ವಿಚಾರಣೆಗೆ ಹಾಜರಾಗಲಿದ್ದಾರೆ ಮದ್ಯದ ದೊರೆ ವಿಜಯ ಮಲ್ಯ
ವೆಸ್ಟ್ ಮಿನ್ಸ್ಟರ್ (ಲಂಡನ್), ಜೂನ್, 13: ಮದ್ಯದ ದೊರೆ ವಿಜಯ ಮಲ್ಯ ಅವರ ವಿಚಾರಣೆ ಲಂಡನ್ನಿನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇಂದಿನಿಂದ (ಜೂನ್ 13) ಆರಂಭವಾಗಲಿದೆ.
9,000 ಕೋಟಿ ಸಾಲ ತೀರಿಸದೆ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಅವರ ಮೇಲೆ ಭಾರತದಲ್ಲಿ ಹಲವಾರು ಕೇಸುಗಳು ದಾಖಲಾಗಿವೆ. ಭಾರತದ ಮನವಿಯ ಮೇರೆಗೆ ಕಳೆದ ಏಪ್ರಿಲ್ ನಲ್ಲಿ ವಿಜಯ ಮಲ್ಯ ಅವರನ್ನು ಲಂಡನ್ನಿನಲ್ಲಿ ಬಂಧಿಸಲಾಗಿತ್ತು. ಆದರೆ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು.

ಭಾರತೀಯ ತನಿಖಾಧಿಕಾರಿಗಳು ಈಗಾಗಲೇ ಹಲವು ಬಾರಿ ಲಂಡನ್ನಿಗೆ ತೆರಳಿ ವಿಜಯ ಮಲ್ಯ ವಿರುದ್ಧ ಹಲವು ಸಾಕ್ಷ್ಯಗಳನ್ನೂ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ನೀಡಿದ್ದಾರೆ. ಭಾರತದಲ್ಲಿ ಮಲ್ಯ ವಿರುದ್ಧ ಹಲವು ಕೇಸುಗಳಲ್ಲಿ ಜಾಮೀನು ರಹಿತ ವಾರೆಂಟ್ ಸಹ ಹೊರಡಿಸಲಾಗಿದೆ.












Click it and Unblock the Notifications