Get Updates
Get notified of breaking news, exclusive insights, and must-see stories!

ಮೋದಿ ರಷ್ಯಾದ ಅದ್ಭುತ ಸ್ನೇಹಿತ ಎಂದ ಪುಟಿನ್‌ ; ಮೇಕ್‌ ಇನ್‌ ಇಂಡಿಯಾಗೆ ರಷ್ಯಾ ಅಧ್ಯಕ್ಷ ಮೆಚ್ಚುಗೆ!

ಮಾಸ್ಕೋ : ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದು, ರಷ್ಯಾದ ಅದ್ಭುತ ಸ್ನೇಹಿತ ಎಂದು ಕರೆದಿದ್ದಾರೆ. ಅದಲ್ಲದೇ ಭಾರತದ ಮೇಕ್‌ ಇನ್‌ ಇಂಡಿಯಾ ಅಭಿಯಾನಕ್ಕೂ ಕೂಡ ಪುಟಿನ್‌ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಮೋದಿ ಅಮೆರಿಕ ಪ್ರವಾಸ ಅಂತ್ಯವಾದ ಕೆಲವೇ ದಿನಗಳಲ್ಲಿ ಪುಟಿನ್‌ ಮೋದಿಗೆ ಮೆಚ್ಚುಗೆ ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಮಾಸ್ಕೋದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಈ ವೇಳೆ ತಮ್ಮ ರಾಷ್ಟ್ರದ ದೇಶಿಯ ಉತ್ಪನ್ನಗಳು ಮತ್ತು ಬ್ರಾಂಡ್‌ಗಳನ್ನು ಉತ್ತೇಜಿಸಲು ಭಾರತವನ್ನು ಉತ್ತಮ ಉದಾಹರಣೆಯನ್ನಾಗಿ ನೀಡಿದರು. ಮೇಕ್‌ ಇನ್‌ ಇಂಡಿಯಾ ಉಪಕ್ರಮ ಭಾರತದ ಆರ್ಥಿಕತೆ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಕೂಡ ಪುಟಿನ್‌ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು, ಗಮನಾರ್ಹವಾಗಿತ್ತು.

Vladimir Putin Calls PM Modi Great Friend Of Russia Says

ರಷ್ಯಾದ ಅದ್ಭುತ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದಲ್ಲಿರುವ ನಮ್ಮ ಸ್ನೇಹಿತರು ಕೆಲ ವರ್ಷಗಳ ಹಿಂದೆ ಮೇಕ್‌ ಇನ್‌ ಇಂಡಿಯಾ ಎಂಬ ಪರಿಕಲ್ಪನೆಯನ್ನು ಜಗತ್ತಿನ ಮುಂದಿಟ್ಟರು. ಇದು ಭಾರತದ ಆರ್ಥಿಕತೆಯ ಮೇಲೆ ಬಹಳ ಸಕಾರಾತ್ಮಕ ಪರಿಣಾಮವನ್ನು ಬೀರಿತು ಎಂದು ವ್ಲಾಡಿಮಿರ್‌ ಪುಟಿನ್‌ ಹೇಳಿದರು. ಇದೇ ವೇಳೆ ಮೇಕ್ ಇನ್ ಇಂಡಿಯಾದ ಉದಾಹರಣೆ ನೀಡುವ ಮೂಲಕ ಪುಟಿನ್‌, ವಿದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳ ಬದಲು ತನ್ನದೇ ಆಧುನಿಕ ಸರಕುಗಳು, ಸೇವೆಗಳು ಮತ್ತು ತಂತ್ರಜ್ಞಾನವನ್ನು ಬಳಸುವಂತೆ ರಷ್ಯನ್ನರಿಗೆ ಕರೆ ನೀಡಿದರು.

ಇದಾದ ಬಳಿಕ ರಷ್ಯಾ ಕಂಪನಿಗಳ ಮೇಲೆಯೂ ವ್ಲಾಡಿಮರ್‌ ಪುಟಿನ್‌ ಕಿಡಿಕಾರಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ದೇಶವನ್ನು ತೊರೆದ ಹಲವು ರಷ್ಯನ್‌ ಕಂಪನಿಗಳಿಗೆ ತಿವಿದ ಅವರು, ಕೆಲವು ವಿದೇಶಿ ಬ್ರಾಂಡ್‌ಗಳನ್ನು ರಷ್ಯಾದ ಮಾರುಕಟ್ಟೆಯನ್ನು ತೊರೆಯುವುದನ್ನೇ ಪ್ರಚಾರ ಮಾಡಿದರು. ಅದನ್ನೇ ಸಾರ್ವಜನಿಕ ಸಂಪರ್ಕ ಅಭಿಯಾನವನ್ನಾಗಿ ಮಾಡಿದರು. ಆದರೆ, ಈ ಪಿಆರ್‌ ತಂತ್ರಗಳಿಂದ ಅವರಿಗೆ ಏನು ಲಾಭ ಆಯ್ತೋ ಗೊತ್ತಿಲ್ಲ ಎಂದು ಕಿಡಿಕಾರಿದರು.


ಆರ್ಥಿಕ ನಿರ್ಬಂಧದ ವೇಳೆ ರಷ್ಯಾ ಜೊತೆಗೆ ನಿಂತಿದ್ದ ಭಾರತ

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧವನ್ನು ಹೇರಿದ್ದವು. ಆದರೆ, ಭಾರತ ಮಾತ್ರ ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸದೇ ವ್ಯಾಪಾರ ವಹಿವಾಟನ್ನು ಮುಂದುವರಿಸಿತ್ತು. ಹಲವು ಭಾರೀ ವಿಶ್ವಸಂಸ್ಥೆಯಲ್ಲೂ ಕೂಡ ತಟಸ್ಥವಾಗಿದ್ದ ಭಾರತ ಪರೋಕ್ಷವಾಗಿ ರಷ್ಯಾದ ಜೊತೆ ನಿಂತಿತ್ತು.

ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸುವ ಅಥವಾ ಟೀಕಿಸುವ ಕಾರ್ಯಕ್ಕೂ ಭಾರತ ಮುಂದಾಗಿದ್ದಿಲ್ಲ. ರಷ್ಯಾ ಮತ್ತು ಉಕ್ರೇನ್ ದೇಶಗಳು ರಾಜತಾಂತ್ರಿಕ ಹಾಗೂ ಮಾತುಕತೆಯ ಹಾದಿ ಅನುಸರಿಸಬೇಕು. ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸುವ ಎಲ್ಲ ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ನೀಡಲಾಗುವುದು ಎಂದು ಭಾರತ ಹೇಳಿತ್ತು. ಆದರೆ, ಯುದ್ಧವೇ ನಿಲ್ಲದಿದ್ದಾಗ ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿರುದ್ಧ ಭಾರತ ಮತ ಚಲಾಯಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+