Get Updates
Get notified of breaking news, exclusive insights, and must-see stories!

ಭಾರತ- ಪಾಕ್ ಪಂದ್ಯ ನೋಡಲು ಆಗಮಿಸಿದ್ದ ವಿಜಯ್ ಮಲ್ಯ

ಭಾನುವಾರ (ಜೂನ್ 5) ನಡೆದ ಭಾರತ- ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ನೋಡಲು ಉದ್ಯಮಿ ವಿಜಯ್ ಮಲ್ಯ ಅವರು ಆಗಮಿಸಿದ್ದರೇ? ಎಂಬುದೊಂದು ಅನುಮಾನ ವ್ಯಕ್ತವಾಗಿದೆ.

ಬರ್ಮಿಂಗ್ ಹ್ಯಾಮ್, ಜೂನ್ 5: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಭಾನುವಾರ (ಜೂನ್ 4) ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯವನ್ನು ನೋಡಲು ಉದ್ಯಮಿ ವಿಜಯ್ ಮಲ್ಯ ಆಗಮಿಸಿದ್ದರೇ? ಇಂಥದ್ದೊಂದು ಪ್ರಶ್ನೆ ಈಗ ಎಲ್ಲೆಡೆ ಹರಿದಾಡುತ್ತಿದೆ.

ಇದಕ್ಕೆ ಮೂಲ ಕಾರಣ, ಕ್ರೀಡಾಂಗಣದಲ್ಲಿ ಮಲ್ಯ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ನೋಡುತ್ತಿರುವ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಜತೆಗೆ ಕ್ರೀಡಾಂಗಣದ ಬೇರೊಂದು ಕಡೆ ಮಾತುಕತೆ ನಡೆಸುತ್ತಿರುವ ಚಿತ್ರ.[In Pics : ಪಾಕ್ ವಿರುದ್ಧ ಜಯದ ನಗೆ ಬೀರಿದ ಭಾರತ]

Vijay Mallya spotted at India-Pakistan Champions Trophy game in Birmingham

ಈ ಎರಡೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೆ, ಆ ವ್ಯಕ್ತಿ ವಿಜಯ್ ಮಲ್ಯನಾ ಅಥವಾ ಬೇರೆಯವರಾ ಎಂಬುದಿನ್ನೂ ಖಚಿತವಾಗಿಲ್ಲ ಎಂದು ಇಂಡಿಯಾ ಟುಡೇ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ. @nikster007 ಎಂಬ ಟ್ವಿಟರ್ ಅಕೌಂಟ್ ನಲ್ಲಿ ಪ್ರಕಟಿಸಲ್ಪಟ್ಟಿರುವ ಈ ಫೋಟೋಗಳನ್ನು ಆಧರಿಸಿ ಇಂಡಿಯಾ ಟುಡೇ ಈ ವರದಿ ಮಾಡಿದೆ. ಆದರೆ, ಹಲವಾರು ಮಾಧ್ಯಮಗಳು ಅವರನ್ನು ವಿಜಯ್ ಮಲ್ಯ ಎಂದೇ ಸ್ಪಷ್ಟವಾಗಿ ಹೇಳಿವೆ.

ಭಾರತೀಯ ಬ್ಯಾಂಕುಗಳಿಗೆ ಸುಮಾರು 6 ಸಾವಿರ ಕೋಟಿ ರು. ಗಳಷ್ಟು ಸಾಲವನ್ನು ತೀರಿಸದೇ ದೇಶದಿಂದ ಹೊರಹೋಗಿರುವ ಆಪಾದನೆ ಎದುರಿಸುತ್ತಿರುವ ಮಲ್ಯ, ನೆಲೆಸಿರುವುದು ಲಂಡನ್ ನಲ್ಲೇ. ಈಗ ಚಾಂಪಿಯನ್ಸ್ ಟ್ರೋಫಿ ಕೂಡ ಅಲ್ಲೇ ನಡೆಯುತ್ತಿದೆ. ಮೊದಲಿನಿಂದಲೂ ಭಾರತೀಯ ಕ್ರಿಕೆಟ್ ನ ಅಪ್ಪಟ ಅಭಿಮಾನಿಯಾಗಿರುವ ಅವರು, ಹೈ ವೋಲ್ಟೇಜ್ ಪಂದ್ಯವೆನಿಸಿದ್ದ ಭಾರತ- ಪಾಕಿಸ್ತಾನ ನಡುವಿನ ಸೆಣಸನ್ನು ನೋಡಲು ಆಗಮಿಸಿದರೂ ಅಚ್ಚರಿಪಡಬೇಕಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+