• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾರಾಗಲಿದ್ದಾರೆ ಜಪಾನ್‌ನ ಮುಂದಿನ ಪ್ರಧಾನಿ..?

|

ಜಪಾನ್ ಪ್ರಧಾನಿ ಪಟ್ಟಕ್ಕೆ ಶಿಂಜೋ ಅಬೆ ರಾಜೀನಾಮೆ ನೀಡುತ್ತಿದ್ದಂತೆ, ಜಗತ್ತಿನ 3ನೇ ಬಲಿಷ್ಠ ಆರ್ಥಿಕ ರಾಷ್ಟ್ರದ ರಾಜಕೀಯ ವಿದ್ಯಾಮಾನ ತೀವ್ರ ಕುತೂಹಲ ಕೆರಳಿಸಿದೆ. ಖಾಲಿ ಇರುವ ಪಿಎಂ ಪಟ್ಟಕ್ಕೆ ಜಪಾನ್‌ನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಏತನ್ಮಧ್ಯೆ ಶಿಂಜೊ ಅಬೆಗೆ ಆಪ್ತರಾಗಿದ್ದ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಯೋಶಿಹಿಡೆ ಸುಗಾ ಪಿಎಂ ಪಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎನ್ನಲಾಗ್ತಿದೆ. ಆದರೆ ಇದು ಸುಗಾಗೆ ಬಿಲ್‌ಕುಲ್ ಇಷ್ಟವಿಲ್ಲ. ಇಷ್ಟೆಲ್ಲದರ ನಡುವೆಯೂ ಸುಗಾ ಪ್ರಧಾನಿ ಪಟ್ಟದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

   ಕಾಂಗ್ರೆಸ್ ನ ನಿಷ್ಠಾವಂತ ಕಟ್ಟಾಳು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   'ಅಲ್ಸರೇಟಿವ್ ಕೊಲೈಟಿಸ್' ಎಂಬ ಕಾಯಿಲೆಯಿಂದ ಬಳಲುತ್ತಿರುವ ಶಿಂಜೋ ಅಬೆ ಏಕಾಏಕಿ ರಾಜೀನಾಮೆ ನೀಡಿರೋದು ಸಂಚಲನ ಸೃಷ್ಟಿಸಿತ್ತು. ಅತ್ಯಂತ ದೀರ್ಘಾವಧಿವರೆಗೆ ಜಪಾನ್ ಪ್ರಧಾನಿ ಹುದ್ದೆ ನಿಭಾಯಿಸಿದ್ದ ಶಿಂಜೋ ಅಬೆ ನಿರ್ಧಾರ ಮಿತ್ರ ರಾಷ್ಟ್ರಗಳಿಗೂ ಶಾಕ್ ನೀಡಿತ್ತು. ಹೀಗಾಗಿ ಪ್ರಸಕ್ತ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಬಲ್ಲ ನಾಯಕ ಆಯ್ಕೆಯಾಗಬೇಕಿದೆ.

   ಜಪಾನ್ ಪ್ರಧಾನಿ ರಾಜೀನಾಮೆ: ಅನಾರೋಗ್ಯವೇ ಕಾರಣ?

   ಸುಗಾ ಜೊತೆಯಲ್ಲೇ ಜಪಾನ್ ಉಪಪ್ರಧಾನಿ ತಾರೋ ಅಸೊ ಕೂಡ ಪಿಎಂ ಪಟ್ಟದ ಪೈಪೋಟಿಯಲ್ಲಿ ಮುಂಚೂಣಿಯಲ್ಲಿರುವ ಹೆಸರು. ಆದರೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಭವಿಷ್ಯದ ದೃಷ್ಟಿಯಿಂದ ಉತ್ತಮ ನಾಯಕನ ಆಯ್ಕೆಗೆ ಆಡಳಿತಾರೂಢ 'ಲಿಬರಲ್ ಡೆಮಾಕ್ರಟಿಕ್ ಪಾರ್ಟಿ' ನಾಯಕರು ಒಗ್ಗಟ್ಟಾಗಿದ್ದಾರೆ.

   ಭಾರತದ ಅತ್ಯುತ್ತಮ ಮಿತ್ರನ ಪದತ್ಯಾಗ..!

   ಭಾರತದ ಅತ್ಯುತ್ತಮ ಮಿತ್ರನ ಪದತ್ಯಾಗ..!

   ಶಿಂಜೋ ಅಬೆ ಕಾಲದಲ್ಲಿ ಭಾರತ, ಜಪಾನ್‌ನ ಸಂಬಂಧ ಸಾಕಷ್ಟು ವೃದ್ಧಿಸಿತ್ತು. ಆದರೆ ಈಗ ಅಬೆ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಹಲವು ವಿಚಾರದಲ್ಲಿ ಜಪಾನ್ ಭಾರತಕ್ಕೆ ಸಹಕಾರ ನೀಡುವಂತಾಗಿದ್ದು ಅಬೆ ಕಾಲದಲ್ಲಿ. ಭಾರತದ ಭವಿಷ್ಯ ಬದಲಿಸಬಲ್ಲ ಅಹಮದಾಬಾದ್ ಹಾಗೂ ಮುಂಬೈ ಬುಲೆಟ್ ರೈಲು ಯೋಜನೆಗೆ ಒಪ್ಪಂದ ನಡೆದಿದ್ದು ಕೂಡ ಅಬೆ ಕಾಲದಲ್ಲೇ.

   ಈ ಯೋಜನೆಗೆ ಜಪಾನ್ ತಂತ್ರಜ್ಞಾನದ ಜೊತೆ ಧನಸಹಾಯ ಕೂಡ ಮಾಡುತ್ತಿದೆ. ಹಾಗೇ ಭಾರತ, ಜಪಾನ್‌ನ ಸಮಾನ ಶತ್ರು ಚೀನಾ ವಿರುದ್ಧದ ಹೋರಾಟದಲ್ಲೂ ಜಪಾನ್ ಭಾರತಕ್ಕೆ ಬೆಂಬಲವಾಗಿ ನಿಂತಿದೆ. ಇದೆಲ್ಲವನ್ನೂ ಶಿಂಜೋ ಅಬೆ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆದರೆ ಮುಂದಿನ ಜಪಾನ್ ಪ್ರಧಾನಿ ಭಾರತ-ಜಪಾನ್ ಸಂಬಂಧ ವೃದ್ಧಿಸುತ್ತಾರೋ, ಇಲ್ಲವೋ ಎಂಬುದು ಈಗ ಟ್ರಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

   ಭಾರತವೆಂದರೆ ಅಬೆ ಅವರಿಗೆ ಅಚ್ಚುಮೆಚ್ಚು..!

   ಭಾರತವೆಂದರೆ ಅಬೆ ಅವರಿಗೆ ಅಚ್ಚುಮೆಚ್ಚು..!

   ಶಿಂಜೋ ಅಬೆ 2006-07ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದರು, ಸಂಸತ್‌ನಲ್ಲಿ ಭಾಷಣ ಮಾಡಿದ್ದರು. 2014ರಲ್ಲಿ ಮೊದಲ ಬಾರಿಗೆ ಜಪಾನ್‌ನ ಪ್ರಧಾನಿಯೊಬ್ಬರು ಭಾರತದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದರು. ಇದನ್ನು ಹೊರತುಪಡಿಸಿ ಅಬೆ 2015ರ ಡಿಸೆಂಬರ್, 2017ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದರು. ಅತಿ ಹೆಚ್ಚು ಬಾರಿ ಭಾರತಕ್ಕೆ ಭೇಟಿ ನೀಡಿದ್ಧ ಜಪಾನ್ ಪ್ರಧಾನಿ ಎಂಬ ಹೆಗ್ಗಳಿಕೆಯೂ ಶಿಂಜೋ ಅಬೆ ಅವರಿಗೆ ಸಲ್ಲುತ್ತದೆ. ಇಷ್ಟಕ್ಕೆಲ್ಲಾ ಕಾರಣ ಭಾರತವೆಂದರೆ ಶಿಂಜೋ ಅಬೆಗೆ ಅಚ್ಚುಮೆಚ್ಚು. ಅದರಲ್ಲೂ ಪ್ರಧಾನಿ ಮೋದಿ ಹಾಗೂ ಶಿಂಜೋ ಅಬೆ ಅತ್ಯುತ್ತಮ ಸ್ನೇಹಿತರು. ಅಹಮದಾಬಾದ್ ಹಾಗೂ ಮುಂಬೈ ನಡುವಿನ ಬುಲೆಟ್ ರೈಲು ಯೋಜನೆ ಇವರಿಬ್ಬರ ಸ್ನೇಹದ ಕುರುಹು ಎನ್ನಬಹುದು.

   3C ನಿಯಮ ಪಾಲಿಸಿ ಕೊವಿಡ್ ಯುದ್ಧ ಗೆದ್ದ ಜಪಾನ್

   ಬೀಜಿಂಗ್ ವಿರುದ್ಧ ಬದ್ಧತೆಯ ಹೋರಾಟ..!

   ಬೀಜಿಂಗ್ ವಿರುದ್ಧ ಬದ್ಧತೆಯ ಹೋರಾಟ..!

   ಜಪಾನ್ ಮತ್ತು ಭಾರತದ ಮಧ್ಯೆ ಸಹಭಾಗಿತ್ವಕ್ಕೆ 2001ರಲ್ಲಿ ಅಡಿಪಾಯ ಹಾಕಲಾಯಿತು. ಹಾಗೂ 2005ರಲ್ಲಿ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಗೆ ಒಪ್ಪಿಗೆ ನೀಡಲಾಯಿತು. 2012ರಿಂದ ಭಾರತ ಮತ್ತು ಜಪಾನ್ ಸಂಬಂಧ ಗಟ್ಟಿಗೊಂಡಿತು. ಅಬೆ ನಾಯಕತ್ವದಲ್ಲಿ ಭಾರತ ಮತ್ತು ಜಪಾನ್ ‘ಆಕ್ಟ್ ಈಸ್ಟ್ ಫೋರಂ' ರಚಿಸಲಾಗಿತ್ತು. ಇಬ್ಬರ ಸಮಾನ ಶತ್ರು ಬೀಜಿಂಗ್‌ಗೆ ಗುನ್ನಾ ಕೊಡಲು ಮಾಲ್ಡೀವ್ಸ್, ಶ್ರೀಲಂಕಾದಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಜಂಟಿಯಾಗಿ ಕೈಗೊಳ್ಳಲಾಗುತ್ತಿದೆ. ಒಟ್ಟಾರೆ ಶಿಂಜೋ ಅಬೆ ರೀತಿಯಲ್ಲೇ ಭಾರತದ ಜೊತೆ ಸಂಬಂಧ ವೃದ್ಧಿಸುವ ಮತ್ತೊಬ್ಬ ನಾಯಕ ಜಪಾನ್‌ಗೆ ಸಿಗಲಿ ಎಂಬುದೇ ಎಲ್ಲರ ಆಶಯ.

    ದೀರ್ಘಾವಧಿಯ ಪ್ರಧಾನಿ

   ದೀರ್ಘಾವಧಿಯ ಪ್ರಧಾನಿ

   ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ ಮುಂದಿನ ಪ್ರಧಾನಿ ಯಾರು ಎಂಬುದನ್ನು ಆಯ್ಕೆ ಮಾಡುವವರೆಗೆ ಶಿಂಜೋ ಅಬೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿ ಹೇಳಿದೆ. ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

   ಜಪಾನ್ ಪ್ರಧಾನಿ ಶಿಂಜೋ ರಾಜೀನಾಮೆ: ಭಾರತದ ಮರುಕವೇಕೆ?

   ಜಪಾನ್ ವಿತ್ತ ಸಚಿವ ಟಾರೊ ಅಸೋ ಮತ್ತು ಜಪಾನ್ ಸರ್ಕಾರದ ವಕ್ತಾರ ಯೋಶಿಹಿಡೆ ಸುಗಾ ಹೆಸರು ಕೇಳಿಬರುತ್ತಿದೆ. ಜಪಾನ್ ರಾಜಕೀಯ ಇತಿಹಾಸದಲ್ಲಿ ಅತೀ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಶಿಂಜೋ ಅಬೆ ಅವರದ್ದಾಗಿದೆ.

   English summary
   There is big internal political fight begun in japan for next prime minister post. Chief Cabinet Secretary Yoshihide Suga and Japanese Deputy Prime Minister Taro Aso in top of the race.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X