ಪ್ರಿಯಕರನನ್ನು ಪರೀಕ್ಷಿಸಲು ನೀಲಿ ತಾರೆಯನ್ನು ಬಳಸಿಕೊಂಡ ಪ್ರೇಯಸಿ

Posted By: Prithviraj
Subscribe to Oneindia Kannada

ಲಂಡನ್, ಅಕ್ಟೋಬರ್, 22: ತನ್ನ ಪ್ರಿಯಕರ ಎಷ್ಟು ನಿಯತ್ತಾಗಿ ತನ್ನೊಂದಿಗೆ ಇದ್ದಾನೆ ಎಂಬ ಕುತೂಹಲ ಎಲ್ಲ ಹುಡುಗಿಯರಿಗೂ ಇರುತ್ತೆ. ತನ್ನ ಲವರ್ ತನ್ನ ಮೇಲೆ ಮಾತ್ರ ಪ್ರೀತಿ ಸುರಿಸಬೇಕು, ಬೇರೆ ಹುಡುಗಿಯರನ್ನು ಕಣ್ಣೆತ್ತಿ ಸಹ ನೋಡಬಾರದು ಎಂಬ ಉದ್ದೇಶ ಎಲ್ಲ ಮಹಿಳೆಯರೂ ಹೊಂದಿರುತ್ತಾರೆ.

ಸಮಯ ಸಿಕ್ಕಾಗಲೆಲ್ಲಾ ಪ್ರಿಯಕರನ ಪ್ರೇಮಕ್ಕೆ ಪರೀಕ್ಷೆ ಇಡುತ್ತಲೇ ಇರುತ್ತಾರೆ. ಅದು ಹಲವು ವಿಧಗಳಲ್ಲಿ ಇರುತ್ತೆ. ಆದರೆ ಈ ಮಹಿಳೆ ಮಾತ್ರ ತನ್ನ ಪ್ರಿಯಕರನನ್ನು ಪರೀಕ್ಷಿಸಲು ಆಯ್ಕೆಮಾಡಿಕೊಂಡ ವಿಧಾನ ಆಕೆಯ ಪ್ರೀತಿಗೆ ಮುಳುವಾಗಿ ಪರಿಣಮಿಸಿದೆ. [ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]

ತನ್ನ ಪ್ರಿಯಕರನ ಪ್ರೇಮ ಪರೀಕ್ಷೆಗಾಗಿ ಈ ಮಹಿಳೆ ಓರ್ವ ನೀಲಿಚಿತ್ರಗಳ ತಾರೆಯನ್ನು ಬಳಸಿಕೊಂಡಿದ್ದು, ಅದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Woman hired a porn star to see if her boyfriend would cheat

ಇಷ್ಟಕ್ಕೂ ನಡೆದದ್ದು ಏನೆಂದರೆ ಲಂಡನ್ ನಗರದ ಯುವತಿಯೊಬ್ಬಳು ವಾಲೆರೀಸ್ ಚಾರ್ಮ್ಸ್ ಎಂಬ ನೀಲಿಚಿತ್ರಗಳಲ್ಲಿ ನಟಿಸುವ ತಾರೆಯೊಬ್ಬರನ್ನು ಸಂಪರ್ಕಿಸಿ, 'ನಾನು ನನ್ನ ಪ್ರಿಯಕರನ ಪ್ರೀತಿಯನ್ನು ನಿಯತ್ತನ್ನು ಪರೀಕ್ಷಿಸಬೇಕು ಸಹಾಯ ಮಾಡಿ' ಎಂದು ಕೇಳಿಕೊಂಡಿದ್ದಾಳೆ. ಅದಕ್ಕೆ ಈ ತಾರೆಯೂ ಸಹ ಒಪ್ಪಿಕೊಂಡಿದ್ದಾಳೆ.

ಲಂಡನ್ ಬುಕ್ ಸ್ಟಾಲ್ ವೊಂದರ ಬಳಿ ಯುವತಿಯ ಪ್ರಿಯಕರನನ್ನು ಭೇಟಿ ಮಾಡಿದ ಈ ತಾರೆ, ಮಾತಿಗಿಳಿಸಿ ಆತನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ಯುವಕ ಆರಂಭದಲ್ಲಿ ಆಕೆಯಿಂದ ದೂರವಿದ್ದರೂ, ನೀಲಿ ತಾರೆಯ ಮಾತಿನ ಮೋಡಿಗೆ ಸೋತು ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದಾನೆ. 'ನಿನಗೆ ಯಾರಾದರೂ ಪ್ರೇಯಸಿ ಇದ್ದಾಳೆಯೇ ಎಂದು' ಈ ತಾರೆ ಕೇಳಿದ್ದಾಳೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಯುವಕ 'ಹೌದು' ಎಂದು ತಲೆ ಆಡಿಸಿದ್ದಾನೆ. ಅದಕ್ಕೆ ಈ ತಾರೆ 'ಪರವಾಗಿಲ್ಲ ಬಿಡು ನಿನ್ನೊಂದಿಗೆ ಸ್ವಲ್ಪ ಕೆಲಸ ಇದೆ. ರಾತ್ರಿ ಮನೆಗೆ ಬರ್ತಿನಿ ಕಾಯುತ್ತಿರು. ಎಂದು ಹೇಳಿದ್ದಾಳೆ.

ಯುವಕ ಮಾತ್ರ 'ನನ್ನ ಮನೆಗೆ ಏಕೆ ಬರುತ್ತೀರಿ?' ಎಂದು ಕೇಳಿದ್ದಾನೆ. ಯುವಕನ ಪ್ರಶ್ನೆಗೆ ಈ ತಾರೆ ನೀಡಿದ ಉತ್ತರ ಯುವಕನನ್ನು ದಿಗ್ರ್ಭಾಂತಿಗೊಳಿಸಿದೆ. "ನಾನು ಒಬ್ಬ ಪೋರ್ನ್ ಸ್ಟಾರ್, ನೀಲಿ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಇನ್ನು ಸ್ವಲ್ಪ ದಿನಗಳಲ್ಲಿ ಷೂಟಿಂಗ್ ಆರಂಭವಾಗಲಿದೆ. ಸ್ವಲ್ಪ ಪ್ರಾಕ್ಟೀಸ್ ಮಾಡ್ಬೇಕು" ಎಂದು ಹೇಳಿದ್ದಾಳೆ.

ನಿನಗೆ ಗರ್ಲ್ ಫ್ರೆಂಡ್ ಇರುವುದು ನನಗೆ ಸಮಸ್ಯೆಯೇನೂ ಅಲ್ಲ ನೀನು ಒಪ್ಪಿದರೆ ಸಾಕು ಎಂದು ಹೇಳಿದ್ದಾಳೆ. ಯುವಕ ಮರುಮಾತನಾಡದೇ ಮನೆಯ ಅಡ್ರಸ್ ಹೇಳಿ ಅಲ್ಲಿಂದ ಹೊರಟಿದ್ದಾನೆ.

ಯುವಕನ ಪ್ರೇಯಸಿ ಮನೆಯಲ್ಲೇ ಕುಳಿತುಕೊಂಡು ಕಂಪ್ಯೂಟರ್ ಮೂಲಕ ಯುವಕನ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದಾಳೆ. ತನ್ನ ಪ್ರಿಯಕರ ಆ ನೀಲಿ ತಾರೆಗೆ ಫೋನ್ ನಂಬರ್ ಮತ್ತು ವಿಳಾಸ ತಿಳಿಸಿದ್ದಕ್ಕೆ ಯುವತಿ ಕೆಂಡಾಮಂಡಲವಾಗಿದ್ದಾಳೆ.

ಯುವಕನೊಂದಿಗೆ ಸ್ವಲ್ಪಹೊತ್ತು ಜಗಳವಾಡಿ ಸುಮ್ಮನಾಗಿದ್ದಾಳೆ. ಆದರೆ ಅವನ ಪ್ರೀತಿಯೇ ಬೇಕು ಎಂದು ಹೇಳಿದ್ದಾಳೆ. ಇನ್ನು ಮುಂದೆ ಬೇರೆ ಹುಡುಗಿಯರ ಕಡೆ ನೋಡಬೇಡ ಎಂದು ಯುವಕನಿಗೆ ಸೂಚಿಸಿದ್ದಾಳೆ.

ಆದರೆ ಈ ಯುವಕ ಮಾತ್ರ ಪ್ರೇಯಸಿಯ ಕೃತ್ಯಕ್ಕೆ ಸಿಡಿಮಿಡಿಗೊಂಡಿದ್ದು, ನನ್ನನ್ನೇ ಪರೀಕ್ಷಿಸುತ್ತೀಯಾ? ನನ್ನ ಪ್ರೀತಿಗೆ ಪರೀಕ್ಷೆ ಇಡುತ್ತೀಯಾ' ಎಂದು ಯುವತಿಯ ಮೇಲೆ ರೇಗಾಡಿದ್ದಾನೆ. ಅಷ್ಟೇ ಅಲ್ಲದೇ ನೀನು ಬೇಡ, ನಿನ್ನ ಪ್ರೀತಿಯೂ ಬೇಡ ಎಂದು ಅವಳನ್ನು ದೂರ ಮಾಡಿಕೊಂಡಿದ್ದಾನೆ.

ತನ್ನ ಪ್ಲಾನ್ ತನಗೆ ಮುಳುವಾಗಿದ್ದಕ್ಕೆ ಯುವತಿ ಈಗ ಗೋಳಾಡುತ್ತಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman sent a porn star to test her boyfriend's loyalty and it backfired, in London.
Please Wait while comments are loading...