ಕುಲಭೂಷಣ್ ಜಾಧವ್ ವಿರುದ್ಧ ಸಾಕ್ಷ್ಯಾಧಾರ ನೀಡುತ್ತೇವೆ: ಪಾಕ್

ನಮ್ಮಲ್ಲಿ ಕುಲಭೂಷಣ್ ಜಾಧವ್ ಕುರಿತು ಮಹತ್ವದ ಮಾಹಿತಿಗಳಿವೆ. ಅವನ್ನೆಲ್ಲ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುತ್ತೇವೆ ಎಂದು ಪಾಕಿಸ್ತಾನ ಹೇಳಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಪಾಕ್ ವರ್ತನೆ!

ಇಸ್ಲಾಮಾಬಾದ್(ಪಾಕಿಸ್ತಾನ), ಮೇ 29: ಕುಲಭೂಷಣ್ ಜಾಧವ್ ಭಾರತದ ಗೂಢಾಚಾರಿ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಈ ಕುರಿತು ನಾವು ಸಾಕ್ಷ್ಯಗಳನ್ನು ಒದಗಿಸುತ್ತೇವೆ ಎಂದು ಪಾಕಿಸ್ತಾನದ ಅಟಾರ್ನಿ ಜನರಲ್ ಅಸ್ತರ್ ಆಸಫ್ ಹೇಳಿದ್ದಾರೆ.

ಕುಲಭೂಷಣ್ ಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ನೀಡಿದ್ದ ಗಲ್ಲುಶಿಕ್ಷೆಯ ತೀರ್ಪಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತಡೆಯಿಂದಾಗಿ ತೀವ್ರ ಮುಖಭಂಗ ಅನುಭವಿಸಿದ್ದ ಪಾಕಿಸ್ಥಾನ, ಇದೀಗ ತನ್ನ ಬಳಿ ಕುಲಭೂಷಣ್ ಜಾಧವ್ ಭಾರತೀಯ ಗೂಢಾಚಾರಿ ಎಂಬುದಕ್ಕೆ ತನ್ನ ಬಳಿ ಸಾಕ್ಷಿ ಇದೆ ಎಂದು ಹೊಸ ಅಸ್ತ್ರಪ್ರಯೋಗಕ್ಕೆ ಮುಂದಾಗಿದೆ.[ಸಾವು ಗೆದ್ದ ಕುಲಭೂಷಣ್ ಜಾಧವ್ ಗೆ ಟ್ವಿಟ್ಟಿಗರ ಅಭಿನಂದನೆ]

We have some important evidences against Kulbhushan Jadhav: Pakistan

ನಮ್ಮಲ್ಲಿ ಕುಲಭೂಷಣ್ ಜಾಧವ್ ಕುರಿತು ಮಹತ್ವದ ಮಾಹಿತಿಗಳಿವೆ. ಅವನ್ನೆಲ್ಲ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಸ್ತುತಪಡಿಸುತ್ತೇವೆ ಎಂದು ಪಾಕಿಸ್ತಾನ ಹೇಳಿದೆ. ಒಟ್ಟಿನಲ್ಲಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಬುದ್ಧಿಯನ್ನು ಮಾತ್ರ ಪಾಕಿಸ್ತಾನ ಎಂದಿಗೂ ಬಿಡುವುದಿಲ್ಲ ಎಂಬುದು ಇದೀಗ ದೃಢವಾದಂತಾಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+