ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಪ್ರಿಯ ಮತ ಗೆದ್ದಿದ್ದರೂ ಹಿಲರಿ ಕ್ಲಿಂಟನ್ ಸೋತಿದ್ದೇಕೆ?

By ಲಿಸಾ ಜಾನಿ
|
Google Oneindia Kannada News

ಜನಪ್ರಿಯ ಮತ ಎಣಿಕೆಯಲ್ಲಿ ಜಯಭೇರಿ ಬಾರಿಸಿದ್ದರೂ ಡೆಮೊಕ್ರೆಟಿಕ್ ಪಕ್ಷದ ನಾಯಕಿ ಹಿಲರಿ ಕ್ಲಿಂಟನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿದ್ದು ಹೇಗೆ? ಇದು ಅವರ ಹಿಂಬಾಲಕರಿಗೆ, ಅಭಿಮಾನಿಗಳಿಗೆ, ಡೊನಾಲ್ಡ್ ಟ್ರಂಪ್ ದ್ವೇಷಿಸುತ್ತಿದ್ದ ಮಹಿಳಾಮಣಿಗಳಿಗೆ ನುಂಗಲಾಗದ ತುತ್ತಾಗಿದೆ, ಚಿದಂಬರ ರಹಸ್ಯವೂ ಆಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ, ಜನಪ್ರಿಯ ಮತ ಗಳಿಸಿಯೂ ಮಹಿಳಾ ಅಭ್ಯರ್ಥಿಯೊಬ್ಬರು ಸೋತಿದ್ದು ಇದು ನಾಲ್ಕನೇ ಬಾರಿ. ಹಿಲರಿ ಕ್ಲಿಂಟನ್ ಸೋಲಿಗೆ ಕಾರಣ ಅಮೆರಿಕದಲ್ಲಿ ಚುನಾವಣೆ ನಡೆಸುವ ಪದ್ಧತಿಯಲ್ಲಿಯೇ ಇದೆ.

Why Hillary Clinton lost despite winning more popular votes?

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆ, ನವೆಂಬರ್ ತಿಂಗಳ ಮೊದಲ ಸೋಮವಾರದ ನಂತರ ಬರುವ ಮೊದಲ ಮಂಗಳವಾರ ನಡೆಯುತ್ತದೆ. ಮತದಾರರೆಲ್ಲ ಬಂದು ಮತ ಚಲಾಯಿಸುತ್ತಾರೆ. ಆದರೆ, ಈ ಜನಪ್ರಿಯ ವೋಟುಗಳು ಜಯಶಾಲಿ ಯಾರೆಂದು ನಿರ್ಧರಿಸುವುದಿಲ್ಲ.

ಅಮೆರಿಕದ ಅಧ್ಯಕ್ಷನನ್ನು ಆಯ್ಕೆ ಮಾಡಲು ವಿಭಿನ್ನ ವಿಧಾನವನ್ನು ಪಾಲಿಸಲಾಗುತ್ತದೆ. ಜನ ಮತ ಹಾಕುವುದು ಅಧ್ಯಕ್ಷೀಯ ಅಭ್ಯರ್ಥಿಗಲ್ಲ, ಬದಲಾಗಿ ಆಯಾ ರಾಜ್ಯಗಳಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗೆ. ಚುನಾವಣೆಗೆ ನಿಂತ ಅಭ್ಯರ್ಥಿ ಜನಪ್ರಿಯ ಮತಗಳಿಗಿಂತ ಎಲೆಕ್ಟೋರಲ್ ವೋಟ್ ಗಳನ್ನು ಹೆಚ್ಚು ಪಡೆದರೆ ಮಾತ್ರ ಅಧ್ಯಕ್ಷನಾಗಿ ಆಯ್ಕೆಯಾಗುತ್ತಾರೆ.

ಆಯಾ ರಾಜ್ಯಗಳಲ್ಲಿ ಎಷ್ಟು ಜನ ಜನಪ್ರತಿನಿಧಿಗಳು ಮತ್ತು ಸೆನೆಟರ್‌ಗಳು ಇದ್ದಾರೆ ಎಂಬುದರ ಆಧಾರದ ಮೇಲೆ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಾಷಿಂಗ್ಟನ್ ಡಿಸಿಯ ಮೂರು ಆಯ್ಕೆದಾರರನ್ನು ಸೇರಿ ಒಟ್ಟಾರೆ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಬರುವುದು 538.

ಎರಡು ರಾಜ್ಯಗಳನ್ನು ಹೊರತುಪಡಿಸಿ ಉಳಿದ ಎಲ್ಲ 48 ರಾಜ್ಯಗಳಲ್ಲಿ ಗೆದ್ದ ಚುನಾಯಿತ ಪ್ರತಿನಿಧಿ, ಆಯಾ ರಾಜ್ಯದ ಎಲ್ಲ ಜನಪ್ರಿಯ ಮತಗಳನ್ನು ಪಡೆದುಕೊಳ್ಳುತ್ತಾರೆ. ಒಂದೇ ಒಂದು ಅಂಕದಿಂದ ಗೆದ್ದರೂ, ರಾಜ್ಯದ ಎಲ್ಲ ಮತಗಳು ಅವರಿಗೇ ದೊರೆಯಲಿವೆ. ಈ ಕಾರಣದಿಂದಾಗಿ ಹಿಲರಿ ಕ್ಲಿಂಟನ್ ಅತಿಹೆಚ್ಚು ಜನಪ್ರಿಯ ಮತಗಳನ್ನು ಗಳಿಸಿದ್ದರೂ, ಸೋತಿದ್ದಾರೆ.

English summary
Hillary Clinton's loss lies in the method that is followed by the US to elect its President. The candidate must receive majority of electoral votes and not popular votes to win the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X