ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮೆಯ ಹಣಕ್ಕಾಗಿ ತನ್ನ ಕೈಕಾಲು ಕತ್ತರಿಸಿಕೊಂಡ ಮಹಿಳೆ!

By Prasad
|
Google Oneindia Kannada News

ಹನೋಯಿ, ಆಗಸ್ಟ್ 25 : ವಿಮಾ ಕಂಪನಿಯಿಂದ ಭಾರೀ ಮೊತ್ತದ ಹಣವನ್ನು ಪಡೆಯುವ ಉದ್ದೇಶದಿಂದ ಮಹಿಳೆಯೊಬ್ಬಳು ತನ್ನ ದೇಹದ ಅಂಗಗಳನ್ನೇ ಕತ್ತರಿಸಿಕೊಂಡು, ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದ ವಿಲಕ್ಷಣ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.

30 ವರ್ಷದ ಮಹಿಳೆ ಲಿ ತಿನ್ ಎನ್ ಎಂಬಾಕೆ ತನಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ನಂತರ ಒಂದೂವರೆ ಲಕ್ಷ ಡಾಲರ್ ನಷ್ಟು ಜೀವವಿಮೆಯ ಹಣ ತನಗೆ ನೀಡಬೇಕೆಂದು ಅರ್ಜಿ ಗುಜರಾಯಿಸಿದ್ದಾಳೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ ತಿಳಿದುಬಂದ ವಿಚಾರವೇನೆಂದರೆ, ಆಕೆಗೆ ಆದ ಗಾಯ ರೈಲು ಅಪಘಾತದಿಂದಲ್ಲವೆಂಬುದು. ಇನ್ನೂ ಆಘಾತಕಾರಿ ಸಂಗತಿಯೇನೆಂದರೆ, ತನ್ನ ಕೈ ಮತ್ತು ಕಾಲಿಗೆ ಗಾಯ ಮಾಡಲು ಆಕೆ ವ್ಯಕ್ತಿಯೊಬ್ಬನಿಗೆ 2,200 ಡಾಲರ್ ಹಣ ನೀಡಿದ್ದಳು! [ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?]

Vietnam woman cuts her limbs to claim insurance money

ರೈಲು 'ಅಪಘಾತ'ಕ್ಕೆ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಡೋನ್ ವಾನ್ ಡಿ ಎಂಬಾತನೇ ಆ ಮಹಿಳೆಯ ಕೈಕಾಲನ್ನು ಕತ್ತರಿಸಿದ್ದ. ನಂತರ ಅಪಘಾತವಾಗಿದೆ ಎಂದು ನಾಟಕವಾಡಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದ ಎಂದು ಪೀಪಲ್ಸ್ ಪೊಲೀಸ್ ನ್ಯೂಸ್ ಪೇಪರ್ ವರದಿ ಮಾಡಿದೆ.

ಇದು ಇನ್ಶೂರನ್ಸ್ ಕಂಪನಿಗೆ ಟೋಪಿ ಹಾಕಲು ಮಾಡಿದ ಪಕ್ಕಾ ಪ್ಲಾನ್. ಇಂಥ ಘಟನೆ ವಿಟೆಟ್ನಾಂನಲ್ಲಿ ಮಾತ್ರ ಜರುಗಲು ಸಾಧ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಕುಹಕವಾಡುತ್ತಿದ್ದಾರೆ.

ಒಂದು ಕಾಲು, ಒಂದು ಕೈ ಕಳೆದುಕೊಂಡಿದ್ದು ಮಾತ್ರವಲ್ಲ, ವಿಮೆ ಹಣವನ್ನೂ ಕಳೆದುಕೊಂಡು ಜೈಲು ಪಾಲಾಗಬೇಕಾದ ಸ್ಥಿತಿ ಆ ಮಹಿಳೆಗೆ ಈಗ ಬಂದಿದೆ. ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿದ್ದರಿಂದ ಆ ಮಹಿಳೆ ಇಂಥ ಕುಕೃತ್ಯಕ್ಕೆ ಇಳಿದಿದ್ದಾಳೆ. [ರಿಲಯನ್ಸ್ ನಿಂದ ಕಾರಿನ ವಿಮೆ ಮಾಡಿಸಿ, ನಿರಾಳವಾಗಿರಿ]

English summary
A woman in Vietnam has admitted to have paid for cutting off her foot and part of her arm so that she could claim insurance money. She has been caught and jailed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X