ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

ವಾಷಿಂಗ್ಟನ್, ಮಾರ್ಚ್ 6: ಮಾರಣಾಂತಿಕ ಕೊರೊನಾ(ಕೊವಿಡ್ 19) ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಯಾವ ದೇಶಗಳಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ, ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಲ್ಲದರ ಕುರಿತು ಮಾಹಿತಿ ನೀಡಿದ್ದಾರೆ.

ಇಡೀ ವಿಶ್ವದಾದ್ಯಂತ ಇಲ್ಲಿಯವರೆಗೆ 93265 ಪ್ರಕರಣಗಳು ದೃಢಪಟ್ಟಿವೆ. ಕಳೆದ 24 ಗಂಟೆಗಳಲ್ಲಿ 143 ಹೊಸ ಪ್ರಕರಣಗಳು ಚೀನಾದಲ್ಲಿ ದಾಖಲಾಗಿವೆ. ಅಷ್ಟೇ ಅಲ್ಲದೆ ಚೀನಾದಲ್ಲಿ ಇದುವರೆಗೆ 3281 ಮಂದಿ ಮೃತಪಟ್ಟಿದ್ದು, ಅತಿ ಹೆಚ್ಚು ಪ್ರಕರಣಗಳು ಚೀನಾದ ಹ್ಯುಬೆ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಅಲ್ಲಿನ 8 ಪ್ರಾಂತ್ಯಗಳಲ್ಲಿ ಇದುವರೆಗೆ ಯಾವುದೇ ಹೊಸ ಪ್ರಕರಣಗಳು ದೃಢಪಟ್ಟಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಚೀನಾ ಹೊರತುಪಡಿಸಿ ಉಳಿದ ಕಡೆ 2055 ಪ್ರಕರಣಗಳು ದೃಢಪಟ್ಟಿವೆ. ಹೊಸ ಕೇಸುಗಳು ದಾಖಲಾಗುತ್ತಿಲ್ಲ. ಇದರಿದ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದೇ ಹೇಳಬಹುದು. ಸಾಕಷ್ಟು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.115 ದೇಶಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಇನ್ನು 21 ದೇಶಗಳಲ್ಲಿ ಒಟ್ಟು ಒಂದು ಪ್ರಕರಣ ಪತ್ತೆಯಾಗಿದೆ. ಐದು ದೇಶಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ.

WHO Briefing On The Novel Coronavirus

ಇಷ್ಟೊಂದು ಪ್ರಕರಣಗಳು ಪತ್ತೆಯಾದ ಬಳಿಕವೂ ದೇಶ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ದೊಡ್ಡ ಪ್ರಮಾಣದ ಅನಾಹುತವನ್ನು ಎದುರಿಸಬೇಕಾಗುತ್ತದೆ. ಕೆಲಸವು ದೇಶಗಳು ಕೊರೊನಾವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

ಆರ್ಥಿಕವಾಗಿ ಸಬಲ ಹಾಗೂ ದುರ್ಬಲವಾಗಿರು ಎರಡೂ ದೇಶಗಳಿಗೂ ಇದು ಆವರಿಸಿದೆ. ರೋಗ ಲಕ್ಷಣ ಕಂಡುಬಂದ ತಕ್ಷಣವೇ ಮುಂಜಾಗ್ರತೆ ವಹಿಸಿ ಇನ್ನೊಬ್ಬರಿಗೆ ಹರಡದಂತೆ ಮಾಡುವುದು ಕೂಡ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ನಮ್ಮ ಕೈಯಲ್ಲಿ ಇದನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕೂರುವ ಸಮಯ ಇದಲ್ಲ. ದೇಶವು ಇಂತಹ ರೋಗಗಳು ಬಂದರೆ ಏನು ಮಾಡಬೇಕು ಎನ್ನುವ ಕುರಿತು ಚರ್ಚೆ ನಡೆಸಬೇಕು. ಪರಿಹಾರ ಕಂಡುಕೊಳ್ಳಬೇಕು. ದೇಶದ ಮುಖ್ಯಸ್ಥರು ಈ ಕ್ರಮವನ್ನು ಕೈಗೊಳ್ಳಬೇಕು.

ಕೇವಲ ಆರೋಗ್ಯ ಇಲಾಖೆಯಿಂದ ಇದು ಸಾಧ್ಯವಿಲ್ಲ. ವಾಣಿಜ್ಯ, ಭದ್ರತೆ, ಸಾರಿಗೆ, ಟ್ರೇಡ್, ಇನ್‌ಫಾರ್ಮೇಷನ್ ಎಲ್ಲವೂ ಕೈಜೋಡಿಸಬೇಕು. ಸಾರ್ವಜನಿಕರಿಗೆ ಕೊರೊನಾ ಎಂದರೇನು, ಅದರ ಲಕ್ಷಣಗಳೇನು, ರೋಗ ಕಾಣಿಸಿಕೊಂಡರೆ ಏನು ಮಾಡಬೇಕು ಎನ್ನುವುದನ್ನು ತಿಳಿಸಿ ಹೇಳಬೇಕು ಯಾವುದೇ ಕಾರಣಕ್ಕೂ ಅವರು ಹೆದರದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+