ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಸಾವು: ವೈರಲ್ ವಿಡಿಯೋ ನಿಜವೇ?

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೋವಿಡ್-19 ನಿಂದಾಗಿ ಪ್ರತಿ ದಿನ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ.

ಸುಳ್ಳು ಸುದ್ದಿ ಹಬ್ಬಿಸುವವರಿಗೆ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಿದ್ದು, ಕೊರೊನಾ ವೈರಸ್ ನೆಪದಲ್ಲಿ ಹಲವು ಸುಳ್ಳು ಸುದ್ದಿಗಳು ಕೂಡ ವೈರಲ್ ಆಗಿವೆ.

ಕೊರೊನಾ ರಣಕೇಕೆ: ಇಟಲಿಯಲ್ಲಿ ಸಾವಿನ ಸಂಖ್ಯೆ 4,825ಕ್ಕೆ ಏರಿಕೆ!ಕೊರೊನಾ ರಣಕೇಕೆ: ಇಟಲಿಯಲ್ಲಿ ಸಾವಿನ ಸಂಖ್ಯೆ 4,825ಕ್ಕೆ ಏರಿಕೆ!

ಕೋವಿಡ್-19 ತವರು ಚೀನಾಗಿಂತ ಇಟಲಿಯಲ್ಲಿ ಸಾವಿನ ಪ್ರಮಾಣ ಜಾಸ್ತಿಯಾಗಿದೆ. ಇಟಲಿಯಲ್ಲಿ ಇಲ್ಲಿಯವರೆಗೂ 4825 ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಈ ನಡುವೆ ಇಟಲಿಯ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು ಸಾವಿಗೀಡಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದ ಅಸಲಿಯತ್ತು ಇಲ್ಲಿದೆ. ನೋಡಿ...

ವೈರಲ್ ಆದ ವಿಡಿಯೋದಲ್ಲಿ ಏನಿದೆ.?

ವೈರಲ್ ಆದ ವಿಡಿಯೋದಲ್ಲಿ ಏನಿದೆ.?

ಏರ್ ಪೋರ್ಟ್ ಒಂದರಲ್ಲಿ ಪ್ರಯಾಣಿಕರು ಕುಸಿದುಬಿದ್ದು ಸಾವನ್ನಪ್ಪುತ್ತಿರುವ ವಿಡಿಯೋವೊಂದು ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಕೊರೊನಾ ಪೀಡಿತ ಇಟಲಿಯಲ್ಲಿನ ಏರ್ ಪೋರ್ಟ್ ನ ಸದ್ಯದ ಪರಿಸ್ಥಿತಿ ಎಂಬ ಸಂದೇಶ ವಿಡಿಯೋ ಜೊತೆ ಹರಿದಾಡುತ್ತಿದೆ.

ಶುದ್ಧ ಸುಳ್ಳು ಸುದ್ದಿ

ವೈರಲ್ ಆಗುತ್ತಿರುವ ವಿಡಿಯೋ ಇಟಲಿಯದ್ದಲ್ಲ. ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು ಸಾವನ್ನಪ್ಪುತ್ತಿರುವುದು ಶುದ್ಧ ಸುಳ್ಳು ಸುದ್ದಿ. ಅಸಲಿಗೆ ಈ ವಿಡಿಯೋ ಈಗ ಸೆರೆಯಾಗಿರುವುದು ಅಲ್ಲವೇ ಅಲ್ಲ.

ವಿಡಿಯೋದ ಅಸಲಿಯತ್ತೇನು.?

ವಿಡಿಯೋದ ಅಸಲಿಯತ್ತೇನು.?

ನವೆಂಬರ್ 2019 ರಂದು ಸೆನೆಗಲ್ ನ ಡಾಕರ್ ವಿಮಾನ ನಿಲ್ದಾಣದಲ್ಲಿ ಪ್ರಯೋಗಿಸಿದ Mock Drill (ಅಣಕು) ಆಗಿದ್ದು, ಒತ್ತೆಯಾಳುಗಳನ್ನು ರಕ್ಷಿಸುವ ಸನ್ನಿವೇಶವನ್ನು ಅಭ್ಯಾಸ ಮಾಡಲು ಪೊಲೀಸರು ಮತ್ತು ಸಿಬ್ಬಂದಿ ಸದಸ್ಯರು ಅಣಕು ಪ್ರದರ್ಶನ ನಡೆಸಿದ್ದರು. ಇದನ್ನ ಥೀಸೀಸ್ ಇನ್ಫೋ ನವೆಂಬರ್ 2019 ರಲ್ಲಿ ವರದಿ ಮಾಡಿತ್ತು.

ಇಟಲಿಯ ಅಂಕಿ-ಅಂಶ

ಇಟಲಿಯ ಅಂಕಿ-ಅಂಶ

ನಿನ್ನೆ ಒಂದೇ ದಿನ 6557 ಹೊಸ ಸೋಂಕಿತ ಪ್ರಕರಣ ದಾಖಲಾಗಿರುವುದರಿಂದ ಇಟಲಿಯಲ್ಲೀಗ ಒಟ್ಟು ಕೊರೊನಾ ಸೋಂಕು ಪೀಡಿತರ ಸಂಖ್ಯೆ 53,578ಕ್ಕೆ ಏರಿದೆ. ಇಟಲಿಯಲ್ಲಿ ಇಲ್ಲಿಯವರೆಗೂ 4825 ಮಂದಿ ಸಾವನ್ನಪ್ಪಿದ್ದು, 2857 ಮಂದಿಯ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಈವರೆಗೂ 6072 ಮಂದಿ ಇಟಲಿಯಲ್ಲಿ ಗುಣಮುಖರಾಗಿರುವುದು ಸಮಾಧಾನಕರ ಸಂಗತಿ.

English summary
Video showing passengers dying at Italy Airport due to Coronavirus is Fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X