'ಕೊರೊನಾ ನಮ್ಮೊಂದಿಗೆ ದೀರ್ಘಕಾಲ ಇರುತ್ತದೆ': WHO ಎಚ್ಚರಿಕೆ

ದೆಹಲಿ, ಏಪ್ರಿಲ್ 23: ಕೊರೊನಾ ವೈರಸ್‌ ಎಷ್ಟು ದಿನ ಬದುಕಿರುತ್ತೆ? ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ ಆತ ಚೇತರಿಸಿಕೊಳ್ಳಲು ಎಷ್ಟು ದಿನ ಆಗುತ್ತೆ? ಎಂಬುದಕ್ಕೆ ಇದುವರೆಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ವೈರಸ್‌ ಕಾಲಾವಧಿ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ.

Recommended Video

      ಹಿಂದೂ ಮುಸ್ಲಿಂ ಒಗ್ಗಟ್ಟಾದ್ರೆ ಮಾತ್ರ ಕೊರೊನಾ ವಿರುದ್ಧದ ಹೋರಾಟ ಫಲಿಸುತ್ತೆ | Oneindia Kannada

      'ಕೊರೊನಾ ವೈರಸ್‌ ನಮ್ಮೊಂದಿಗೆ ದೀರ್ಘಕಾಲದವರೆಗೂ ಇರುತ್ತದೆ. ನಮ್ಮ ಹೋರಾಟ ಎಚ್ಚರಿಕೆಯಿಂದ ಇರಬೇಕು' ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಇಂದು ಮತ್ತೊಮ್ಮೆ ವಿಶ್ವವನ್ನು ಎಚ್ಚರಿಸಿದ್ದಾರೆ.

      ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ''ಹಲವು ದೇಶಗಳಲ್ಲಿ ಈ ಸಾಂಕ್ರಾಮಿಕ ರೋಗ ಆರಂಭಿಕ ಹಂತದಲ್ಲಿದೆ. ತಪ್ಪು ಮಾಡಬೇಡಿ. ಈ ವೈರಸ್ ಜೊತೆ ನಾವು ದೀರ್ಘಕಾಲದವರೆಗೂ ಇರಬೇಕಾಗುತ್ತದೆ'' ಎಂದು ಎಚ್ಚರಿಸಿದ್ದಾರೆ.

      WHO Warns COVID19 Virus With Us For A Long Time

      'ಮನೆಯಲ್ಲಿ ಉಳಿಯುವುದು ಮತ್ತು ಸಾಮಾಜಿಕ ಅಂತರ ಕೊರೊನಾ ಹರಡುವಿಕೆಯನ್ನ ತಡೆಯುವಲ್ಲಿ ಯಶಸ್ಸು ಆಗುತ್ತಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇದು ಬಹಳ ಅಪಾಯಕಾರಿ ವೈರಸ್. ಯಾರೂ ತಪ್ಪು ಮಾಡಬೇಡಿ'' ಎಂದಿದ್ದಾರೆ.

      ಜಗತ್ತಿನಾದ್ಯಂತ 25 ಲಕ್ಷಕ್ಕೂ (2,638,024) ಹೆಚ್ಚು ಕೊರೊನಾ ಸೋಂಕು ವರದಿಯಾಗಿದೆ. 184,235 ಜನರು ಇದರಿಂದ ಸಾವನ್ನಪ್ಪಿದ್ದಾರೆ. 721,734 ಜನರು ಚೇತರಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+