ಅರೆಸ್ಟ್ ಆದ 3 ಗಂಟೆಯೊಳಗೆ ಮಲ್ಯಗೆ ಜಾಮೀನು!!!

Posted By:
Subscribe to Oneindia Kannada

ಲಂಡನ್, ಏಪ್ರಿಲ್ 18: ಆರ್ಥಿಕ ಅವ್ಯವಹಾರಗಳ ಪ್ರಕರಣದಲ್ಲಿ ಮಂಗಳವಾರ ಬೆಳಗ್ಗೆ ಲಂಡನ್ ನಲ್ಲಿ ಬಂಧನಕ್ಕೊಳಗಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಜಾಮೀನು ಸಿಕ್ಕಿದೆ.

ಭಾರತದಲ್ಲಿನ ಸುಮಾರು 17 ಬ್ಯಾಂಕುಗಳಲ್ಲಿ ಸುಮಾರು 9 ಸಾವಿರ ಕೋಟಿ ರು.ನಷ್ಟು ಸಾಲ ಪಡೆದು ಲಂಡನ್ ನಲ್ಲಿ ತಲೆ ಮರೆಸಿಕೊಂಡಿದ್ದ ಅವರನ್ನು ಮಂಗಳವಾರ ಬೆಳಗ್ಗೆ ಸ್ಕಾಂಟ್ಲೆಂಡ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದ ವಿಚಾರಣೆಯಲ್ಲಿ ಮಲ್ಯ ಅವರು ಭಾರತಕ್ಕೆ ಹಸ್ತಾಂತರವಾಗಬೇಕೇ ಅಥವಾ ಲಂಡನ್ ನಲ್ಲೇ ಅವರು ವಿಚಾರಣೆ ಎದುರಿಸಬೇಕೇ ಎಂಬುದು ನಿರ್ಧಾರವಾಗಬೇಕಿತ್ತು.[ವಿಜಯ್ ಮಲ್ಯ ಯುಕೆಯಲ್ಲಿ ಬಂಧನಕ್ಕೊಳಗಾಗಿದ್ದು ಹೇಗೆ?]

Vijay Mallya granted bail by London Court

ಆದರೆ, ಈ ಎಲ್ಲದಕ್ಕೂ ಮೊದಲೇ ಅವರಿಗೆ ಜಾಮೀನು ಸಿಕ್ಕಿದ್ದು, ಮಲ್ಯ ಅವರನ್ನು ಭಾರತ ಸರ್ಕಾರ ಹೇಗೆ ತನ್ನ ವಶಕ್ಕೆ ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Liquor Baron Vijay Mallya who was arrested on April 18th, 2017 in London under money laundering case, has been given bail by London Court soon after his arrest.
Please Wait while comments are loading...