ವೈರಲ್ ವಿಡಿಯೋ: ನವಾಜ್ ಶರೀಫ್ ಗೆ ಬೂಟೇಟಿನ ಸ್ವಾಗತ

Posted By:
Subscribe to Oneindia Kannada
   ನವಾಜ್ ಷರೀಫ್ ಗೆ ಲಾಹೋರ್ ನಲ್ಲಿ ಬೂಟೇಟಿನ ಸ್ವಾಗತ | Oneindia Kannada

   ಲಾಹೋರ್, ಮಾರ್ಚ್ 12: ಲಾಹೋರ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನಿ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದ ದೃಶ್ಯವೊಂದು ಇದೀಗ ವೈರಲ್ ಆಗಿದೆ.

   ಕೆಲವು ಮತಾಂಧರು ಈ ಕೆಲಸ ಮಾಡಿದ್ದಾರೆಂದು ಹೇಳಲಾಗಿದ್ದು, ಈ ಘಟನೆಗೂ ಒಂದು ದಿನ ಮೊದಲು ಪಾಕ್ ವಿದೇಶಾಂಗ ವ್ಯವಹಾರಗಳ ಸಚಿವ ಖ್ವಾಜಾ ಆಸಿಫ್ ಅವರ ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.

   ಸುಪ್ರೀಂ ಸೂಚನೆ: ಪ್ರಧಾನಿ ಪಟ್ಟಕ್ಕೆ ರಾಜಿನಾಮೆ ಸಲ್ಲಿಸಿದ ನವಾಜ್ ಷರೀಫ್

   ನಿನ್ನೆ(ಮಾ.11) ಇಲ್ಲಿನ ಲಾಹೋರ್ ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನವಾಜ್ ಶರೀಫ್ ಅವರ ಮೇಲೆ ವಿದ್ಯಾರ್ಥಿಯೊಬ್ಬ ಶೂ ಎಸೆದಿದ್ದ. ತಕ್ಷಣವೇ ಆತನನ್ನು ಬಂಧಿಸಲಾಯಿತಾದರೂ, ಶರೀಫ್ ಇರಿಸು ಮುರಿಸು ಅನುಭವಿಸಬೇಕಾಯ್ತು.

   ಶೂ ಎಸೆದ ವಿದ್ಯಾರ್ಥಿಯನ್ನು ಅಬ್ದುಲ್ ಘಾಫೂರ್ ಎಂದು ಗುರುತಿಸಲಾಗಿದೆ. ಈ ಘಟನೆಯ ನಂತರ ಕಾರ್ಯಕ್ರಮ ಮುಂದುವರಿಯಿತಾದರೂ ತಮ್ಮ ಮೇಲೆ ಶೂ ಎಸೆದವನ ಕುರಿತು ಶರೀಫ್ ಚಕಾರವೆತ್ತದೆ, ಮಾತು ಮುಗಿಸಿದರು!

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A shoe was hurled at Pakistan prime minister Nawaz Sharif by a religious extremist on March 11th during a function at an Islamic seminary in Lahore.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ