ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶದಲ್ಲಿ ಅತಿಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿರುವ ರಾಷ್ಟ್ರಗಳು ಯಾವುವು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಬಣ್ಣ ಮಾಸಿದ ಉಪಗ್ರಹಗಳು, ಕಳೆ ಕಳೆದುಕೊಂಡ ನೌಕೆಗಳ ಅವಶೇಷಗಳು ಸೇರಿದಂತೆ ಬಾಹ್ಯಾಕಾಶದ ಅಂಗಳದಲ್ಲಿ ಆಗುತ್ತಿರುವ ಮಾಲಿನ್ಯದಿಂದ ಭವಿಷ್ಯದಲ್ಲಿ ಯಾವ ರೀತಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಕುರಿತು ನಾಸಾ ಲೆಕ್ಕಾಚಾರ ಹಾಕುತ್ತಿದೆ.

ನಾಸಾದಂತ ಸಂಸ್ಥೆಗಳು ಬಾಹ್ಯಾಕಾಶ ಯಾನದಲ್ಲಿ ಶಿಲಾಖಂಡರಾಶಿಗಳ ಅವಶೇಷದಿಂದಾಗಿ ಹೇಗೆ ಅಪಾಯವನ್ನು ಎದುರಿಸುತ್ತದೆ ಎಂಬುದರ ಕುರಿತು ಸಕ್ರಿಯ ಅಧ್ಯಯನವನ್ನು ನಡೆಸುವಲ್ಲಿ ತೊಡಗಿದೆ. ನಾಸಾದ ದತ್ತಾಂಶ ಬಳಸಿಕೊಂಡು ಜರ್ಮನ್ ಡೇಟಾಬೇಸ್ ಕಂಪನಿ ಸ್ಟ್ಯಾಟಿಸ್ಟಾ ಹೆಚ್ಚು ಬಾಹ್ಯಾಕಾಶ ಮಾಲಿನ್ಯವನ್ನು ಉತ್ಪಾದಿಸುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಭೂಮಿ ಬಚಾವ್: ಕ್ಷುದ್ರಗ್ರಹಕ್ಕೆ ಅಪ್ಪಳಿಸಿದ ನಾಸಾದ DART ನೌಕೆಭೂಮಿ ಬಚಾವ್: ಕ್ಷುದ್ರಗ್ರಹಕ್ಕೆ ಅಪ್ಪಳಿಸಿದ ನಾಸಾದ DART ನೌಕೆ

ಬಾಹ್ಯಾಕಾಶ ಅಂಗಳದಲ್ಲಿ ಅತಿಹೆಚ್ಚು ಅವಶೇಷಗಳೊಂದಿಗೆ ಮಾಲಿನ್ಯವನ್ನು ಉಂಟು ಮಾಡುತ್ತಿರುವ ರಾಷ್ಟ್ರಗಳು ಯಾವುವು ಎಂಬುದರ ಕುರಿತು ಪಟ್ಟಿಯೊಂದನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಈ ರಾಷ್ಟ್ರಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚು ಮಾಲಿನ್ಯವನ್ನು ಸೃಷ್ಟಿ ಮಾಡುತ್ತಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಿದ್ದರೆ ಆ ರಾಷ್ಟ್ರಗಳು ಯಾವುವು?, ಯಾವ ದೇಶಗಳಿಂದ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಸೃಷ್ಟಿಯಾಗುತ್ತಿದೆ? ಈ ಅಂತಾರಾಷ್ಟ್ರೀಯ ಪಟ್ಟಿಯಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ?, ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿರುವ ರಾಷ್ಟ್ರ ಯಾವುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ಬಾಹ್ಯಾಕಾಶ ಮಾಲಿನ್ಯದಲ್ಲಿ ರಷ್ಯಾಗೆ ಮೊದಲ ಸ್ಥಾನ

ಬಾಹ್ಯಾಕಾಶ ಮಾಲಿನ್ಯದಲ್ಲಿ ರಷ್ಯಾಗೆ ಮೊದಲ ಸ್ಥಾನ

ಬಾಹ್ಯಾಕಾಶದ ಅಂಗಳದಲ್ಲಿ ಅತಿಹೆಚ್ಚು ಅವಶೇಷಗಳೊಂದಿಗೆ ಮಾಲಿನ್ಯವನ್ನು ಸೃಷ್ಟಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. 7,000 ರಾಕೆಟ್ ಬಾಡಿ ಸೇರಿದಂತೆ ಇತರೆ ಅವಶೇಷಗಳೊಂದಿಗೆ ರಷ್ಯಾ ಮೊದಲ ಸ್ಥಾನದಲ್ಲಿದೆ. ಫೆಬ್ರವರಿ 4, 2022 ರಂತೆ NASAದ ಆರ್ಬಿಟಲ್ ಡೆಬ್ರಿಸ್ ಕ್ವಾರ್ಟರ್ಲಿ ನ್ಯೂಸ್‌ನಿಂದ ಡೇಟಾವನ್ನು ಉಲ್ಲೇಖಿಸಿ ಸ್ಟ್ಯಾಟಿಸ್ಟಾ ಈ ವರದಿ ಮಾಡಿದೆ.

 ಯುಎಸ್ ಮತ್ತು ಚೀನಾಗೆ ಎರಡು ಹಾಗೂ ಮೂರನೇ ಸ್ಥಾನ

ಯುಎಸ್ ಮತ್ತು ಚೀನಾಗೆ ಎರಡು ಹಾಗೂ ಮೂರನೇ ಸ್ಥಾನ

ರಷ್ಯಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರೆ, ಎರಡನೇ ಸ್ಥಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಕಾಣಿಸಿಕೊಂಡಿದೆ. ಯುಎಸ್ ನಿಂದಾಗಿ ಬಾಹ್ಯಾಕಾಶದಲ್ಲಿ 5216 ಅವಶೇಷಗಳು ಸೃಷ್ಟಿಯಾಗಿದೆ. ಅದೇ ರೀತಿ ಚೀನಾ ತನ್ನ 3845 ಅವಶೇಷಗಳ ಮೂಲಕ ಬಾಹ್ಯಾಕಾಶದಲ್ಲಿ ಮಾಲಿನ್ಯವನ್ನು ಸೃಷ್ಟಿಸಿದೆ. ಆದ್ದರಿಂದ ಅತಿಹೆಚ್ಚು ಮಾಲಿನ್ಯವನ್ನು ಸೃಷ್ಟಿ ಮಾಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಭಾರತಕ್ಕೆ ಜಾಗತಿಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಭಾರತಕ್ಕೆ ಜಾಗತಿಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಬಾಹ್ಯಾಕಾಶದಲ್ಲಿ ಮಾಲಿನ್ಯವನ್ನು ಸೃಷ್ಟಿ ಮಾಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಜಪಾನ್ 520 ಅವಶೇಷಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, 117 ಅವಶೇಷಗಳೊಂದಿಗೆ ಫ್ರಾನ್ಸ್ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಭಾರತವು ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, 114 ಅವಶೇಷಗಳನ್ನು ಸೃಷ್ಟಿಸಿದೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಯುರೋಪಿಯನ್ ರಾಷ್ಟ್ರಗಳು ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, 60 ಅವಶೇಷಗಳನ್ನು ಸೃಷ್ಟಿ ಮಾಡುತ್ತವೆ ಎಂಬುದು ಅಂಕಿ-ಅಂಶಗಳಿಂದ ಗೊತ್ತಾಗಿದೆ. ಅದೇ ರೀತಿಯಲ್ಲಿ ಯುನೈಟೆಡ್ ಕಿಂಗ್ ಡಮ್ ಎಂಟನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಕೇವಲ ಒಂದು ಅವಶೇಷವನ್ನು ಸೃಷ್ಟಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಬಾಹ್ಯಾಕಾಶದಲ್ಲಿ ಸೃಷ್ಟಿ ಆಗುತ್ತಿರುವುದು ಹೇಗೆ ಅವಶೇಷ?

ಬಾಹ್ಯಾಕಾಶದಲ್ಲಿ ಸೃಷ್ಟಿ ಆಗುತ್ತಿರುವುದು ಹೇಗೆ ಅವಶೇಷ?

ದೇಶಗಳು ತಮ್ಮ ಸ್ವಂತ ಉಪಗ್ರಹಗಳನ್ನು ಸ್ಫೋಟಿಸುವ ಅಭ್ಯಾಸಕ್ಕಾಗಿ ಕ್ಷಿಪಣಿಗಳನ್ನು ಬಳಸುವ ಮೂಲಕ ಹಾನಿಕಾರಕ ಅವಶೇಷಗಳನ್ನು ಸೃಷ್ಟಿಸುತ್ತಿವೆ. ಬಾಹ್ಯಾಕಾಶ ಪ್ರಪಂಚದಲ್ಲಿ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ನಡೆಸುವ ಪ್ರಯೋಗಗಳಿಂದ ಅವಶೇಷಗಳ ಸೃಷ್ಟಿ ಆಗುತ್ತಿದೆ. ಅದೇ ರೀತಿಯಲ್ಲಿ ಉಪಗ್ರಹ ವಿರೋಧಿ (ASAT) ಸಾಮರ್ಥ್ಯಗಳನ್ನು ಪರೀಕ್ಷಿಸಲು ಈ ರೀತಿ ಮಾಡಲಾಗುತ್ತದೆ. ಬಾಹ್ಯಾಕಾಶ ಶಿಲಾಖಂಡರಾಶಿಗಳನ್ನು ಎದುರಿಸಲು ನಾಸಾದ ಬಂಪರ್ ಬಳಕೆಯಲ್ಲಿರುವ ಸಾಧನಗಳಲ್ಲಿ ಒಂದಾಗಿದೆ. ಬಾಹ್ಯಾಕಾಶ ನೌಕೆಗಳು ತನ್ನ ಕಾರ್ಯಾಚರಣೆಯ ಜೀವಿತಾವಧಿಯಲ್ಲಿ ಅವಶೇಷಗಳಿಂದ ಹಾನಿಗೊಳಗಾಗುವ ಸಾಧ್ಯತೆ ಅನ್ನು ನಿರ್ಧರಿಸಲು ಇದರಿಂದ ಸಹಾಯವಾಗುತ್ತದೆ.

English summary
Which countries are most polluting space; India also taken place in international list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X