ವಿಶೇಷ ಲೇಖನ: ನೆಮ್ಮದಿಯಾಗಿದ್ದ ಟರ್ಕಿಯಲ್ಲಿ ಗನ್, ಬಾಂಬ್ ಸದ್ದು

By: ಡಾ.ಪ್ರೀತಮ್
Subscribe to Oneindia Kannada

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಟರ್ಕಿಯ ನೈಟ್ ಕ್ಲಬ್ ವೊಂದರಲ್ಲಿ ಭಯೋತ್ಪಾದಕರ ದಾಳಿಯಾಗಿದೆ. ಮೂವತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ ಹೀಗೆಲ್ಲ ಅಗಬಹುದು ಎಂಬುದನ್ನು ಈ ಹಿಂದೆ ಕನಸು-ಮನಸಿನಲ್ಲೂ ಅಂದುಕೊಳ್ಳಲು ಸಾಧ್ಯವಿರಲಿಲ್ಲ. ಅಂದ ಹಾಗೆ ನನ್ನ ಹೆಸರು ಪ್ರೀತಂ. ತುಮಕೂರಿನಲ್ಲಿ ನನ್ನ ತಂದೆ-ತಾಯಿ ಇದ್ದಾರೆ. ಸದ್ಯಕ್ಕೆ ಆಂಧ್ರ ಅನಂತಪುರದ ಆಸ್ಪತ್ರೆಯೊಂದರಲ್ಲಿ ನನ್ನ ಕೆಲಸ.

ರೇಡಿಯಾಲಜಿ ಫೆಲೋಷಿಪ್ ಗಾಗಿ ಟರ್ಕಿಯಲ್ಲಿ ಹತ್ತು ತಿಂಗಳ ಕಾಲ ಇದ್ದೆ. ಆ ದೇಶದ ಮೇಲೆ ಯುರೋಪ್ ಸಂಸ್ಕೃತಿ ಪ್ರಭಾವ ಗಾಢವಾಗಿದೆ. ಇರಾನ್, ಇರಾಕ್, ಅರ್ಮೇನಿಯಾ ಹೀಗೆ ಅರೇಳು ದೇಶಗಳ ಜತೆಗೆ ಟರ್ಕಿ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ. ಅಲ್ಲಿನ ಶಿಕ್ಷಣ ವ್ಯವಸ್ಥೆ, ಪ್ರವಾಸೋದ್ಯಮ, ಸಾರಿಗೆ ವ್ಯವಸ್ಥೆ..ವಾಹ್, ಎಲ್ಲವೂ ತುಂಬ ಚಂದ.[ಇಸ್ತಾಂಬುಲ್ ಉಗ್ರರ ದಾಳಿಯಲ್ಲಿ ಇಬ್ಬರು ಭಾರತೀಯರ ಸಾವು]

ನಾನು ಅಲ್ಲಿದ್ದ ಅಷ್ಟೂ ಕಾಲ ಆ ದೇಶದಲ್ಲಿನ ಸ್ವಾತಂತ್ರ್ಯಕ್ಕೆ, ಶಾಂತಿಪ್ರಿಯತೆಗೆ ಮನಸ್ಸು ಕೊಟ್ಟುಬಿಟ್ಟಿದ್ದೆ. ತುಂಬ ಸಂಪ್ರದಾಯದ ಭಾರವಿಲ್ಲದ, ದೊಂಬಿ, ಗಲಾಟೆ, ಕೊಲೆಗಳೆಂಬ ಮಾತು ಕೇಳದ ತುಂಬ ಸುಂದರ ದೇಶವಾಗಿತ್ತು ಟರ್ಕಿ. ಅದಕ್ಕೂ ಹಿಂದೆ ಇದ್ದ ಸಣ್ಣ-ಪುಟ್ಟ ಅಸಮಾಧಾನಗಳನ್ನು ಗುಂಪೊಂದು ಹೊರಹಾಕುತ್ತಿತ್ತು. ಅದರ ಜತೆಗೆ ಮಾತುಕತೆ ನಡೆಸಿ, ಅದನ್ನು ಕೂಡ ಟರ್ಕಿ ಸರಕಾರ ನಿವಾರಿಸಿಕೊಂಡಿತ್ತು.[ಇಸ್ತಾನ್ಬುಲ್ ನೈಟ್ ಕ್ಲಬ್ ಮೇಲೆ ಉಗ್ರರ ದಾಳಿ, 35 ಜನರ ಹತ್ಯೆ]

ನಲವತ್ತು ಲಕ್ಷ ವಲಸಿಗರು

ನಲವತ್ತು ಲಕ್ಷ ವಲಸಿಗರು

ಆ ದೇಶದ ಇಂದಿನ ಮೂಲ ಸಮಸ್ಯೆಗೆ ಕಾರಣ ವಲಸಿಗರು. ಸಿರಿಯಾದಿಂದ ಹೊರಟ ವಲಸಿಗರು ಗ್ರೀಸ್ ತಲುಪಬೇಕಿತ್ತು. ಆದರೆ ಟರ್ಕಿ ದಾಟುವಷ್ಟರಲ್ಲಿ ಆ ದೇಶದ ಗಡಿಯನ್ನು ಮುಚ್ಚಿದ್ದರಿಂದ 40 ಲಕ್ಷದಷ್ಟು ವಲಸಿಗರು ಆ ದೇಶದಲ್ಲೇ ಉಳಿದುಹೋದರು. ಇನ್ನು ಕುರ್ದಿಷ್ ಗಳ ಬಗ್ಗೆ ಹೇಳಬೇಕು. ಟರ್ಕಿಯ ಉಸ್ತುವಾರಿಯನ್ನು ಕೆಲ ಕಾಲ ಬ್ರಿಟಿಷರು ನೋಡಿಕೊಂಡಿದ್ದಾರೆ.

ಕುರ್ದಿಶ್ ಜನಾಂಗದವರ ತಲೆ ನೋವು

ಕುರ್ದಿಶ್ ಜನಾಂಗದವರ ತಲೆ ನೋವು

ಜೊತೆಗೆ ಸುತ್ತ ಮುತ್ತಲ ದೇಶದಲ್ಲಿ ಹತೋಟಿ ಸಾಧಿಸಿದ್ದ ಬ್ರಿಟಿಷರು, ತುಂಬ ದೊಡ್ಡ ಸಂಖ್ಯೆಯಲ್ಲಿರುವ ಕುರ್ದಿಷ್ ಜನಾಂಗದವರನ್ನು ಇರಾಕ್, ಇರಾನ್, ಟರ್ಕಿ ಇತರ ದೇಶಗಳಲ್ಲಿ ಹಂಚಿಹೋಗುವಂತೆ ಮಾಡಿದರು. ತಮ್ಮದೇ ಆದ ಒಂದು ದೇಶ ಎಂಬುದು ಇಲ್ಲದ ಅವರೀಗ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

ಮುಕ್ತವಾಗಿದ್ದೇ ಸಮಸ್ಯೆಯಾಯಿತೆ?

ಮುಕ್ತವಾಗಿದ್ದೇ ಸಮಸ್ಯೆಯಾಯಿತೆ?

ಟರ್ಕಿಯ ಜನ ಮೂಲತಃ ವ್ಯಾಪಾರಿಗಳು. ನೆಮ್ಮದಿಯಾದ ಜೀವನ ನಡೆಸುವಂಥವರು. ಆದರೆ ಆ ದೇಶದ ಗಡಿಯು ಅರ್ಮೇನಿಯಾ ಒಂದನ್ನು ಹೊರತುಪಡಿಸಿ ಉಳಿದೆಡೆ ತುಂಬ ಮುಕ್ತವಾಗಿದೆ. ಇಂದಿನ ಉದ್ವಿಗ್ನ ಸ್ಥಿತಿಗೆ ಕಾರಣವಾಗಿರುವುದು ಅಂಥ ಮುಕ್ತ ಮನಸ್ಥಿತಿಯೆ. ಉಳಿದ ರಾಷ್ಟ್ರಗಳಂತೆ ಇಲ್ಲಿ ತೀರಾ ಕಠಿಣ ನಿಯಮಗಳಿಲ್ಲ. ಶಿಕ್ಷಣ, ಅಭಿಪ್ರಾಯ ಸ್ವಾತಂತ್ರ್ಯ, ಶ್ರೀಮಂತಿಕೆ ಈ ಎಲ್ಲ ಕಾರಣಕ್ಕೆ ಟರ್ಕಿಯನ್ನು ಬಹಳ ಇಷ್ಟಪಡುತ್ತಾರೆ ಜನ.

ಪ್ರವಾಸೋದ್ಯಮಕ್ಕೆ ಹೆಸರುವಾಸಿ

ಪ್ರವಾಸೋದ್ಯಮಕ್ಕೆ ಹೆಸರುವಾಸಿ

ಪ್ರಾಯಶಃ ಒಂದೆರಡು ವರ್ಷಗಳ ಹಿಂದೆ ಇರಬೇಕು. ಆ ವರ್ಷದಲ್ಲಿ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಸ್ಥಳಗಳಲ್ಲಿ ಟರ್ಕಿಗೆ ಏಳನೆಯದೋ ಎಂಟನೆಯದೋ ಸ್ಥಾನವಿತ್ತು. ಅದರೆ ಇಂದಿಗೆ ಐಎಸ್ ಐಎಸ್ ನವರ ಗುರಿಗೆ ಸುಲಭಕ್ಕೆ ತುತ್ತಾಗಿದೆ ಟರ್ಕಿ. ಯಾವುದೇ ದೇಶ ಭಯೋತ್ಪಾದನೆ ದಾಳಿಗೆ ತುತ್ತಾದರೆ ಅಂಥ ಒಂದು ಘಾತಕ್ಕೆ ಅದು ನಿಲ್ಲುವುದಿಲ್ಲ.

ಅಟ ತುರ್ಕ್ ಉದ್ದೇಶಕ್ಕೇ ಕಲ್ಲು

ಅಟ ತುರ್ಕ್ ಉದ್ದೇಶಕ್ಕೇ ಕಲ್ಲು

ಆ ದೇಶದಲ್ಲಿ ಒಂದು ಜಾಲ ಬೆಳೆಯುತ್ತದೆ. ಪದೇ ಪದೇ ದಾಳಿಗಳಾಗುತ್ತವೆ. ಅಮಾಯಕರ ನೆತ್ತರು ಹರಿಯುತ್ತದೆ. ಟರ್ಕಿಯನ್ನು ತುಂಬ ಆಧುನಿಕವಾಗಿ ಕಟ್ಟಿದ ಅಟ ತುರ್ಕ್ ಉದ್ದೇಶವನ್ನು ಸೋಲಿಸುವ ರೀತಿಯಲ್ಲಿ ಉಗ್ರಗಾಮಿಗಳ ದಾಳಿಗಳಾಗುತ್ತಿವೆ. ಅಟ ತುರ್ಕ್ ಆಧುನಿಕ ಟರ್ಕಿಯ ಮೊದಲ ಅಧ್ಯಕ್ಷರು ಅವರ. ಮಹಿಳೆಯರಿಗೆ ಸಮಾನ ಹಕ್ಕು ನೀಡಿದ ಆಧುನಿಕ ಸಿದ್ಧಾಂತವಾದಿ. 1920ರ ದಶಕದಲ್ಲೇ ಮಹಿಳೆಯರಿಗೆ ರಾಜಕೀಯವಾಗಿಯೂ ಸಮಾನ ಹಕ್ಕು ನೀಡಿದವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
What happend to Turkey. This country was peaceful and influenced by European culture. But now target for terrorists. Dr. preetam who was there for his fellowship between 2012-2013, analyses reasons behind current situation in Turkey.
Please Wait while comments are loading...