ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಡಾಫೋನ್ ಸಿಬ್ಬಂದಿಗೆ 16 ವಾರದ ಕಡ್ಡಾಯ ಹೆರಿಗೆ ರಜೆ

|
Google Oneindia Kannada News

ಬೆಂಗಳೂರು, ಮಾ. 10: ವೋಡಾಫೋನ್ ಇಂಡಿಯಾ ತನ್ನ ಮಹಿಳಾ ಸಿಬ್ಬಂದಿಗೆ ಮಹಿಳಾ ದಿನಾಚರಣೆ ಬಂಪರ್ ನೀಡಿದೆ. ಹೆರಿಗೆ ನಂತರ 16 ವಾರಗಳ ವೇತನ ಸಹಿತ ರಜೆ ನೀಡಲಿದ್ದೇನೆ ಎಂದು ಘೋಷಿಸಿದೆ.

16 ವಾರಗಳ ವೇತನ ಸಹಿತ ರಜೆ, ಇದಾದ ನಂತರ ಆರು ತಿಂಗಳು ಪ್ರತಿದಿನ ಕೇವಲ ಆರು ಗಂಟೆ ಕೆಲಸ ಮಾಡಲು ಹೇಳಿದೆ. ಮಹಿಳಾ ಸಿಬ್ಬಂದಿಗೆ ಈ ರೀತಿಯ ಕಡ್ಡಾಯ ರಜೆ ನೀಡುತ್ತಿರುವ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ವೋಡಾಫೋನ್ ಪಾತ್ರವಾಗಿದೆ. ಈ ರಜೆ ನೀಡಿಕೆ ಕೆಲಸಕ್ಕೆಂದು ಸುಮಾರು 19 ಬಿಲಿಯನ್ ಡಾಲರ್ ತೆಗೆದಿರಿಸಿದೆ.[ಮೊಬೈಲ್ 'ಪೋರ್ಟ್'(ಎಂಎನ್ಪಿ) ಏನು ಪ್ರಯೋಜನ?]

vodafone

ಅಲ್ಲದೇ ಈ ಬಗ್ಗೆ ಶಾರ್ಟ್ ಫಿಲ್ಮ್ ವೊಂದನ್ನು ಸಹ ತಯಾರಿಸಿ ಯುಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದೆ. ಕೇವಲ ಭಾರತವೊಂದೇ ಅಲ್ಲದೇ 30 ದೇಶಗಳ ಮಹಿಳಾ ಸಿಬ್ಬಂದಿ ಕಡ್ಡಾಯ ರಜೆ ಸೌಲಭ್ಯ ಪಡೆಯಲಿದ್ದಾರೆ. ಆಫ್ರಿಕಾ, ಮಧ್ಯ ಏಷ್ಯಾ, ಯುರೋಪ್ ಮತ್ತು ಯುಎಸ್ ನ ಮಹಿಳಾ ಸಿಬ್ಬಂದಿ ಈ ಸೌಲಭ್ಯಕ್ಕೆ ಭಾಜನರಾಗುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:

ಮಹಿಳೆಯರು ಮಕ್ಕಳನ್ನು ನೋಡಿಕೊಂಡು ಕಚೇರಿಯನ್ನು ನಿರ್ವಹಿಸಬೇಕಾದ ಅನಿವಾರ್ಯ ಎದುರಾಗುತ್ತದೆ. ಇಂಥ ಸಂದರ್ಭದಲ್ಲಿ ಅವರು ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳಬೇಕಾಗುತ್ತದೆ. ಅಲ್ಲದೇ ಪ್ರಪಂಚಕ್ಕೆ ಕಾಲಿರಿಸಿದ ಮುಗುವಿಗೂ ವಿಶೇಷ ಆರೈಕೆ ಬೇಕಾಗುತ್ತದೆ ಈ ಹಿನ್ನೆಲೆಯಲ್ಲಿ ಕಡ್ಡಾಯ ರಜೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವೋಡಾಫೋನ್ ಗ್ರೂಪ್ ಸಿಇಒ ವಿಟ್ಟೊರಿಯೋ ಕೋಲಾವ್ ತಿಳಿಸಿದ್ದಾರೆ.[ಮಹಿಳಾ ದಿನ ವಿಶೇ‍ಷ: ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]

ಈ ಯೋಜನೆ ಜಾರಿಯಿಂದ ಪ್ರತಿಯೊಂದು ದೇಶದ 1000 ಮಹಿಳೆಯರಿಗೆ ಉಪಯೋಗವಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ಶೇ. 21 ರಷ್ಟು ಮಹಿಳಾ ಉದ್ಯೋಗಿಗಳಿದ್ದು ಅವರೆಲ್ಲರ ಹಿತ ಕಾಯುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕೋಲಾವ್ ತಿಳಿಸಿದ್ದಾರೆ.

English summary
The telecommunications company Vodafone Group says it will be setting a global minimum for its maternity leave policy, requiring that, by the end of 2015, all of its 30 operating companies around the world offer at least 16 weeks of paid maternity leave. That in itself was an unusual move, yet the most interesting detail might be a new company policy that kicks in once the leave is over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X