ರನ್‌ವೇನಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪ್ರಯಾಣಿಕರ ವಿಮಾನ: ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವು
ಪೆರುವಿನ ರನ್‌ವೇನಲ್ಲಿ ಪ್ಯಾಸೆಂಜರ್ ಜೆಟ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದಾರೆಂದು ಎನ್‌ಡಿಟಿವಿ ವರದಿ ಮಾಡಿದೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪೆರುವಿನ ಜಾರ್ಜ್ ಚಾವೆಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಶುಕ್ರವಾರ ಟೇಕಾಫ್ ಆಗುತ್ತಿದ್ದಾಗ ಲಾಟಮ್ (LATAM) ಏರ್‌ಲೈನ್ಸ್ ವಿಮಾನ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ವಿಮಾನ ಸಿಬ್ಬಂದಿ ಸಾವನ್ನಪ್ಪಿಲ್ಲ ಎಂದು ಏರ್‌ಲೈನ್ಸ್ ತಿಳಿಸಿದೆ. ವಿಮಾನದಲ್ಲಿ 102 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಪ್ರಕಾರ ರನ್‌ವೇಯಲ್ಲಿ ಪ್ಯಾಸೆಂಜರ್ ಜೆಟ್ ಟ್ರಕ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಅಪಘಾತದ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ.

In PERU 🇵🇪
— -🇦🇺|🇺🇸- (@KINGDEMANACATOS) November 19, 2022
A #LATAM Airlines plane taking off from Lima's international airport struck a firetruck on the runway and caught fire on Saturday. Authorities said the plane's passengers and crew were all safe, but two firefighters in the truck were killed. #Twitter #latamperu pic.twitter.com/ErXhhwvwZ5
ಜಾರ್ಜ್ ಚಾವೆಜ್ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಕಂಪನಿಯಾದ ಲಿಮಾ ಏರ್‌ಪೋರ್ಟ್ ಪಾರ್ಟ್‌ನರ್ಸ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಘಟನೆ ಸಂಭವಿಸಿದ ವೇಳೆ ಎಲ್ಲಾ ವಿಮಾನ ಸೇವೆಯನ್ನು ಕೊಂಚ ಸಮಯದವರೆಗೆ ಸ್ಥಗಿತಗೊಳಿಸಲಾಗಿತ್ತು ಎಂದು ಹೇಳಿದೆ. "ನಮ್ಮ ತಂಡಗಳು ಎಲ್ಲಾ ಪ್ರಯಾಣಿಕರಿಗೆ ಅಗತ್ಯ ಕಾಳಜಿಯನ್ನು ಒದಗಿಸುತ್ತಿವೆ. ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ" ಎಂದು ಕಂಪನಿ ಹೇಳಿದೆ.
El avión accidentado pertenece a la aerolínea @LATAMAirlines.pic.twitter.com/VYRxRrtJVg
— Rosendo Chavarría (@RosendoChV) November 18, 2022
ವಿಮಾನದಲ್ಲಿದ್ದ 102 ಪ್ರಯಾಣಿಕರ ಪೈಕಿ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಲಾಟಮ್ ಎ320 ವಿಮಾನವನ್ನು ಸ್ಥಳಾಂತರಿಸುವಾಗ 36 ಪ್ರಯಾಣಿಕರು ಗಾಯಗೊಂಡಿದ್ದಾರೆ. ವಿಮಾನ ಹಾರಾಟದ ವೇಳೆ ಅಗ್ನಿಶಾಮಕ ವಾಹನ ರನ್‌ವೇಗೆ ಪ್ರವೇಶಿಸಲು ಅನುಮತಿಯನ್ನು ಹೊಂದಿಲ್ಲ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳುತ್ತವೆ.












Click it and Unblock the Notifications