ರಷ್ಯಾದ ಅಧ್ಯಕ್ಷನನ್ನು ಹಿಡಿಯಿರಿ ಬಹುಮಾನ ಪಡೆಯಿರಿ ಎಂದ ಉದ್ಯಮಿ

ಮಾಸ್ಕೋ, ಮಾರ್ಚ್ 3: ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರುತ್ತಿದೆ, ರಷ್ಯಾದ ಅಧ್ಯಕ್ಷನನ್ನು ಹಿಡಿದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಉದ್ಯಮಿ ಘೋಷಿಸಿದ್ದಾರೆ.
ವ್ಲಾಡಿಮಿರ್ ಪುಟಿನ್ ಅವರನ್ನು ಜೀವಂತ ಅಥವಾ ಮೃತ ಸ್ಥಿತಿಯಲ್ಲಿ ಹಿಡಿದುಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ರಷ್ಯಾದ ಉದ್ಯಮಿಯೊಬ್ಬರು ಘೋಷಿಸಿದ್ದಾರೆ.

ಪುಟಿನ್ ಅವರನ್ನು ರಷ್ಯಾ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ "ವಾರ್ ಕ್ರಿಮಿನಲ್" ಎಂಬ ಆರೋಪದಲ್ಲಿ ಬಂಧಿಸಿ ಸಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವವರ ಅಧಿಕಾರಿಗಳಿಗೆ $1,000,000 ಬಹುಮಾನ ನೀಡುವುದಾಗಿ ಅಲೆಕ್ಸ್ ಕೊನನಿಖಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಪುಟಿನ್ ರಷ್ಯಾ ಅಧ್ಯಕ್ಷರಲ್ಲ ಅವರು ಅಧಿಕಾರಕ್ಕೆ ಬಂದಿದ್ದೇ ರಷ್ಯಾದಲ್ಲಿನ ಅಪಾರ್ಟ್ ಮೆಂಟ್ ಕಟ್ಟಡಗಳನ್ನು ಉಡಾಯಿಸುವ ವಿಶೇಷ ಕಾರ್ಯಾಚಾರಣೆ ಹಾಗೂ ಮುಕ್ತ ಚುನಾವಣೆಗಳನ್ನು ತೆಗೆದು, ತಮ್ಮ ವಿರೋಧಿಗಳನ್ನು ಹತ್ಯೆ ಮಾಡುವ ಮೂಲಕ. ರಷ್ಯಾದ ಜನಾಂಗದವನಾಗಿ, ಪ್ರಜೆಯಾಗಿ ರಷ್ಯಾವನ್ನು ಡಿನಾಜಿಫಿಕೇಷನ್ (ನಾಜೀಕರಣದಿಂದ ಮುಕ್ತ ಮಾಡುವುದು) ನನ್ನ ನೈತಿಕ ಕರ್ತವ್ಯ ಎಂದು ಭಾವಿಸುತ್ತೇನೆ. ನಾನು ಉಕ್ರೇನ್ ಗೆ ನನ್ನ ಬೆಂಬಲವನ್ನು ಮುಂದುವರೆಸುತ್ತೇನೆ" ಎಂದು ಅಲೆಕ್ಸ್ ಕೊನನಿಖಿನ್ ಹೇಳಿದ್ದಾರೆ.

Wanted Dead Or Alive: Russian Businessman Offers USD 1 Million Bounty For Arrest Of Putin

ರಷ್ಯಾದ ಉದ್ಯಮಿ ಅಲೆಕ್ಸ್ ಕೊನನಿಖಿನ್ ಈ ಬಹುಮಾನ ಘೋಷಿಸಿದ್ದು, ಉಕ್ರೇನ್ ಆಕ್ರಮಣದ ವೇಳೆ ಯುದ್ಧ ಅಪರಾಧಗಳನ್ನು ಎಸಗಿರುವ ಪುಟಿನ್ ನ್ನು ಕಟಕಟೆಗೆ ತಂದು ನಿಲ್ಲಿಸಿ ಎಂದು ಸೇನಾ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಸಾಮೂಹಿಕ ಹತ್ಯೆಗಳನ್ನು ಎಸಗಿರುವ ವ್ಲಾಡಿಮಿರ್ ಪುಟಿನ್ ಜೀವಂತವಾಗಿ ಅಥವಾ ಮೃತ ಸ್ಥಿತಿಯಲ್ಲಾದರೂ ಸರಿ ಬೇಕಾಗಿದ್ದಾರೆ"ಎಂಬ ಅಕ್ಷರಗಳನ್ನು ಬರೆದಿರುವ ಈ ಪೋಸ್ಟ್ ನೊಂದಿಗೆ ಪುಟಿನ್ ಅವರ ಫೋಟೋವನ್ನು ರಷ್ಯಾ ಉದ್ಯಮಿ ಅಲೆಕ್ಸ್ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+