ರಷ್ಯಾಕ್ಕೆ ಬರುವಂತೆ ಕಿಮ್ ಗೆ ಆಹ್ವಾನ ನೀಡಿದ ಪುಟಿನ್

ಮಾಸ್ಕೋ, ಜೂನ್ 15: ಉತ್ತರ ಕೊರಿಯಾದ ಮುಖ್ಯಸ್ಥ ಕಿಮ್ ಜಾಂಗ್ ಉನ್ ರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ದೇಶಕ್ಕೆ ಆಹ್ವಾನಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಕಿಮ್ ಯಶಸ್ವೀ ಭೇಟಿಯ ನಂತರ ಸೆಪ್ಟೆಂಬರ್ ನಲ್ಲಿ ರಾಜಧಾನಿ ಮಾಸ್ಕೋಗೆ ಬರುವಂತೆ ಆಹ್ವಾನ ನೀಡಿದ್ದಾರೆ.

ಪುಟಿನ್ ಉತ್ತರ ಕೊರಿಯಾದ ಅಧಿಕಾರಿ ಕಿಮ್ ಯಾಂಗ್ ನಾಮ್ ರನ್ನು ಭೇಟಿಯಾಗಿದ್ದು ಈ ಸಂದರ್ಭದಲ್ಲಿ ರಷ್ಯಾಕ್ಕೆ ಬರುವಂತೆ ಕಿಮ್ ಜಾಂಗ್ ಉನ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.

ಕೆಲವೇ ದಿನಗಳ ಹಿಂದೆ ಟ್ರಂಪ್ ಮತ್ತು ಕಿಮ್ಮ ನಡುವೆ ಸಿಂಗಾಪುರ ಶೃಂಗಸಭೆ ಯಶಸ್ವಿಯಾಗಿ ನಡೆದಿತ್ತು. ಇದರಿಂದ ಪ್ರಮುಖ ಜಾಗತಿಕ ಭಿಕ್ಕಟ್ಟೊಂದು ಪರಿಹಾರವಾಗಿತ್ತು.

 Vladimir Putin invites Kim Jong Un to Russia

ಸಿಂಗಾಪುರ ಶೃಂಗಸಭೆ ಯಶಸ್ವಿಯಾದಲ್ಲಿ ಶ್ವೇತ ಭವನಕ್ಕೆ ಕಿಮ್ ಅವರಿಗೆ ಆಹ್ವಾನ ನೀಡುವ ಬಗ್ಗೆ ಯೋಚಿಸುವುದಾಗಿ ಟ್ರಂಪ್ ಹೇಳಿದ್ದರು. ಆದರೆ, ಇದೀಗ ಜಗತ್ತಿನ ಶಕ್ತಿಶಾಲಿ ದೇಶದ ಅಧ್ಯಕ್ಷರಿಂದ ಕಿಮ್ ಆಹ್ವಾನ ಗಿಟ್ಟಿಸಿದ್ದಾರೆ.

ಈ ಹಿಂದೆ ಮೇ ನಲ್ಲಿ ರಷ್ಯಾದ ವಿದೇಶಾಂಗ ಸಚಿವರಾದ ಸೆರ್ಗಿಯೆ ಲಾರೋವ್ ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್ ಗೆ ಭೇಟಿ ನೀಡಿದ್ದರು. 2009ರ ನಂತರ ಮೊದಲ ಬಾರಿಗೆ ಉತ್ತರ ಕೊರಿಯಾಗೆ ನೀಡಿದ ಭೇಟಿ ಇದಾಗಿತ್ತು.

ಇದೀಗ ಚಾನಲ್ ನಲ್ಲಿ ಮಾತನಾಡಿರುವ ಪುಟಿನ್, ಕಿಮ್ ಅವರಿಗೆ, ರಷ್ಯಾಗೆ ಬನ್ನಿ. ನಾವು ನಿಮ್ಮನ್ನು ನೋಡಲು ತುಂಬಾ ಖುಷಿ ಪಡುತ್ತೇವೆ," ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+