ವಿಡಿಯೋ: ಪಾಕಿಸ್ತಾನಿಗಳ ಕಣ್ಣಿಗೆ ಕಾಣಿಸಿಕೊಂಡ ಏಲಿಯನ್ಸ್ ವಾಹನ
ಶ್ರೀನಗರ ಫೆಬ್ರವರಿ 23: ವಿಶ್ವದಾದ್ಯಂತ ಅನ್ಯಗ್ರಹ ಜೀವಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಮೆರಿಕದಲ್ಲಿ ಅನ್ಯಗ್ರಹ ಜೀವಿಗಳ ವಾಹನ ಅಂದರೆ UFO ಕಂಡುಬಂದಿದೆ ಎಂದು ಅನೇಕ ಬಾರಿ ಹೇಳಲಾಗಿದೆ. ಆದರೆ ಇತರ ದೇಶಗಳ ಜನರು ಇದನ್ನು ಅಮೆರಿಕದ ಪ್ರಚಾರ ಎಂದು ಕರೆಯುತ್ತಾರೆ. ಆದರೆ ಈಗ ಅದು ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲೂ ಕಾಣಿಸಿಕೊಂಡಿದೆ. ಪಾಕಿಸ್ತಾನದಲ್ಲಿ UFO ಕಂಡುಬಂದಿದೆ ಎಂದು ಹೇಳಲಾಗಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ ಇಸ್ಲಾಮಾಬಾದ್ ದಿಂದ ಬಂದಿದೆ. ಅಲ್ಲಿ ಹಗಲು ಹೊತ್ತಿನಲ್ಲಿ ಆಕಾಶದಲ್ಲಿ ಒಂದು ನಿಗೂಢ ವಸ್ತು ಕಾಣಿಸಿಕೊಂಡಿದೆ. ಇದನ್ನು UFO ಎಂದು ಹೇಳಲಾಗುತ್ತಿದೆ. ಆ ವಸ್ತು ಸ್ವಲ್ಪ ಸಮಯದ ಬಳಿಕ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ. ಈ ವಿಡಿಯೋ ಕಂಡು ಅಲ್ಲಿನ ಜನರು ಹಾಗೂ ಅಧಿಕಾರಿಗಳು ಆಶ್ಚರ್ಯಗೊಂಡಿದ್ದಾರೆ.

ಪಾಕಿಸ್ತಾನಿಗಳ ಕಣ್ಣಿಗೆ ಕಾಣಿಸಿಕೊಂಡ ಏಲಿಯನ್ಸ್ ವಾಹನ
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆಕಾಶದಲ್ಲಿ ಕಂಡ ವಸ್ತು ಅಸಾಮಾನ್ಯವಾಗಿತ್ತು. ಅದರ ಆಕಾರ ತ್ರಿಕೋನವಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಅದು ಇಸ್ಲಾಮಾಬಾದ್‌ನ ಆಕಾಶದಲ್ಲಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ 33 ವರ್ಷದ ಯುವಕನೊಬ್ಬ ಆ ನಿಗೂಢ ವಸ್ತುವನ್ನು ಸುಮಾರು ಎರಡು ಗಂಟೆಗಳ ಕಾಲ ಆಕಾಶದಲ್ಲಿ ಸುಳಿದಾಡುವುದನ್ನು ನೋಡಿದೆ ಎಂದು ಹೇಳಿದ್ದಾನೆ. ಇದರ ಗಾತ್ರವು UFO ಯಂತೆಯೇ ಇತ್ತು. ಅದು ಭೂಮಿಗೆ ತುಂಬಾ ಹತ್ತಿರವಾಗಿತ್ತು. ಹೀಗಾಗಿ ಜನರು ಅದರ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು ಎಂದಿದ್ದಾನೆ.
ಕತ್ತಲಾದ ನಂತರ ಕಣ್ಮರೆ
ಯೂಟ್ಯೂಬ್ ಬ್ಲಾಗರ್ ಒಬ್ಬರು ಇದು ಇಲ್ಲಿಯವರೆಗೆ ನೋಡಿದ UFO ಎಂದು ಹೇಳಿದ್ದಾರೆ. ಅವನು ಸುಮಾರು ಎರಡು ಗಂಟೆಗಳ ಕಾಲ ತನ್ನ ಸ್ವಂತ ಕಣ್ಣುಗಳಿಂದ ಅದನ್ನು ನೋಡಿದೆನು ಎಂದು ಹೇಳಿಕೊಂಡಿದ್ದಾರೆ. ಸುಮಾರು ಎರಡು ಗಂಟೆಗಳ ನಂತರ ಕತ್ತಲೆಯಾದಾಗ ಅದು ಕಾಣಿಸಲಿಲ್ಲ. ಆ ನಿಗೂಢ ವಸ್ತು ಏನೆಂದು ನನಗೆ ಇನ್ನೂ ತಿಳಿದಿಲ್ಲ. ಬರಿಗಣ್ಣಿಗೆ ಕಪ್ಪು ದುಂಡಗಿನ ಬಂಡೆಯಂತೆ ಕಾಣುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಅದರ ಸುಮಾರು 13 ನಿಮಿಷಗಳ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹಾಕಿದ್ದಾರೆ.

ಇಸ್ಲಾಮಾಬಾದ್ ಒಂದು ಐಷಾರಾಮಿ ಪ್ರದೇಶ
ಕೆಲವರು ಇದನ್ನು ಡ್ರೋನ್ ಎಂದು ಕರೆದಿದ್ದಾರೆ. ಈ ಬಗ್ಗೆ ಬ್ಲಾಗರ್ ನನ್ನ ಬಳಿ ಡ್ರೋನ್ ಇದೆ. ಅದು ಇದ್ದಿದ್ದರೆ ನನಗೆ ತಿಳಿಯುತ್ತಿತ್ತು ಎಂದು ಹೇಳಿದ್ದಾರೆ. ಇದಲ್ಲದೆ, ಇಸ್ಲಾಮಾಬಾದ್ ಒಂದು ಐಷಾರಾಮಿ ಪ್ರದೇಶವಾಗಿದೆ. ಅಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸೇನೆ, ಪೊಲೀಸ್, ಆಡಳಿತದ ನಾಯಕರು ವಾಸಿಸುತ್ತಾರೆ. ಹೀಗಿರುವಾಗ ರಹಸ್ಯ ಡ್ರೋನ್ ಅಲ್ಲಿಗೆ ಇಷ್ಟು ಸಮಯ ಹಾರಾಡಲು ಸಾಧ್ಯವೇ ಇಲ್ಲ. ಹಾಗಾಗಿ ಸರಕಾರ ಈ ಬಗ್ಗೆ ತನಿಖೆ ನಡೆಸಬೇಕು ಎನ್ನಲಾಗುತ್ತಿದೆ.

ಬ್ರಿಟಿಷ್ ಗಗನಯಾತ್ರಿ ಡಾ. ಹೆಲೆನ್ ಶರ್ಮಾನ್
ಅನ್ಯಗ್ರಹ ಜೀವಿಗಳು ಇರುವುದು ಸತ್ಯ, ಏಲಿಯನ್ ಗಳು ನಮ್ಮ ಜೊತೆಗೆ ಜೀವಿಸುತ್ತಿರಬಹುದು ಎಂದು ಮೊದಲ ಬ್ರಿಟಿಷ್ ಗಗನಯಾತ್ರಿ ಡಾ. ಹೆಲೆನ್ ಶರ್ಮಾನ್ ಅವರು ಕಳೆದ ತಿಂಗಳು ಹೇಳಿದ್ದರು. ಸುಮಾರು 28 ವರ್ಷಗಳ ಹಿಂದೆ ಗಗನಯಾನ ಮಾಡಿದ್ದ ಹೆಲೆನ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಏಲಿಯನ್ ಗಳು ನಮ್ಮ ನಡುವೆ ಇದ್ದರೂ ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು ಎಂದು ಹೇಳಿದ್ದಾರೆ. ಅಬ್ಸರ್ವರ್ ಮ್ಯಾಗಜೀನ್ ಜೊತೆ ಮಾತನಾಡುತ್ತಾ, ಬಾಹ್ಯಾಕಾಶದಲ್ಲಿ ಲಕ್ಷಾಂತರ ನಕ್ಷತ್ರಗಳಿದ್ದು, ನಮ್ಮ ಸೂರ್ಯನಂತೆ ಬೇರೆ ನಕ್ಷತ್ರಗಳಿದ್ದು, ಜೀವಿಗಳನ್ನು ಕಾಣಬಹುದಾಗಿದೆ ಎಂದಿದ್ದಾರೆ.ಕಾರ್ಬನ್, ನೈಟ್ರೋಜನ್ ಮಿಶ್ರಿತ ಜೀವಿಯಾಗಿರಲು ಸಾಧ್ಯವಿಲ್ಲ. ಮನುಷ್ಯರಿಗಿಂತ ಬೇರೆ ಸ್ವರೂಪದಲ್ಲಿರುವುದರಿಂದ ನಮ್ಮ ಕಣ್ಣಿಗೆ ಏಲಿಯನ್ ಗಳು ಕಾಣಿಸುತ್ತಿಲ್ಲ ಎಂದು ಹೇಳಿದರು.












Click it and Unblock the Notifications