ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತಗುಲಿರುವವರ ಮನಸ್ಥಿತಿ ಹೇಗಿರುತ್ತೆ, ಅವರನ್ನು ಹೇಗೆ ಕಾಣಬೇಕು?

|
Google Oneindia Kannada News

ಬೆಂಗಳೂರು, ಮಾರ್ಚ್ 23: ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿದ್ದು, ಸಾವಿರಾರು ಮಂದಿಯನ್ನು ಬಲಿ ಪಡೆದುಕೊಂಡಿದೆ.

Recommended Video

Kannadiga Deeksha talks about Corona from Dubai | Dubai Deeksha | Oneindia kannada

ಆದರೆ ಸೋಂಕು ತಗುಲಿರುವವರನ್ನು ಹೇಗೆ ಕಾಣಬೇಕು ಎಂಬುದು ಎಲ್ಲರೂ ತಿಳಿಯಲೇಬೇಕಾದ ಸೂಕ್ಷ್ಮ ವಿಚಾರವಾಗಿದೆ. ಈ ರೋಗ ಮಾರಣಾಂತಿಕವಾಗಿದ್ದರೂ ಕೂಡ ಮೊದಲೇ ರೋಗದ ಲಕ್ಷಣಗಳನ್ನು ಪತ್ತೆ ಹಚ್ಚಲು ಸಾಧ್ಯವಾದರೆ ಅಂತವರನ್ನು ಬದುಕಿಸಿಕೊಳ್ಳಬಹುದಾಗಿದೆ.

ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆ

1 ರಿಂದ 10 ವರ್ಷದೊಳಗಿನ ಅಥವಾ 60 ವರ್ಷ ಮೇಲ್ಪಟ್ಟವರನ್ನು ಹೆಚ್ಚಾಗಿ ಈ ರೋಗ ಬಾಧಿಸುತ್ತದೆ. ರೋಗ ಪೀಡಿತರ ಮನಸ್ಥಿತಿ ತುಂಬಾ ಸೂಕ್ಮ್ವಾಗಿದ್ದು ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು.

ಈಗಾಗಲೇ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 390ಕ್ಕಿಂತ ಹೆಚ್ಚಾಗಿದೆ. ಎಂಟು ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ನಿತ್ಯ 600ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪುತ್ತಿದ್ದಾರೆ.

ಯಾವುದೇ ಜನಾಂಗ ಅಥವಾ ರಾಷ್ಟ್ರೀಯತೆಗೆ ಅವರನ್ನು ಲಗತ್ತಿಸಬೇಡಿ

ಯಾವುದೇ ಜನಾಂಗ ಅಥವಾ ರಾಷ್ಟ್ರೀಯತೆಗೆ ಅವರನ್ನು ಲಗತ್ತಿಸಬೇಡಿ

ಕೊವಿಡ್ 19 ಭೌಗೋಳಿಕ ಸ್ಥಳಗಳಲ್ಲಿ ಅನೇಕ ದೇಶಗಳ ಜನರನ್ನು ಬಾಧಿಸಿದೆ ಮತ್ತು ಪರಿಣಾಮವನ್ನು ಬೀರಿದೆ. ಅದನ್ನು ಯಾವುದೇ ಜನಾಂಗ ಅಥವಾ ರಾಷ್ಟ್ರೀಯತೆಗೆ ಲಗತ್ತಿಸಬೇಡಿ . ಬಾಧಿತರಾದವರ ಬಗ್ಗೆ ಅನುಭೂತಿ ಇರಲಿ.

ಕೊರೊನಾ ಹೊಂದಿದವರನ್ನು ರೋಗಪೀಡಿತ ಎನ್ನಬೇಡಿ

ಕೊರೊನಾ ಹೊಂದಿದವರನ್ನು ರೋಗಪೀಡಿತ ಎನ್ನಬೇಡಿ

ಕೊವಿಡ್ ರೋಗ ಹೊಂದಿರುವ ಜನರನ್ನು ಕೊವಿಡ್ ಪ್ರಕರಣಗಳು, ಕೊವಿಡ್ ಕುಟುಂಬಗಳು ಅಥವಾ ರೋಗ ಪೀಡಿತ ಎಂದು ಕರೆಯಬೇಡಿ. ಅವರನ್ನು ಕೊವಿಡ್ 19 ಹೊಂದಿರುವ ಜನರು ಅಥವಾ ಕೊವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ಜನರು, ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಜನರು ಎಂದು ಕರೆಯಬೇಕು.

ಭಾರತದ ಯಾವ ರಾಜ್ಯದಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರು?ಭಾರತದ ಯಾವ ರಾಜ್ಯದಲ್ಲಿ ಎಷ್ಟು ಮಂದಿ ಕೊರೊನಾ ಸೋಂಕಿತರು?

ನಿಮಗೆ ಆತಂಕವನ್ನುಂಟುಮಾಡುವ ಸುದ್ದಿ ಓದಬೇಡಿ

ನಿಮಗೆ ಆತಂಕವನ್ನುಂಟುಮಾಡುವ ಸುದ್ದಿ ಓದಬೇಡಿ

ನಿಮಗೆ ಆತಂಕ ಅಥವಾ ತೊಂದರೆ ಉಂಟಾಗುವ ಸುದ್ದಿಗಳನ್ನು ನೋಡುವುದು, ಓದುವುದು ಅಥವಾ ಕೇಳುವುದು ತಪ್ಪಿಸಿ, ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯವಾಗಿ ಮಾಹಿತಿಯನ್ನು ಪಡೆಯಿರಿ. ಒಂದು ಅಥವಾ ಎರಡು ಬಾರಿ ಹಗಲಿನಲ್ಲಿ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಟಿವಿಯನ್ನು ನೋಡಿ.

ನಿಮ್ಮನ್ನು ರಕ್ಷಿಸಿಕೊಳ್ಳಿ, ಇತರರಿಗೂ ಬೆಂಬಲ ನೀಡಿ

ನಿಮ್ಮನ್ನು ರಕ್ಷಿಸಿಕೊಳ್ಳಿ, ಇತರರಿಗೂ ಬೆಂಬಲ ನೀಡಿ

ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ಇತರರಿಗೆ ಬೆಂಬಲ ನೀಡಿ, ಇದರಿಂದ ನಿಮಗೂ ಹಾಗೂ ನಿಮ್ಮಿಂದ ಸಹಾಯ ಪಡೆಯುವವರಿಗೂ ಪ್ರಯೋಜನವನ್ನು ನೀಡುತ್ತದೆ.

ಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲಕೊರೊನಾ ಲಕ್ಷಣಗಳು ಕೇವಲ 2 ವಾರಗಳಲ್ಲಿ ಕಾಣಿಸಿಕೊಳ್ಳಬೇಕೆಂದೇನಿಲ್ಲ

ವೈದ್ಯರು, ನರ್ಸ್ ಕಾರ್ಯವನ್ನು ಶ್ಲಾಘಿಸಿ

ವೈದ್ಯರು, ನರ್ಸ್ ಕಾರ್ಯವನ್ನು ಶ್ಲಾಘಿಸಿ

ಕೊವಿಡ್ 19 ಪೀಡಿತ ಜನರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್ ಹಾಗೂ ವೈದ್ಯರನ್ನು ಗೌರವಿಸಿ , ಆರೋಗ್ಯ ಕಾರ್ಯಕರ್ತರ ಕಾರ್ಯವನ್ನು ಶ್ಲಾಘಿಸಿ , ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ಜೀವವನ್ನು ಉಳಿಸಲು ಶ್ರಮಿಸಿರುವವರನ್ನು ಗೌರವಿಸಿ.

English summary
Corona infected persons Are So Sensitive So Please Take care Of Them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X