿದೆ ಎಂದು ಉದ್ಯೋಗಿ ಹೇಳಿಕೊಂಡಿದ್ದಾನೆ. ಇದು ತನ್ನ ಖಾಸಗಿತನದ ಮೇಲಿನ ಆಕ್ರಮಣ ಎಂದೂ ಉದ್ಯೋಗಿಯು ಉಲ್ಲೇಖಿಸಿದ್ದಾನೆ.

Work From Home: Florida-based Chetu Company Sacks Employee For Refusing to Keep Webcam on

ಉದ್ಯೋಗಿ ಹೇಳುವುದೇನು?

ಕಂಪನಿಯು ತೆಗೆದುಕೊಂಡಿರುವ ಕ್ರಮವು ನನ್ನ ಗೌಪ್ಯತೆಯ ಮೇಲಿನ ಆಕ್ರಮಣವಾಗಿದೆ. ಇದು ನನಗೆ ನಿಜವಾಗಿಯೂ ಅನಾನುಕೂಲವಾಗಿದೆ. ನಾನು ಕ್ಯಾಮೆರಾ ಆನ್ ಮಾದಿರುವುದಕ್ಕೆ ಇದೇ ಕಾರಣ," ಎಂದು ಉದ್ಯೋಗಿ ಹೇಳಿದ್ದಾರೆ. ಇದರ ನಂತರ, ಡಚ್ ನ್ಯಾಯಾಲಯವು ಯುಎಸ್ ಕಂಪನಿಯು ವಜಾಗೊಳಿಸಿದ ಉದ್ಯೋಗಿಗೆ 72,700 ಯುಎಸ್ ಡಾಲರ್ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಸಾಫ್ಟ್‌ವೇರ್ ಕಾರ್ಪೊರೇಷನ್ ವಿರುದ್ಧದ ನಿರ್ಧಾರದಲ್ಲಿ ನ್ಯಾಯಾಲಯವು "ರಿಮೋಟ್ ಸಿಬ್ಬಂದಿ ತಮ್ಮ ವೆಬ್‌ಕ್ಯಾಮ್ ಅನ್ನು ಇರಿಸಿಕೊಳ್ಳಲು ಬಯಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ" ಎಂದು ತೀರ್ಮಾನಿಸಿದೆ. ಈ ಕಂಪನಿಯು ದಿನಕ್ಕೆ ಎಂಟು ಗಂಟೆಗಳ ಕಾಲ ತನ್ನ ವೆಬ್‌ಕ್ಯಾಮ್ ಅನ್ನು ಇರಿಸಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ಅವನನ್ನು ವಜಾಗೊಳಿಸಿದೆ ಎಂದು ನ್ಯಾಯಾಲಯವು ಗಮನಿಸಿದೆ. ಹೀಗಾಗಿ ಫ್ಲೋರಿಡಾ ಮೂಲದ ಚೇತು ಈಗ ನೆದರ್ಲ್ಯಾಂಡ್ಸ್ ಮೂಲದ ಮಾಜಿ ರಿಮೋಟ್ ಸಿಬ್ಬಂದಿಗೆ 72,700 ಯುಎಸ್ ಡಾಲರ್ ಪರಿಹಾರವನ್ನು ಪಾವತಿಸಬೇಕು ಎಂದು ಸೂಚಿಸಿದೆ.

English summary
Work From Home: Florida-based telemarketing Chetu Company Sacks Employee For Refusing to Keep Webcam on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X