ಅತ್ಯಾಚಾರದ ವಿರುದ್ಧ ಕಿಡಿ, ಮಹಿಳೆಯರಿಂದ ವಿನೂತನ ಪ್ರತಿಭಟನೆ

ಪ್ರತಿಭಟನೆಗೆ ನಾನಾ ಸ್ವರೂಪಗಳಿರುತ್ತವೆ. ಕೆಲವು ವರ್ಷಗಳ ಹಿಂದೆ 'ಪ್ರೇಮಿಗಳ ದಿನ' ಆಚರಣೆ ವಿರೋಧಿಸಿದ್ದಕ್ಕಾಗಿ ಮಹಿಳಾಮಣಿಗಳು ವಿರೋಧಿಸಿದವರಿಗೆ ಪಿಂಕ್ ಚಡ್ಡಿ ರವಾನಿಸಿದ್ದರು. ಕಡೆಗೆ ಆ ಪ್ರತಿಭಟನೆ ಕಾವು ಕಳೆದುಕೊಂಡು, ಪಿಂಕ್ ಚಡ್ಡಿ ಪ್ರತಿಭಟನಾಕಾರರು ಅಡ್ರೆಸ್ಸಿಗೇ ಇಲ್ಲದಂತಾಗಿದ್ದಾರೆ.

ಇದೀಗ ಅತ್ಯಾಚಾರದಂತಹ ಗಂಭೀರವಾದಂತಹ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯರು ಪ್ರತಿಭಟನೆಯ ರೂಪದಲ್ಲಿ ಒಳಚಡ್ಡಿಯ ಚಿತ್ರಗಳನ್ನು ಪ್ರವಾಹೋಪಾದಿಯಲ್ಲಿ ಟ್ವಿಟ್ಟರ್ ನಲ್ಲಿ ಪ್ರಕಟಿಸುತ್ತಿದ್ದಾರೆ.

17 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಹೊತ್ತಿದ್ದ 27 ವರ್ಷದ ಯುವಕನನ್ನು, ಆ ಯುವತಿ ಆ ಸಮಯದಲ್ಲಿ ಕೇವಲ ಅಂಡರ್ ವೇರ್ ತೊಟ್ಟಿದ್ದಳೆಂಬ ಕಾರಣಕ್ಕಾಗಿ, ಆರೋಪಮುಕ್ತ ಮಾಡಲಾಗಿದೆ. ಆಕೆಯೇ ಆ ಒಳಚಡ್ಡಿ ತೊಟ್ಟು ಆತನನ್ನು ಆಕರ್ಷಿಸಿದ್ದರಿಂದ ಆತ ಅತ್ಯಾಚಾರ ಎಸಗಿದ ತಪ್ಪು ಮಾಡಿಲ್ಲ ಎಂದು ಕೋರ್ಟ್ ಹೇಳಿರುವುದು ವಿಶ್ವದಾದ್ಯಂತ ಯುವತಿಯರ ಆಕ್ರೋಶಕ್ಕೆ ಕಾರಣವಾಗಿದೆ.

Women around the world send pictures of underwear as protest

#ThisIsNotConsent ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವಿಟ್ಟರ್ ನಲ್ಲಿ ಮಹಿಳೆಯರು ತಮ್ಮ ಒಳಚಡ್ಡಿಯ ಚಿತ್ರಗಳನ್ನು ಹರಿಯಬಿಡುತ್ತಿದ್ದು, ಆ ತೀರ್ಪಿನ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಐ ಬಿಲೀವ್ ಹರ್ - ಐರ್ಲೆಂಡ್ ಎಂಬ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆ ತೆರೆದು ಅದರಲ್ಲಿಯೂ ಒಳಚಡ್ಡಿಯ ಚಿತ್ರಗಳೊಂದಿಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.

ವಾದ ಮಂಡಿಸುವಾಗ, ಆರೋಪಿಯ ಪರ ವಕೀಲ, ಯುವತಿ ದೌರ್ಜನ್ಯ ಎಸಗಲಾಗಿದ್ದ ಸಮಯದಲ್ಲಿ ಧರಿಸಿದ್ದ ಒಳಚಡ್ಡಿಯನ್ನು ಮುಕ್ತವಾಗಿ ಕೋರ್ಟ್ ಹಾಲ್ ನಲ್ಲಿ ತೋರಿಸಿ, ಆಕೆ ಆ ಸಮಯದಲ್ಲಿ ಯಾವ ರೀತಿ ಬಟ್ಟೆ ಧರಿಸಿದ್ದಳೆಂದು ನೋಡಬೇಕಿತ್ತು, ಕೇವಲ ಲೇಸ್ ಇರುವ ಒಳಚಡ್ಡಿಯನ್ನು ಆಕೆ ಧರಿಸಿದ್ದಳು ಎಂದು ವಾದಿಸಿದ್ದರು. ಇದನ್ನೇ ಪರಿಗಣಿಸಿದ ನ್ಯಾಯಾಲಯ ಯುವಕ ಯುವತಿಯ ಅತ್ಯಾಚಾರ ಮಾಡಿಲ್ಲ ಎಂದು ತೀರ್ಪು ನೀಡಿತ್ತು. ಆ ಎಂಟು ಜ್ಯೂರಿಗಳಿದ್ದ ಪೀಠದಲ್ಲಿ ನಾಲ್ವರು ಮಹಿಳೆಯರೂ ಇದ್ದರೆಂಬುದು ವಿಶೇಷ.

ಬರೀ ಒಳಚಡ್ಡಿ ಧರಿಸಿದ ಮಾತ್ರಕ್ಕೆ ಅತ್ಯಾಚಾರಕ್ಕಾಗಲಿ, ಲೈಂಗಿಕ ಕ್ರಿಯೆಗಾಗಲಿ ಅನುಮತಿ ನೀಡಿದ ಹಾಗಾಗುವುದಿಲ್ಲ ಎಂದು ವಿಶ್ವದಾದ್ಯಂತ ಮಹಿಳೆಯರು ಕಿಡಿ ಕಾರುತ್ತಿದ್ದಾರೆ. ಮಹಿಳೆ ಎಂಥ ರೀತಿಯ ಒಳಚಡ್ಡಿ ಧರಿಸುತ್ತಾಳೆ ಎಂಬುದರ ಆಧಾರದ ಮೇಲೆ, ಅದನ್ನೇ ವಿಚಾರಣೆಯ ಸಮಯದಲ್ಲಿ ಸಾಕ್ಷಿಯಾಗಿ ಬಳಸಲು ಸಾಧ್ಯವೆ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅತ್ಯಾಚಾರದಂತಹ ದೌರ್ಜನ್ಯಕ್ಕೊಳಗಾಗಿರುವ ಯುವತಿಯ ಬಗ್ಗೆ ಇಂಥ ಅಸಹ್ಯಕರ ವಾದವನ್ನು ಮಂಡಿಸಲು ಮತ್ತು ತೀರ್ಪು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ.

ಐರಿಶ್ ರಾಜಕಾರಣಿ ರುತ್ ಕಾಪ್ಪಿಂಗರ್ ಅವರು, ಪಾರ್ಲಿಮೆಂಟ್ ನ ಕೆಳಮನೆಯಲ್ಲಿಯೇ ತಾವು ಧರಿಸುವ ಕಪ್ಪು ಬಣ್ಣದ ಒಳಚಡ್ಡಿಯನ್ನು ಎತ್ತಿಹಿಡಿದು ಸಂಸದರ ಗಮನ ಸೆಳೆದರು. ನಾನು ಸಂಸತ್ತಿನಲ್ಲಿ ಒಳಚಡ್ಡಿಯನ್ನು ಹಿಡಿದಾಗ ಕ್ಯಾಮೆರಾಗಳು ಆಫ್ ಆದವೆಂದು ಕೇಳಿದೆ. ಆದರೆ, ಕೋರ್ಟಿನಲ್ಲಿ ಸಂತ್ರಸ್ತೆಯ ಒಳಚಡ್ಡಿಯನ್ನು ಸಾಕ್ಷಿಯಾಗಿ ಎಲ್ಲರೆದಿರಿನಲ್ಲಿ ಎತ್ತಿಹಿಡಿಯುವುದು ಮತ್ತು ಪ್ರದರ್ಶಿಸುವುದು ನಿಯಮಕ್ಕೆ ಸಮ್ಮತವೆ? ಎಂದು ಪ್ರಶ್ನಿಸಿದ್ದಲ್ಲದೆ, ಈ ಕಾರಣಕ್ಕಾಗಿಯೇ ಸಂಸತ್ತಿನಲ್ಲಿ ಇದನ್ನು ತೋರಿಸುತ್ತಿದ್ದೇನೆ ಎಂದು ಟ್ವಿಟ್ಟರಿನಲ್ಲಿ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+