ಬಿಜೆಪಿಯ ಮೋದಿ ಪ್ರಧಾನಿಯಾದರೆ ಸಾಯಿಸಿಬಿಡ್ತೇವೆ

we-will-kill-bjp-pm-candidate-modi-if-he-comes-to-power-pak-jem
ನವದೆಹಲಿ, ಡಿ. 20: ಇತ್ತ ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿ ಕುರ್ಚಿಗೆ ಹತ್ತಿರವಾಗುತ್ತಿದ್ದರೆ ಅತ್ತ ಪಾಕಿಸ್ತಾನದಲ್ಲಿ ಠಿಕಾಣಿ ಹೂಡಿರುವ ಭಯೋತ್ಪಾದಕರು 'ಮೋದಿ ಪ್ರಧಾನಿ ಗದ್ದುಗೆಯೇರುತ್ತಿದ್ದಂತೆ ಅವರನ್ನು ಸಾಯ್ಸಿಬಿಡ್ತೀವಿ. ಅವರನ್ನು ಉಳಿವುಗೊಡುವುದಿಲ್ಲ' ಎಂದು ಬೆದರಿಕೆಯೊಡ್ಡಿದ್ದಾರೆ.

ಪಾಕಿಸ್ತಾನದ ಪ್ರಜೆ ಮಸೂದ್ ಅಜರ್ ಎಂಬ ಕಿಡಿಗೇಡಿ ಈ ಬೆದರಿಕೆಯೊಡ್ಡಿದ್ದಾನೆ. ಪಾಕಿಸ್ತಾನದಲ್ಲಿ ಜೈಷ್ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಸಂಸ್ಥಾಪಕನಾಗಿರುವ ಮೌಲಾನಾ ಮಸೂದ್ ಅಜರ್ ಭಾರತದ most wanted terrorists ಲಿಸ್ಟಿನಲ್ಲಿ ಅಗ್ರ ಸ್ಥಾನ ಪಡೆದಿದ್ದಾನೆ.

ಅಂದಹಾಗೆ ಮೋದಿ ಅವರು ಇಂದು ಶುಕ್ರವಾರ ವಾರಾಣಾಸಿಯಲ್ಲಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ನಂತರದ ದಿನಗಳಲ್ಲಿ ಬರೇಲಿ, ಮೀರತ್, ಗೋರಖ್ ಪುರ ಮತ್ತು ಲಖ್ನೋಗಳಲ್ಲಿ ಭಾಷಣ ಮಾಡಲಿದ್ದಾರೆ. (ಅಮೆರಿಕ: ಅಲ್ ಖೈದಾಗೆ ನೆರವು ನೀಡಿದವನಿಗೆ 18ವರ್ಷ ಜೈಲು)

ಗಮನಾರ್ಹವೆಂದರೆ ಬಿಜೆಪಿಯ ನರೇಂದ್ರ ಮೋದಿ ಅವರಿಗೆ ಉಗ್ರರ ಬೆದರಿಕೆಯಿರುವುದು ಹೊಸದೇನೂ ಅಲ್ಲ. ಆದರೆ ಪ್ರಸ್ತುತ, ಪಾಕಿಸ್ತಾನದಲ್ಲಿರುವ ಜೈಷ್ ಎ ಮೊಹಮ್ಮದ್‌ ಮತ್ತು ಲಷ್ಕರೆ ತಯ್ಯಬಾ ಉಗ್ರ ಸಂಘಟನೆಗಳು ಈ ಬಾರಿ ವರಸೆ ಬದಲಿಸಿದ್ದು, ಮೋದಿ ಪ್ರಧಾನ ಮಂತ್ರಿಯಾದರೆ ಅವರನ್ನು ಸಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.

Jaish-e-Mohammad ಉಗ್ರ ಸಂಘಟನೆಯ ಅಂತರ್ಜಾಲ ವಾರಪತ್ರಿಕೆ ಅಲ್‌-ಖಲಂ (al-Qalam)ನಲ್ಲಿ ಜೈಷೆ ಸ್ಥಾಪಕ Maulana Masood Azhar ಈ ಎಚ್ಚರಿಕೆ ನೀಡಿದ್ದಾನೆ. ಜೈಷೆ ಜತೆಗೆ ಲಷ್ಕರೆ ಮತ್ತು ಅದರ ಮುಂಚೂಣಿ ಸಂಘಟನೆ ಜಮಾತ್‌-ಉದ್‌- ದಾವಾ Jamaat-ud-Dawah (JuD) ಸ್ಥಾಪಕ ಹಫೀಜ್‌ ಸಯೀದ್‌ ಕೂಡ ಮೋದಿಗೆ ಇದೇ ಮಾದರಿಯ ಬೆದರಿಕೆಯೊಡ್ಡಿದ್ದಾನೆ.

ಗುಜರಾತ್‌ ಗಲಭೆಗೆ ಮೋದಿ ಕುಮ್ಮಕ್ಕು ನೀಡಿದ್ದಾರೆಂದು ತಿಳಿದಿದ್ದರೂ ಬಿಜೆಪಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿರುವುದನ್ನು ಮುಸ್ಲಿಮರು ಕ್ಷಮಿಸುವುದಿಲ್ಲ. ಮೋದಿ 2014ರ ಚುನಾವಣೆಯ ಬಳಿಕ ಭಾರತದ ಪ್ರಧಾನಿಯಾದರೆ ನಾವು ಖಂಡಿತ ಅವರನ್ನು ಸಾಯಿಸುತ್ತೇವೆ ಎಂದು ಲೇಖನದಲ್ಲಿ ನೇರವಾಗಿ ಬೆದರಿಕೆಯೊಡ್ಡಲಾಗಿದೆ.

ಅಕ್ಟೋಬರ್‌ 27ರಂದು ಪಾಟ್ನಾದಲ್ಲಿ ನಡೆದ ಹೂಂಕಾರ್‌ ಸಮಾವೇಶದಲ್ಲಿ ಮಾನವ ಬಾಂಬ್‌ ಸ್ಫೋಟಿಸಿ ಮೋದಿಯನ್ನು ಸಾಯಿಸಲು ಇಂಡಿಯನ್‌ ಮುಜಾಹಿದೀನ್‌ ವಿಫ‌ಲ ಪ್ರಯತ್ನ ನಡೆಸಿತ್ತು. ಈ ಸರಣಿ ಸ್ಫೋಟದ ಬಳಿಕ ಮೋದಿಗೆ ಭದ್ರತಾ ವ್ಯವಸ್ಥೆಯನ್ನು (Z+) ಹೆಚ್ಚಿಸಲಾಗಿದೆ. ಪಾಕ್ ಉಗ್ರರಲ್ಲದೆ ಥಾಯ್ಲೆಂಡ್‌ ಉಗ್ರಗಾಮಿ ಸಂಘಟನೆಗಳು ಕೂಡ ಮೋದಿ ವಿರುದ್ಧ ಕತ್ತಿ ಮಸೆಯುತ್ತಿರುವ ಮಾಹಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+